ಬಿಗ್​ಬಾಸ್​ ಸೀಸನ್​-6  ಮೇನಿಯಾ ಶುರುವಾಗ್ತಿದೆ. ಕನ್ನಡ ಕಿರುತೆರೆಯಲ್ಲಿ  ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​   ಇದೇ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗ್ತಿದೆ.   ಈ ಬಾರಿ ಬಿಗ್​ಬಾಸ್​ನ ಹೋಸ್ಟ್​ ಯಾರೆಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಈ ಸಲ ಸುದೀಪ್​ ನಿರೂಪಕರಾಗಿ ಬರಲ್ವಂತೆ..ಅವರ ಬದಲು ಈಗಾಗಲೇ ಬೇರೆಯವರ ಹೆಸರು ಕೂಡ ಕೇಳಿ ಬಂತು. ಸದ್ಯ ಅವೆಲ್ಲದಕ್ಕೂ ಬ್ರೇಕ್​ ಬಿದ್ದಿದೆ. ಬಿಗ್​ಬಾಸ್​ ಸೀಸನ್​ 6 ನ ಹೋಸ್ಟ್​ ಯಾರೆಂಬುದು ರಿವೀಲ್​ ಆಗಿದೆ. ಈ ಬಾರಿಯೂ  ಕಿಚ್ಚ ಸುದೀಪ್​ ಅವರೇ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಗ್​ಬಾಸ್​ ಅಭಿಮಾನಿಗಳು ಒಂದಷ್ಟು ಕಮೆಂಟ್​ ಮಾಡುವುದಕ್ಕೆ ಶುರು ಮಾಡಿದ್ದರು, ಈ ಶೋಗೆ  ಸೂಕ್ತವಾದ ವ್ಯಕ್ತಿ ಅಂದ್ರೆ ಅದು ಸುದೀಪ್​ ಅವರೇ ಅಂತಾ ಹೇಳ್ತಿದ್ರು.  ಸದ್ಯ ಕಿಚ್ಚನೇ  ಈ ಸಲದ ಬಿಗ್​ಬಾಸ್​ ಮನೆಯ ಸ್ಪರ್ಧಿಗಳನ್ನ ಇನ್​ವೈಟ್​ ಮಾಡಲಿದ್ದಾರೆ.

ಅಲ್ಲದೇ  ಈ ಬಾರಿ ಕಾರ್ಯಕ್ರಮದ ತಂಡ ಬಿಗ್​ಬಾಸ್​ ಸೀಸನ್​ಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ. ಮೋಸ್ಟ್​ ಎಕ್ಸ್​ಪೆಕ್ಟೇಷನ್​  ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ  ಸ್ಪರ್ಧಿಗಳ  ಆಯ್ಕೆ ಆಡಿಷನ್​ ಆರಂಭವಾಗ್ತಿದೆ.ಅಭಿಮಾನಿಗಳು ಕೂಡ ಅದರ ಬರುವಿಕೆಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ.ಇತ್ತ  ಅಂದದ ಅರಮನೆ ಬಿಗ್​ಬಾಸ್​ ಮನೆ​  ಕೂಡ ಸಿದ್ಧವಾಗ್ತಿದೆ. ಬಿಡದಿಯ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ಈ ಬಾರಿಯೂ ಬಿಗ್​ಬಾಸ್ ಶೋ ನಡೆಯಲಿದ್ದು ಬೇಕಾದ ಸಕಲ ಸಿದ್ಧತೆಗಳನ್ನು ಕಾರ್ಯಕ್ರಮ ತಂಡ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ  ಲಭ್ಯವಾಗಿದೆ.

