ಕೇದಾರನಾಥ: ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥನ ದರ್ಶನ ಆರಂಭವಾಗಿದೆ. ಎಪ್ರಿಲ್ 29ರಿಂದ  ಆರಂಭವಾಗಿ  6 ತಿಂಗಳ ಕಾಲ ದರ್ಶನ ದೊರೆಯಲಿದೆ. ಹಿಮಾಲಯದ ತುತ್ತತುದಿಯಲ್ಲಿ, ಹಿಮಪರ್ವತಗಳ ಮಧ್ಯದಲ್ಲಿ, ಹಿಮಗಡ್ಡೆಗಳ ತಪ್ಪಲಿನಲ್ಲಿ 6 ತಿಂಗಳ ಕಾಲ ನಿತ್ಯನಿರಂತರವಾಗಿ ನಮಃ ಶಿವಾಯ ಮಂತ್ರಘೋಷ ಮೊಳಗುತ್ತೆ. ಕೇದಾರನಾಥ ಮಂದಿರ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಮಂದಾಕಿನಿ ನದಿ ದಡದಲ್ಲಿದೆ.

ಕೇದಾರ ಜಗದ್ಗುರುಗಳ ಸಾನಿಧ್ಯ ಮತ್ತು ಪಂಚ ಅರ್ಚಕರ ಉಪಸ್ಥಿತಿಯಲ್ಲಿ ಕೇದಾರನಾಥನ ಪೂರ್ವ ಮಹಾದ್ವಾರ ತೆರೆಯುತ್ತೆ.  ಬಾಗಿಲು ತೆರೆದ ತಕ್ಷಣ ನೆರೆದಿರುವ ಸಕಲ ಭಕ್ತರಿಗೂ ಒಂದು ಕೌತುಕ ಕಾದಿರುತ್ತೆ. ಅದೇನೆಂದರೆ ಅಖಂಡ ಜ್ಯೋತಿ ದರ್ಶನ. ಸುಮಾರು 6 ತಿಂಗಳ ಹಿಂದೆ ಅಂದ್ರೆ ದೀಪಾವಳಿ ಪಾಡ್ಯದಂದು ಬೆಳಗಿಸಿದ ಜ್ಯೋತಿ, ಅನವರತವಾಗಿ ಉರಿಯುತ್ತಿರುತ್ತೆ. ಇಂತಹ ಅಖಂಡ ಜ್ಯೋತಿ ದರ್ಶನ ಪಡೆದ ಭಕ್ತರು ನಿಜಕ್ಕೂ ಧನ್ಯರು.

ಯೋಗ ನಿದ್ರೆಯಲ್ಲಿರುವ ಪರಮೇಶ್ವರನಿಗೆ ರುದ್ರಾಭಿಷೇಕ, ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ನಂತರ ವಜ್ರದ ಕಿರೀಟ ಧರಿಸಿ ಸ್ವಾಮಿಯನ್ನು ಅಲಂಕರಿಸಲಾಗುತ್ತೆ. ಈ ಸಂದರ್ಭದಲ್ಲಿ ಭಕ್ತರೇ ಜ್ಯೋತಿರ್ಲಿಂಗವನ್ನು ಸ್ಪರ್ಶಿಸಿ ನಮಸ್ಕರಿಸುವ ಅವಕಾಶವಿರುತ್ತೆ.

ಪಾಂಡವರು ನಿರ್ಮಾಣ ಮಾಡಿರುವ ಈ ದೇಗುಲಕ್ಕೆ 5 ಸಾವಿರ ವರ್ಷಗಳಷ್ಟು  ಇತಿಹಾಸವಿದೆ. ಕೇದಾರನಾಥ ದೇಗುಲದಲ್ಲಿ ಪ್ರತಿದಿನ ಕರ್ನಾಟಕದ ಅರ್ಚಕರಿಂದಲೇ ಪೂಜೆ ನಡೆಯುತ್ತೆ.. ಸದ್ಯ ಕೇದಾರ ಪೀಠದ ರಾವಲ್‌ ಎಂದು ಕರೆಸಿಕೊಳ್ಳುವ ಪೀಠಾಧಿಪತಿಗಳು ನಮ್ಮ ಕರ್ನಾಟಕದವರೆ.

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಕೇದಾರ ನಾಥ ಯಾತ್ರೆಗೆ ಅತ್ಯಂತ ಮಹತ್ವವಿದೆ. ರಾಮಾಯಣ ಕಾಲದಲ್ಲಿ ಶ್ರೀರಾಮ ಚಂದ್ರ, ಮಹಾಭಾರತ ಸಂದರ್ಭದಲ್ಲಿ ಪಾಂಡವರು ಸೇರಿದಂತೆ ಅನೇಕ ದೇವಾನುದೇವತೆಗಳು ಇಲ್ಲಿ ಶಾಪ ವಿಮೋಚನೆ ಮಾಡಿಕೊಂಡಿದ್ದಾರೆ.  ಕೇದಾರನಾಥನ ದರ್ಶನದಿಂದ ಏಳೇಳು ಜನ್ಮದ ಪಾಪಗಳಿಂದ ಮುಕ್ತಿ ಪಡೆಯಬಹುದು. ಅಷ್ಟೇಅಲ್ಲ ಕುಟಂಬಕ್ಕೆ ತಟ್ಟಿದ  ಶಾಪ ನಿವಾರಣೆಯಾಗುತ್ತೆ.

Please follow and like us:
0
http://bp9news.com/wp-content/uploads/2018/04/Kedarnath-temple-758x426.jpghttp://bp9news.com/wp-content/uploads/2018/04/Kedarnath-temple-758x426-150x150.jpgBP9 Bureauಅಂಕಣಆಧ್ಯಾತ್ಮಪ್ರಮುಖಶ್ರೀ ಕೇದಾರ ಪೀಠಕೇದಾರನಾಥ: ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥನ ದರ್ಶನ ಆರಂಭವಾಗಿದೆ. ಎಪ್ರಿಲ್ 29ರಿಂದ  ಆರಂಭವಾಗಿ  6 ತಿಂಗಳ ಕಾಲ ದರ್ಶನ ದೊರೆಯಲಿದೆ. ಹಿಮಾಲಯದ ತುತ್ತತುದಿಯಲ್ಲಿ, ಹಿಮಪರ್ವತಗಳ ಮಧ್ಯದಲ್ಲಿ, ಹಿಮಗಡ್ಡೆಗಳ ತಪ್ಪಲಿನಲ್ಲಿ 6 ತಿಂಗಳ ಕಾಲ ನಿತ್ಯನಿರಂತರವಾಗಿ ನಮಃ ಶಿವಾಯ ಮಂತ್ರಘೋಷ ಮೊಳಗುತ್ತೆ. ಕೇದಾರನಾಥ ಮಂದಿರ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಮಂದಾಕಿನಿ ನದಿ ದಡದಲ್ಲಿದೆ. ಕೇದಾರ ಜಗದ್ಗುರುಗಳ ಸಾನಿಧ್ಯ ಮತ್ತು ಪಂಚ ಅರ್ಚಕರ ಉಪಸ್ಥಿತಿಯಲ್ಲಿ ಕೇದಾರನಾಥನ ಪೂರ್ವ ಮಹಾದ್ವಾರ ತೆರೆಯುತ್ತೆ.  ಬಾಗಿಲು ತೆರೆದ ತಕ್ಷಣ ನೆರೆದಿರುವ ಸಕಲ...Kannada News Portal