ಅಥಣಿ
: ವಿಚಾರವಾದಿಗಳು ಬುದ್ಧಿ ಜೀವಿಗಳು ವಿಜ್ಞಾನಿಗಳು ಸೃಷ್ಟಿಯ ಒಂದು ಭಾಗವನ್ನು ಕೂಡ ಅರಿತಿಲ್ಲ. ವಿಜ್ಞಾನ ಮುಂದುವರೆದರೂ ಕೆಲವು ಪವಾಡಗಳ ಅರಿಯಲು ಸಾಧ್ಯವಾಗಿಲ್ಲ..

ಪವಾಡ ಬಯಲು ಮಾಡುವವರು, ದೇವರೆ ಇಲ್ಲ ಎಂದು ನಾಸ್ತಿಕರು ಅಭಿಪ್ರಾಯಪಟ್ಟಿದ್ದಾರೆ, ಮಹಾರಾಷ್ಟ್ರದ  ಹುಲಿಜಂತಿ ಗ್ರಾಮದಲ್ಲಿ ಇರುವ ಹಾಲು ಮತದ ಧರ್ಮಕಾಶಿ ಮಾಳಿಂಗರಾಯನ ದೇವಸ್ಥಾನದಲ್ಲಿ ಪ್ರತಿ ದೀಪಾವಳಿ ಅಮವಾಸ್ಯೆಯ ರಾತ್ರಿ ಸಾಕ್ಷಾತ್ ಶಿವ ಪಾರ್ವತಿಯರೆ  ಬಂದು ದೇವಸ್ಥಾನದ ಗೋಪುರದ ಕಳಕ್ಕೆ ಮುಂಡಾಸು (ರುಮಾಲು) ಸುತ್ತವರು, ಇದು ಕೆಲ ದಿನಗಳ ನಂತರ ಅದಾಗೆ ಮಾಯ ಆಗತ್ತ, ಇಂದು ಬೆಳಗ್ಗೆ  ಹುಲಿಜಂತಿಯಲ್ಲಿ ಮಾಳಿಂಗರಾಯನ ಮುಂಡಾಸು ಸುತ್ತಿರುವುದು ಕಾಣಬಹುದಾಗಿದೆ. ಇದು ಬಯಲಲ್ಲಿ ಎಲ್ಲರ ಕಣ್ಮುಂದೆಯು ನಡೆದಿರುವುದು ವಿಶೇಷವಾಗಿದೆ,  ಇದನ್ನು ಯಾರು ಬೇಕಾದರು ರಾತ್ರಿ ಹೋಗಿ ನೋಡಬಹುದುದಾಗಿ ಎಂದು ಇಲ್ಲಿಯ ಪುರೋಹಿತರು ಹೇಳುತ್ತಾರೆ.

ಪವಾಡ ನೋಡಲು ಮಹಾರಾಷ್ಟ್ರ, ಕನಾ೯ಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಇನ್ನು ನಾನಾ‘  ರಾಜ್ಯಗಳಿಂದ ಲಕ್ಷಾಂತರ ಹಾಲುಮತೀಯರು ಮತ್ತು ಹಲವಾರು ಜನಾಂಗದವರು ಆಗಮಿಸುತ್ತಾರೆ. ಭಕ್ತಾದಿದಗಳು ಭಂಡಾರದಲ್ಲಿ ಮಿಂದೆದ್ದು ಪುನೀತರಾಗುತ್ತಾರೆ.

ತುಕ್ಕಪ್ಪರಾಯನ ವಂಶದಲ್ಲಿ ಹುಟ್ಟಿದ ಮಾಳಿಂಗರಾಯರು ಬೀರಲಿಂಗನ ಪರಮ ಭಕ್ತರಾಗಿದ್ದು ಛಲದಂಕ ಮಲ್ಲ ಆಗಿದ್ದಾರೆ. ಶಿವನೊಂದಿಗೆ ಷರತ್ತು ಕಟ್ಟಿ ಕಂಬಳಿ ಬೀಸಿ ಮಳೆತರಿಸಿದ ಪವಾಡ ಪುರುಷನಾಗಿದ್ದಾರೆ. ಶಿವನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಪ್ರತೀ ವರ್ಷ ದಿಪಾವಳಿಯ ದಿನ ಶಿವ ಪಾರ್ವತಿಯರೇ ಭೂಮಿಗೆ ಬಂದು ಮುಂಡಾಸು ಅಪಿ೯ಸುತ್ತಾರೆ. ಅಚ್ಚರಿ ಎಂದರೆ ಇಂದಿಗೂ ಅಘೋಚರವಾಗಿ ಮುಂಡಾಸು ಸುತ್ತಿಕೊಳ್ಳುವುದು.