ಅಲ್ಲದೇ ಈ ಬಾರಿಯೂ ಸೆಲೆಬ್ರಿಟಿ ಮತ್ತು ಸಾಮಾನ್ಯರಿಂದ ಯಾರು ಬಿಗ್​ಹೌಸ್​ ಒಳಗೆ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚು ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ  ಸೆಲೆಬ್ರಿಟಿಗಳ ಲೀಸ್ಟ್​ನಲ್ಲಿ ಒಂದಷ್ಟು ಜನರ ಹೆಸರು ಕೇಳಿ ಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಪಟ್ಟಿಯನ್ನು ರಿಯಾಲಿಟಿ ಶೋ ತಂಡ ಫೈನಲ್​ ಮಾಡಿಲ್ಲ. ಒಂದಂತೂ ಸತ್ಯ ರೀಲ್​ ಲೈಫ್​ನಲ್ಲಿ ನೋಡಿದ ಸೆಲಬ್ರಿಟಿಗಳ ರಿಯಲ್​ ವ್ಯಕ್ತಿತ್ವ, ಕಾಮನ್​ ಪೀಪಲ್​ನ ಲಕ್ಸುರಿ ಲೈಫ್​,  ಮನೆಯೊಳಗಿನ ಬದುಕಿಗೆ ಸೆಡ್ಡು ಹೊಡೆದು ಕೋಟಿಗಳಿಸುವ , ಚಾಲೆಂಜ್​ ಹಾಕುವ  ಸ್ಪೆಷಲ್​ ವ್ಯಕ್ತಿಗಳ ಬದುಕಿನ ಆಟ ವೀಕ್ಷಕರಿಗೆ ಪಾಠ ಆಗಲಿದ್ಯಾ ಎಂಬುದು ಅವರವರಿಗೆ  ಬಿಟ್ಟ ವಿಚಾರ.

ಇನ್ನು ಚಂದನವನದ ಕಂಚಿನ ಕಂಠದ  ಸುದೀಪ್​ ನಡೆಸಿಕೊಡುತ್ತಿರುವ ಬಿಗ್​ಬಾಸ್​ ಸೀಸನ್​ 6  ಕಾರ್ಯಕ್ರಮ ಕಲರ್ಸ್​ ಸೂಪರ್​ನಲ್ಲಿ ಸೆ. 6 ರಿಂದಲೇ  ಪ್ರಾರಂಭ ಮಾಡಬೇಕು  ಎಂದು ವಾಹಿನಿ ಮುಖ್ಯಸ್ಥರು ಮತ್ತು  ಕಾರ್ಯಕ್ರಮದ ರುವಾರಿಗಳು ಮಾತುಕತೆ ನಡೆಸಿದ್ದು, ಶೀಘ್ರದಲ್ಲಿಯೇ ಬಿಗ್​ಬಾಸ್​ ನಿಮ್ಮ ಮನೆಮನೆಗೆ  ಇಂತಹದ್ದೇ ದಿನ ಬರಲಿದೆ ಎಂಬುದನ್ನು ಆದಷ್ಟು ಬೇಗ ಸ್ಪಷ್ಟಪಡಿಸಲಿದ್ದಾರೆ.

 

Please follow and like us:
0
http://bp9news.com/wp-content/uploads/2018/07/Bigg-Boss-Kannada-Season-6-2018-Registration-Form-Auditions-Details.jpghttp://bp9news.com/wp-content/uploads/2018/07/Bigg-Boss-Kannada-Season-6-2018-Registration-Form-Auditions-Details-150x150.jpgBP9 Bureauಸಿನಿಮಾಬಿಗ್​ಬಾಸ್​ ಸೀಸನ್​-6  ಮೇನಿಯಾ ಶುರುವಾಗ್ತಿದೆ. ಕನ್ನಡ ಕಿರುತೆರೆಯಲ್ಲಿ  ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​   ಇದೇ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗ್ತಿದೆ.   ಈ ಬಾರಿ ಬಿಗ್​ಬಾಸ್​ನ ಹೋಸ್ಟ್​ ಯಾರೆಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಈ ಸಲ ಸುದೀಪ್​ ನಿರೂಪಕರಾಗಿ ಬರಲ್ವಂತೆ..ಅವರ ಬದಲು ಈಗಾಗಲೇ ಬೇರೆಯವರ ಹೆಸರು ಕೂಡ ಕೇಳಿ ಬಂತು. ಸದ್ಯ ಅವೆಲ್ಲದಕ್ಕೂ ಬ್ರೇಕ್​ ಬಿದ್ದಿದೆ. ಬಿಗ್​ಬಾಸ್​ ಸೀಸನ್​ 6 ನ ಹೋಸ್ಟ್​ ಯಾರೆಂಬುದು ರಿವೀಲ್​ ಆಗಿದೆ. ಈ ಬಾರಿಯೂ  ಕಿಚ್ಚ...Kannada News Portal