ಬೆಳಗಾವಿ: ಕರ್ನಾಟಕದ‌ ಬಿಜೆಪಿಯಲ್ಲಿ ಹೆಳಿಕೊಳ್ಳುವಂತ ಮುಖಂಡರಿಲ್ಲ ಏಕ ಯಡ್ಡಿ, ದೋ ರೆಡ್ಡಿಗಳು ಮಾತ್ರ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕರಾವ್​​​​ ಚೌಹಾಣ್​​​ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನನಗೆ ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರಬೇಡಿ ಅಂತ ಹೇಳಿದ್ರು ಆದರೆ ನಾನು ಅವರ ಮಾತಿಗೆ ಕಿವಿಗೊಡದೆ ಇಲ್ಲಿಗೆ ಬಂದೆ. ಬಿಜೆಪಿ ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡದೆ, ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಇಲ್ಲಿಯವರೆಗೆ ಅಂಗೈಯಲ್ಲಿ ಚಂದ್ರ ತೋರಿಸುವ ಹಾಗೆ ನಂಬಿದ ಬಿಜೆಪಿ ಪಕ್ಷದವರಿಂದ ಅಭಿವೃದ್ಧಿ ನೀರಿಕ್ಷಿಸುವುದು ಅಸಾಧ್ಯ ಮಾತು. ಕಳೆದ ನಾಲ್ಕು ವರ್ಷಗಳಲ್ಲಿ‌ ಮಹಾರಾಷ್ಟ್ರ ರಾಜ್ಯವನ್ನು ದಿವಾಳಿ ಮಾಡಿದವರಿಗೆ ಕರ್ನಾಟಕ ದಿವಾಳಿ ಮಾಡಲು ಬಿಡಬೇಡಿ. ಅಭಿವೃದ್ಧಿ ಪರವಾಗಿರುವ ಸಿದ್ದರಾಮಯ್ಯ ‌ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ‌ ಮಾಡಲು ಕಾಂಗ್ರೆಸ್ ‌ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು. ಕರ್ನಾಟಕದ‌ ಬಿಜೆಪಿಯಲ್ಲಿ ಹೆಳಿಕೊಳ್ಳುವಂತ ಮುಖಂಡರಿಲ್ಲ ಏಕ ಯಡ್ಡಿ, ದೋ ರೆಡ್ಡಿಗಳು ಮಾತ್ರ ಉಳಿದಿದ್ದಾರೆಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

ಬಡವರಿಗೆ ಹಲವಾರು ಯೋಜನೆ ನೀಡಿ, ಸಾಲದ ಸುಳಿಗೆ ಸಿಕ್ಕಿದ್ದ ರೈತರಿಗೆ ಸಾಲಮನ್ನಾ ಮಾಡಿ ಅಭಿವೃದ್ಧಿ ಹರಿಕಾರ ಎನಿಸಿಕೊಂಡ ಸಿದ್ದರಾಮಯ್ಯ ಅವರು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೂತ್ತಿದ್ದಾರೆ.

ಆದರೆ ಬಿಜೆಪಿ ಅವರು ದೇಶದಲ್ಲಿ ಅಶಾಂತಿ ಮೂಡುವಂತ ಕೆಲಸ ಮಾಡುತ್ತಿದ್ದಾರೆ. ಚಹಾ ಮಾರಿದವರಿಂದ ದೇಶ ಮಾರುವುದು ಬಹಳ ದೊಡ್ಡ ಕೆಲಸವೇನಲ್ಲ ಎಂದು ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್​​, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-05-at-4.14.21-PM-1024x768.jpeghttp://bp9news.com/wp-content/uploads/2018/05/WhatsApp-Image-2018-05-05-at-4.14.21-PM-150x150.jpegBP9 Bureauಪ್ರಮುಖಬೆಳಗಾವಿರಾಜಕೀಯಬೆಳಗಾವಿ: ಕರ್ನಾಟಕದ‌ ಬಿಜೆಪಿಯಲ್ಲಿ ಹೆಳಿಕೊಳ್ಳುವಂತ ಮುಖಂಡರಿಲ್ಲ ಏಕ ಯಡ್ಡಿ, ದೋ ರೆಡ್ಡಿಗಳು ಮಾತ್ರ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕರಾವ್​​​​ ಚೌಹಾಣ್​​​ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನನಗೆ ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರಬೇಡಿ ಅಂತ ಹೇಳಿದ್ರು ಆದರೆ ನಾನು ಅವರ ಮಾತಿಗೆ ಕಿವಿಗೊಡದೆ ಇಲ್ಲಿಗೆ ಬಂದೆ. ಬಿಜೆಪಿ ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಅಭಿವೃದ್ಧಿ...Kannada News Portal