ದೇವರ ಮೊದಲ ಕಲ್ಪನೆ ಎಂದರೆ ಅದು ಪ್ರಕೃತಿ ಆರಾಧನೆ ಮತ್ತು ಪಶುಪತಿಯದ್ಧಾಗಿದೆ.  ಜಗತ್ತಿನ ಪುರಾತನ ಇತಿಹಾಸ ಹೊಂದಿರುವ ಹರಪ್ಪ ಮತ್ತು ಮೆಹಂಜೋದಾರೋ (ಕ್ರಿಪೂ 5000) ಕಾಲದಲ್ಲಿಯೇ ಪಶುಪತಿ ಆರಾಧನೆ ಮತ್ತು ಶಿವಲಿಂಗ ತತ್ವ ಇದ್ದಿತು ಎನ್ನುವುದಕ್ಕೆ ಪುರಾವೆಗಳು ದೊರೆತಿವೆ. ಹಾಲುಮತ, ಪಾಶುಪತ,ಕ್ಷೀರಮತ ಮುಂತಾದ ಹೆಸರಿನೊಂದಿಗೆ ಹಾಲುಮತ ಗುರುತಿಸಿಕೊಂಡಿದೆ. ವೇಧಗಳು ರಚನೆಯಾಗುವ ಮೊದಲು ಅಂದರೆ  ವೇಧ ಪೂವ೯ ಕಾಲದಿಂದ ರಾಮಾಯಣ ಮಹಾಭಾರತ ರಚನೆಯಾಗುವ ಮೊದಲೇ ಪಾಶುಪತ ಧರ್ಮ ಮತ್ತು ಪಶುಪತಿ ಆರಾಧನೆ ಇತ್ತು!!!. ಶಿವಲಿಂಗ ಮತ್ತು ಪಶುಪತಿಯ ಚಿನ್ಹೆಗಳು ಇದಕ್ಕೆ ಮೂಲಾಧಾರವಾಗಿ ಪುಷ್ಟೀ ನೀಡುತ್ತವೆ.

ವರದಿ : ಶಿವರಾಜ್ ಎಂ ನೇಸರಗಿ, ಅಥಣಿ

Please follow and like us:
0
http://bp9news.com/wp-content/uploads/2018/11/WhatsApp-Image-2018-11-08-at-11.50.50-AM-1.jpeghttp://bp9news.com/wp-content/uploads/2018/11/WhatsApp-Image-2018-11-08-at-11.50.50-AM-1-150x150.jpegBP9 Bureauಆಧ್ಯಾತ್ಮಪ್ರಮುಖಬೆಳಗಾವಿಅಥಣಿ: ವಿಚಾರವಾದಿಗಳು ಬುದ್ಧಿ ಜೀವಿಗಳು ವಿಜ್ಞಾನಿಗಳು ಸೃಷ್ಟಿಯ ಒಂದು ಭಾಗವನ್ನು ಕೂಡ ಅರಿತಿಲ್ಲ. ವಿಜ್ಞಾನ ಮುಂದುವರೆದರೂ ಕೆಲವು ಪವಾಡಗಳ ಅರಿಯಲು ಸಾಧ್ಯವಾಗಿಲ್ಲ.. ಪವಾಡ ಬಯಲು ಮಾಡುವವರು, ದೇವರೆ ಇಲ್ಲ ಎಂದು ನಾಸ್ತಿಕರು ಅಭಿಪ್ರಾಯಪಟ್ಟಿದ್ದಾರೆ, ಮಹಾರಾಷ್ಟ್ರದ  ಹುಲಿಜಂತಿ ಗ್ರಾಮದಲ್ಲಿ ಇರುವ ಹಾಲು ಮತದ ಧರ್ಮಕಾಶಿ ಮಾಳಿಂಗರಾಯನ ದೇವಸ್ಥಾನದಲ್ಲಿ ಪ್ರತಿ ದೀಪಾವಳಿ ಅಮವಾಸ್ಯೆಯ ರಾತ್ರಿ ಸಾಕ್ಷಾತ್ ಶಿವ ಪಾರ್ವತಿಯರೆ  ಬಂದು ದೇವಸ್ಥಾನದ ಗೋಪುರದ ಕಳಕ್ಕೆ ಮುಂಡಾಸು (ರುಮಾಲು) ಸುತ್ತವರು, ಇದು ಕೆಲ ದಿನಗಳ ನಂತರ...Kannada News Portal