ಅಥಣಿ :  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನೂತನವಾಗಿ ಅಥಣಿ ಶಾಸಕರಾಗಿ ಆಯ್ಕೆಯಾದ ಮಹೇಶ್ ಕುಮ್ಮುಟಳ್ಳಿ ಅವರು ಗ್ರಾಮದ ಜನತೆಗೆ ಅಭಿನಂದನೆ ಸಲ್ಲಿಸಿದರು.  ಸುಟ್ಟಟ್ಟಿ ಗ್ರಾಮದ ಮಹಾಲಕ್ಷ್ಮೀ ದೆವಾಲಯದಲ್ಲಿ ನೂತನ ಶಾಸಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಮೋದಲ ಬಾರಿಗೆ ಶಾಸಕರಾಗಿ ಗ್ರಾಮಕ್ಕೆ ಆಗಮ ಹಿನ್ನೆಲೆಯಲ್ಲಿ ಹೂ ಗುಚ್ಛ ನೀಡಿ ಗೌರವಿಸಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನನ್ನ ಗೆಲುವು ಅಥಣಿ ಜನರ ಗೆಲುವಾಗಿದೆ. ಸಾಹುಕಾರ ಮತ್ತು ಜನಸೇವಕನ ನಡುವೆ ಯುದ್ಧ ನಡೆಯಿತು. ಅದರಲ್ಲಿ  ಹಣದ ದರ್ಪ ಅಹಂಕಾರ ನಾಶ ವಾಯಿತು, ಜನ ಸೇವಕ ಗೆಲುವು ಸಾಧಿಸುವ ಮೂಲಕ ಅಥಣಿ ಜನ ಪ್ರಜ್ಞಾವಂತ ಮತದಾರರು ಎಂದು ಸಾಭಿತು ಪಡಿಸಿದರು ಎಂದರು.

ನೂತನ ಸರ್ಕಾರದ ಬಗ್ಗೆ ಮಾತನಾಡಿದ ಅವರು ಊಹಾಪೋಹಗಳಿಗೆ ಕಿವಿ ಕೊಡಬೇಡಿ, ಐದು ವರ್ಷ ಸುಭದ್ರವಾಗಿ ಸರ್ಕಾರ ಇರುತ್ತದೆ ಎಂದು ಹೇಳಿದರು. ಇನ್ನೂ ಅನೇಕ ಸಚಿವರ ಕಾರ್ಯಾಲಯಗಳು ಪ್ರಾರಂಭವಾಗಿಲ್ಲ, ಆದ್ದರಿಂದ  ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತಿದೆ. ನಿಮ್ಮ ಕೆಲಸಗಳನ್ನು ಆದಷ್ಟು ಬೇಗ ಮಾಡಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆಸ್  ಮಹಿಳಾ ಸಮಿತಿಯ ಸದಸ್ಯರಾದ ಸುನಿತಾ ಐಯೋಳೆ, ರಾಜ್ಯ ಜೈನ್ ಅಸೋಸಿಯೇಷನ್ ಸದಸ್ಯ ಎ.ಸಿ. ಪಾಟೀಲ, ಕೋಕಟನೊರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಾಮರಾವ್, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಸತ್ಯಪ್ಪ ಭಾಗ್ಯನವರ್ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ: ಶಿವರಾಜ್ ಎಂ ನೇಸರಗಿ, ಅಥಣಿ

Please follow and like us:
0
http://bp9news.com/wp-content/uploads/2018/06/Karnatakada-Miditha-73.jpeghttp://bp9news.com/wp-content/uploads/2018/06/Karnatakada-Miditha-73-150x150.jpegBP9 Bureauಬೆಳಗಾವಿಅಥಣಿ :  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನೂತನವಾಗಿ ಅಥಣಿ ಶಾಸಕರಾಗಿ ಆಯ್ಕೆಯಾದ ಮಹೇಶ್ ಕುಮ್ಮುಟಳ್ಳಿ ಅವರು ಗ್ರಾಮದ ಜನತೆಗೆ ಅಭಿನಂದನೆ ಸಲ್ಲಿಸಿದರು.  ಸುಟ್ಟಟ್ಟಿ ಗ್ರಾಮದ ಮಹಾಲಕ್ಷ್ಮೀ ದೆವಾಲಯದಲ್ಲಿ ನೂತನ ಶಾಸಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಮೋದಲ ಬಾರಿಗೆ ಶಾಸಕರಾಗಿ ಗ್ರಾಮಕ್ಕೆ ಆಗಮ ಹಿನ್ನೆಲೆಯಲ್ಲಿ ಹೂ ಗುಚ್ಛ ನೀಡಿ ಗೌರವಿಸಿದರು.  ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನನ್ನ ಗೆಲುವು ಅಥಣಿ ಜನರ ಗೆಲುವಾಗಿದೆ. ಸಾಹುಕಾರ ಮತ್ತು ಜನಸೇವಕನ ನಡುವೆ ಯುದ್ಧ...Kannada News Portal