ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆಯಬೇಕಿದ್ದ ಮೋದಿ ಸಮಾವೇಶ ರದ್ದುಗೊಂಡಿದೆ. ಕುತೂಹಲ ಕ್ಷೇತ್ರವಾಗಿರುವ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಸೊಲಿಸಲು ಶತಾಯಗತಾಯ ಯತ್ನ ನಡೆಸಿರುವ ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಯವರ ಸಭೆ ಮತ್ತೆ ಕ್ಯಾನ್ಸಲ್ ಆಗಿದ್ದು ನಿರಾಶೆಯಾಗಿದೆ.

ಈ ಮೊದಲು ಮೇ 1 ಕ್ಕೆ ನಿಗಧಿಯಾಗಿದ್ದ ಮೋದಿ ಸಭೆ ಮೇ 9ಕ್ಕೆ ಮುಂದೂಡಿಕೆಯಾಗಿತ್ತು. ಆದರೆ ಈಗ ಮೇ9ರ ಸಭೆಯು ರದ್ದಾಗಿದ್ದು ಕಾರ್ಯಕರ್ತರಿಗೆ ಬೇಸರವಾಗಿದೆ. ಸ್ಥಳ ಮತ್ತು ಜನರ ಸೇರ್ಪಡೆ ವಿಚಾರವಾಗಿ ಈ 2 ಬಾರಿಯೂ ಸಭೆ ರದ್ದಾಗಲು ಕಾರಣ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಹಾಗೂ ಅಮಿತ್​​ ಷಾ ಅವರನ್ನು ಕರೆಸಿ ಗೋಕಾಕ ಮತಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಮುಖಂಡರು ಯತ್ನಿಸುತ್ತಿದ್ದರು. ಆದರೆ ಇದಕ್ಕೆ ಅಲ್ಪ ಹಿನ್ನಡೆಯಾಗಿದ್ದು, ಈ ಹಿಂದೆ ಸಹ ಒಂದು ಬಾರಿ ಅಮಿತ್​​​ ಷಾ ಕಾರ್ಯಕ್ರಮ ರದ್ದಾಗಿತ್ತು. ಆ ಮೇಲೆ ಮತ್ತೊಂದು ದಿನ ಕರೆಸಿ ಗೋಕಾಕ ನಗರದಲ್ಲಿ ರೋಡ್ ಶೋ ಮಾಡುವ ಮೂಲಕ ಆಶಾಭಾವದ ನಗೆ ಬೀರಿದ್ದರು. ಈಗ ಮೋದಿ ಬರುತ್ತಾರೆ ಎಂದು ಹುಮ್ಮಸ್ಸಿನಲ್ಲಿದ್ದ ಕಾರ್ಯಕರ್ತರಿಗೆ ಸಮಾವೇಶ ರದ್ದಾಗಿದ್ದಕ್ಕೆ ಬಲ ಕುಸಿದಂತಾಗಿದೆ. ಇನ್ನು ಮೇ9 ರಂದು ಬೆಳಗಾವಿಯಲ್ಲಿ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ, ನಂತರ ಮಧ್ಯಾಹ್ನ 4ಕ್ಕೆ ಅಲಾರವಾಡದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.

ವರದಿ : ಪ್ರದೀಪ ನಾಗನೂರ

Please follow and like us:
0
http://bp9news.com/wp-content/uploads/2018/05/modi-rally-7591-1.jpghttp://bp9news.com/wp-content/uploads/2018/05/modi-rally-7591-1-150x150.jpgBP9 Bureauಪ್ರಮುಖಬೆಳಗಾವಿರಾಜಕೀಯಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆಯಬೇಕಿದ್ದ ಮೋದಿ ಸಮಾವೇಶ ರದ್ದುಗೊಂಡಿದೆ. ಕುತೂಹಲ ಕ್ಷೇತ್ರವಾಗಿರುವ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಸೊಲಿಸಲು ಶತಾಯಗತಾಯ ಯತ್ನ ನಡೆಸಿರುವ ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಯವರ ಸಭೆ ಮತ್ತೆ ಕ್ಯಾನ್ಸಲ್ ಆಗಿದ್ದು ನಿರಾಶೆಯಾಗಿದೆ. ಈ ಮೊದಲು ಮೇ 1 ಕ್ಕೆ ನಿಗಧಿಯಾಗಿದ್ದ ಮೋದಿ ಸಭೆ ಮೇ 9ಕ್ಕೆ ಮುಂದೂಡಿಕೆಯಾಗಿತ್ತು. ಆದರೆ ಈಗ ಮೇ9ರ ಸಭೆಯು ರದ್ದಾಗಿದ್ದು ಕಾರ್ಯಕರ್ತರಿಗೆ ಬೇಸರವಾಗಿದೆ. ಸ್ಥಳ...Kannada News Portal