ಬೆಳಗಾವಿ: ಬಸ್ ವ್ಯವಸ್ಥೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಖನಗಾಂವ ಗ್ರಾಮದ ಶಾಲಾ ಮಕ್ಕಳು ಗೋಕಾಕ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಖನಗಾಂವ ಗ್ರಾಮದಿಂದ ಗೋಕಾಕ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ದಿನ ಪ್ರತಿದಿನ ಆಗಮಿಸುವ ಶಾಲಾ ಮಕ್ಕಳಿಗೆ ದಿಢೀರ್ ​​​ ಬಸ್ ವ್ಯವಸ್ಥೆ ರದ್ದು ಮಾಡಿದ್ದನ್ನು ಖಂಡಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ಹಿನ್ನೆಲೆಯಲ್ಲಿ ಗೋಕಾಕ ಬಸ್ ನಿಲ್ದಾಣದಿಂದ ಬಸವೇಶ್ವರ ವ್ರತ್ತದ ವರೆಗೆ ಟ್ರಾಫಿಕ್ ಜಾಮ್ ಆಯಿತು. ಸ್ಥಳಕ್ಕೆ ಗೋಕಾಕ ಶಹರ ಠಾಣೆ ಪಿಎಸ್ ಐ ಆಗಮಿಸಿ, ಕೆಎಸ್ ಆರ್ ಟಿಸಿ ಮ್ಯಾನೇಜರ್ ಕರೆಯಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದಾಗ ಮತ್ತೆ ಎಂದಿನಂತೆ ಬಸ್ ವ್ಯವಸ್ಥೆ ಮುಂದುವರೆಸುವದಾಗಿ ಹೇಳಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು. ಒಟ್ಟಾರೆಯಾಗಿ ಪ್ರಾಥಮಿಕ ಶಾಲೆಯ ಮಕ್ಕಳು ಸಹ ಪ್ರತಿಭಟನೆ ನಡೆಸುವ ದುಸ್ಥಿತಿ ಕಂಡು ಸಾರ್ವಜನಿಕರು ಇಲಾಖೆಯ ವಿರುದ್ಧ ಹಿಡಿ ಶಾಪ ಹಾಕಿದರು.

Please follow and like us:
0
http://bp9news.com/wp-content/uploads/2018/08/WhatsApp-Image-2018-08-13-at-10.29.31-AM-1024x768.jpeghttp://bp9news.com/wp-content/uploads/2018/08/WhatsApp-Image-2018-08-13-at-10.29.31-AM-150x150.jpegBP9 Bureauಪ್ರಮುಖಬೆಳಗಾವಿಬೆಳಗಾವಿ: ಬಸ್ ವ್ಯವಸ್ಥೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಖನಗಾಂವ ಗ್ರಾಮದ ಶಾಲಾ ಮಕ್ಕಳು ಗೋಕಾಕ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಖನಗಾಂವ ಗ್ರಾಮದಿಂದ ಗೋಕಾಕ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ದಿನ ಪ್ರತಿದಿನ ಆಗಮಿಸುವ ಶಾಲಾ ಮಕ್ಕಳಿಗೆ ದಿಢೀರ್ ​​​ ಬಸ್ ವ್ಯವಸ್ಥೆ ರದ್ದು ಮಾಡಿದ್ದನ್ನು ಖಂಡಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var...Kannada News Portal