ಬೆಳಗಾವಿ:  ಸದ್ಯ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ರಾಜಕೀಯ ಆಟದ ಎಲ್ಲರ ಚಿತ್ತ ನೆಟ್ಟಿದೆ. ಜಾರಕಿಹೊಳಿ ಸಹೋದರು ಮತ್ತು  ಲಕ್ಷ್ಮೀ ಹೆಬ್ಬಾಳ್ಕರ್​​​​ ನಡುವಿನ ರಾಜಕೀಯ ಗುದ್ದಾಟಕ್ಕೆ ಕಾಂಗ್ರೆಸ್​​​ ಹೈಕಮಾಂಡ್​​ ಸದ್ಯದ ಮಟ್ಟಿಗೆ ತೆರೆ ಎಳೆದಿದೆ. ಈ ರಾಜಕೀಯ ಗುದ್ದಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದು ಮೇಲ್ನೊಟಕ್ಕೆ ಕಂಡುಬಂದರು, ಜಾರಕಿಹೊಳಿ ಸಹೋದರರೇ ನಿಜವಾಗಿ ಗೆದ್ದಿದ್ದಾರೆ ಎಂದು ವಿಮರ್ಶಿಸಲಾಗುತ್ತಿದೆ .ಇದಕ್ಕೆ ಕಾರಣ ಕೂಡ ಇದೆ!

ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಸತೀಶ್​ ಜಾರಕಿಹೊಳಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮೂಲಕ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್​​ ಸತೀಶ್​ ಜಾರಕಿಹೊಳಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿದೆ. ಇದೇ ಹಿನ್ನೆಲೆಯಲ್ಲಿ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಸ್ಥಾನದ ಬಗ್ಗೆ ತಮ್ಮ ಪಟ್ಟನ್ನು ಸತೀಶ್ ಜಾರಕಿಹೊಳಿ ಸಡಿಲಿಸಿದ್ದಾರಂತೆ.

ಇನ್ನು, ಚಿಕ್ಕಪುಟ್ಟ ಅಸಮಾಧಾನಗಳನ್ನು ಬದಿಗೊತ್ತಿ, ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕೂಡ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸತೀಶ್ ಜಾರಕಿಹೊಳಿಗೆ ತಿಳಿಸಿದೆ. ಆದರೆ ಕಾಂಗ್ರೆಸ್ ಪಕ್ಷದ​​ ಈ ಕ್ರಮದಿಂದ ಜಾರಕಿಹೊಳಿ ಬ್ರದರ್ಸ್ ತಣ್ಣಗಾಗ್ತಾರಾ? ಅಥವಾ ಬೇರೊಂದು ಕ್ಯಾತೆ ತೆಗೆಯುತ್ತಾರಾ  ಎಂದು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/09/collage-1-6.jpghttp://bp9news.com/wp-content/uploads/2018/09/collage-1-6-150x150.jpgBP9 Bureauಪ್ರಮುಖಬೆಳಗಾವಿರಾಜಕೀಯಬೆಳಗಾವಿ:  ಸದ್ಯ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ರಾಜಕೀಯ ಆಟದ ಎಲ್ಲರ ಚಿತ್ತ ನೆಟ್ಟಿದೆ. ಜಾರಕಿಹೊಳಿ ಸಹೋದರು ಮತ್ತು  ಲಕ್ಷ್ಮೀ ಹೆಬ್ಬಾಳ್ಕರ್​​​​ ನಡುವಿನ ರಾಜಕೀಯ ಗುದ್ದಾಟಕ್ಕೆ ಕಾಂಗ್ರೆಸ್​​​ ಹೈಕಮಾಂಡ್​​ ಸದ್ಯದ ಮಟ್ಟಿಗೆ ತೆರೆ ಎಳೆದಿದೆ. ಈ ರಾಜಕೀಯ ಗುದ್ದಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದು ಮೇಲ್ನೊಟಕ್ಕೆ ಕಂಡುಬಂದರು, ಜಾರಕಿಹೊಳಿ ಸಹೋದರರೇ ನಿಜವಾಗಿ ಗೆದ್ದಿದ್ದಾರೆ ಎಂದು ವಿಮರ್ಶಿಸಲಾಗುತ್ತಿದೆ .ಇದಕ್ಕೆ ಕಾರಣ ಕೂಡ ಇದೆ! var domain = (window.location != window.parent.location)? document.referrer...Kannada News Portal