ಬೆಳಗಾವಿ: ಕೊನೆಗಳಿಗೆಯಲ್ಲಿ ನನಗೆ ಸಚಿವ ಸ್ಥಾನ ಕೈ ತಪ್ಪಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದು ಪರಿಷತ್​ ಸದಸ್ಯ ಬಸವರಾಜ್​​ ಹೊರಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟು ಹುಬ್ಬಳ್ಳಿ- ಧಾರವಾಡನೇ ದೊಡ್ಡ ಜಿಲ್ಲೆ. ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ನಾನೇ ಹಿರಿಯ ಸದಸ್ಯ, ಹಾಗಾಗಿ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ನನಗೆ ಸಚಿವನಾಗುವ ಭರವಸೆ ಇತ್ತು ಎಂದರು. ನಾನು ಯಾರನ್ನು ಮಂತ್ರಿ ಮಾಡಿ ಎಂದು ಭಿಕ್ಷೆ ಕೇಳಲ್ಲ.

38 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು. ದೇವೇಗೌಡರು ಸಭಾಪತಿ ಹುದ್ದೆ ನೀಡುವ ಬಗ್ಗೆ ಹೇಳಿದ್ದಾರೆ. ಆದರೆ ನನಗೆ ಕೈಕಟ್ಟಿ ಕೂರುವ ಸಭಾಪತಿ ಸ್ಥಾನ ಬೇಡ ಎಂದ್ದಿದ್ದಾರೆ. ನನಗೆ ಶಿಕ್ಷಣ ಸಚಿವನಾಗುವ ಬಯಕೆ ಇತ್ತು ಎಂದರು.

ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಂಡವರನ್ನು ಸಚಿವ ಸಂಪುಟದಿಂದ ಹೊರಗೆ ಇಡಲಾಗಿದೆ. ನನ್ನನ್ನು ಹಾಗೂ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆರನ್ನು ಹೊರಗಿಟ್ಟಿದ್ದಾರೆ. ಸಮಾಜದ ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಹೋರಾಟದಲ್ಲಿ ಭಾಗಿಯಾಗಿದ್ದೆ, ನಾವು ಎಂದು ಜಾತಿಯತೇ ಮಾಡಿದವರಲ್ಲ. ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಹೋರಾಟ ಮಾಡಿದ್ದು ನಿಜ ಎಂದು ತಿಳಿಸಿದರು.

Please follow and like us:
0
http://bp9news.com/wp-content/uploads/2018/06/19BGHORATTI.jpghttp://bp9news.com/wp-content/uploads/2018/06/19BGHORATTI-150x150.jpgBP9 Bureauಪ್ರಮುಖಬೆಳಗಾವಿರಾಜಕೀಯಬೆಳಗಾವಿ: ಕೊನೆಗಳಿಗೆಯಲ್ಲಿ ನನಗೆ ಸಚಿವ ಸ್ಥಾನ ಕೈ ತಪ್ಪಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದು ಪರಿಷತ್​ ಸದಸ್ಯ ಬಸವರಾಜ್​​ ಹೊರಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟು ಹುಬ್ಬಳ್ಳಿ- ಧಾರವಾಡನೇ ದೊಡ್ಡ ಜಿಲ್ಲೆ. ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ನಾನೇ ಹಿರಿಯ ಸದಸ್ಯ, ಹಾಗಾಗಿ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ನನಗೆ ಸಚಿವನಾಗುವ ಭರವಸೆ ಇತ್ತು ಎಂದರು. ನಾನು ಯಾರನ್ನು ಮಂತ್ರಿ ಮಾಡಿ ಎಂದು ಭಿಕ್ಷೆ ಕೇಳಲ್ಲ. var...Kannada News Portal