ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ವಾರ್ಡ್​​ ನಂಬರ್​​​ 14ರಲ್ಲಿ ಕಾಮಗಾರಿ ವಿಳಂಬ ನೀತಿ ಖಂಡಿಸಿ ಕಾಂಗ್ರೆಸ್ ಪಕ್ಷದ  ಪುರಸಭಾ  ಸದಸ್ಯ ಬೀರಪ್ಪ ಯಂಕಂಚಿ ಅವರು ದಾರಾಕಾರ ಮಳೆ ಸುರಿಯುತ್ತಿದ್ದರು ಕೂಡಾ ತಮ್ಮ ಆರೋಗ್ಯವನ್ನು ಲೆಕ್ಕಿಸದೆ  2 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಸಂಬಂಧ ಪುರಸಭೆಯ ಮುಖ್ಯಾಧಿಕಾರಿಗಳು ಮಹಾಂತೇಶ್ ಕೌಲಾಪೂರ  ಸ್ಥಳಕ್ಕೆ ಭೇಟಿ ನೀಡಿ ಅವರನ್ನು ಮನ ಒಲಿಸಲಿಕ್ಕೆ  ಪ್ರಯತ್ನಿಸಿದರೂ ಕೂಡಾ ಸತ್ಯಾಗ್ರಹ ಹಿಂಪಡೆಯಲಿಲ್ಲ.




ನಂತರ   ಬೀರಪ್ಪ ಮಾತನಾಡಿ, ಹಲವು ದಿನಗಳಿಂದ ನಮ್ಮ ವಾರ್ಡ್ ನಂಬರ್ 14ರಲ್ಲಿ ಯಾವುದೇ ಅಭಿವೃದ್ಧಿ  ಕಾಮಗಾರಿಗಳು ಆಗಿಲ್ಲ , ಇದರಿಂದ  ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ.  ಇದೇ ತಿಂಗಳ ಬರುವ 20 ತಾರೀಖು  ದಡ್ಡಿ ಸಿದ್ದೇಶ್ವರ ದೇವರ ಜಾತ್ರೆ ಇರುವ ಕಾರಣದಿಂದ  ತಕ್ಷಣ ಬೀದಿ ದೀಪ, ಚರಂಡಿ, ರಸ್ತೆ ಕಾಮಗಾರಿಗಳನ್ನ ಪೂರ್ಣಮಾಡಬೇಕು. ಅಲ್ಲಿಯವರೆಗೂ ಕ ಈ ಧರಣಿ ಹಿಂದಪಡೆಯಲು ಸಾಧ್ಯವಿಲ್ಲ  ಎಂದು ಹೇಳಿದರು. ಏನೇ ಆಗಲಿ ಅಧಿಕಾರಿಗಳು ತಾರತಮ್ಯ ಮಾಡುವುದನ್ನು ಬಿಟ್ಟು, ನೆನಗುದಿಗೆ ಬಿದ್ದಿರು ಕಾಮಗಾರಿಯನ್ನು ಪೂರ್ಣ ಮಾಡಬೇಕೆಂಬುದು ಆಗ್ರಹಿಸಿದ್ದಾರೆ.

ವರದಿ: ಶಿವರಾಜ್ ಎಂ ನೇಸರಗಿ ,ಅಥಣಿ

Please follow and like us:
0
http://bp9news.com/wp-content/uploads/2018/06/Karnatakada-Miditha-24.jpeghttp://bp9news.com/wp-content/uploads/2018/06/Karnatakada-Miditha-24-150x150.jpegBP9 Bureauಪ್ರಮುಖಬೆಳಗಾವಿಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ವಾರ್ಡ್​​ ನಂಬರ್​​​ 14ರಲ್ಲಿ ಕಾಮಗಾರಿ ವಿಳಂಬ ನೀತಿ ಖಂಡಿಸಿ ಕಾಂಗ್ರೆಸ್ ಪಕ್ಷದ  ಪುರಸಭಾ  ಸದಸ್ಯ ಬೀರಪ್ಪ ಯಂಕಂಚಿ ಅವರು ದಾರಾಕಾರ ಮಳೆ ಸುರಿಯುತ್ತಿದ್ದರು ಕೂಡಾ ತಮ್ಮ ಆರೋಗ್ಯವನ್ನು ಲೆಕ್ಕಿಸದೆ  2 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಸಂಬಂಧ ಪುರಸಭೆಯ ಮುಖ್ಯಾಧಿಕಾರಿಗಳು ಮಹಾಂತೇಶ್ ಕೌಲಾಪೂರ  ಸ್ಥಳಕ್ಕೆ ಭೇಟಿ ನೀಡಿ ಅವರನ್ನು ಮನ ಒಲಿಸಲಿಕ್ಕೆ  ಪ್ರಯತ್ನಿಸಿದರೂ ಕೂಡಾ ಸತ್ಯಾಗ್ರಹ ಹಿಂಪಡೆಯಲಿಲ್ಲ. var domain = (window.location...Kannada News Portal