ಬಿಗ್​ಬಾಸ್ ರಿಯಾಲಿಟಿ ಶೋ  ಕಿರುತೆರೆಯಲ್ಲಿ ಒಂದು ಟ್ರೆಂಡ್​ ಕ್ರಿಯೇಟ್​ ಮಾಡಿದ್ದಂತಹ ವಿಶಿಷ್ಟ ರಿಯಾಲಿಟಿ ಶೋ ಎಂದರೆ ತಪ್ಪಾಗಲಾರದು. ಕನ್ನಡದ ಬಿಗ್​, ಲಕ್ಷುರಿ ರಿಯಾಲಿಟಿ ಶೋಗಳಲ್ಲಿ ಬಿಗ್​ಬಾಸ್​ ಕೂಡ ಒಂದು.

ಕನ್ನಡದಲ್ಲಿ ಈಗಾಲೇ 5 ಸೀಸನ್​ಗಳನ್ನು ಮುಗಿದಿದ್ದು ಆರನೇ ಸೀಸನ್​ಗೆ ಮುಹೂರ್ತ ಫಿಕ್ಸ್​ ಆಗಿದೆ.  ಬಿಗ್​ಬಾಸ್​ ಅಭಿಮಾನಿಗಳಂತೂ ಎದುರು ನೋಡುತ್ತಿದ್ದಾರೆ. ರಾಜ್ಯಾದ್ಯಂತ ಕನ್ನಡಿಗರ  ಮನಗೆದ್ದಿರುವ ಬಿಗ್​ಬಾಸ್​ ಈ ಬಾರಿ ವಿಶೇಷವಾಗಿದ್ದು  ಸ್ಪರ್ಧಿಗಳ ಆಯ್ಕೆಯ ತಯಾರಿಯಲ್ಲಿದೆ  ರಿಯಾಲಿಟಿ ಶೋ ತಂಡ.

​ ಸೀಸನ್​ 6 ನ ಜ್ವರ ಆರಂಭವಾಗುತ್ತಿದ್ದಂತೇ ಅಭಿಮಾನಿಗಳ ಕೌತುಕವೂ ಹೆಚ್ಚಾಗುತ್ತಿದೆ.  ಸದ್ಯ  ಕಳೆದ ಸೀಸನ್​ ಬಿಗ್​ಬಾಸ್​ ನ ಸ್ಪರ್ಧಿಗಳು ಇನ್ನು ಮನಸ್ಸಿನಿಂದ ಮರೆಯಾಗಿಲ್ಲ ಅದಾಗಲೇ ಮತ್ತೊಂದು ಸೀಸನ್​ ಆರಂಭವಾಗ್ತಿದೆ. ಈ ಸಲದ  ಬಿಗ್​ಬಾಸ್​ ಹೆಚ್ಚು  ಸುದ್ದಿಯಾಗುವುದಕ್ಕೆ  ಅನೇಕ ಕಾರಣಗಳಿವೆ. ಒಂದು ಬಿಗ್​ಬಾಸ್​ನ ಹೋಸ್ಟ್​ ಯಾರೆಂಬುದು,  ಇಲ್ಲಿಯವರೆಗೇ ಕಿಚ್ಚ ಸುದೀಪ್​ ಬಿಗ್​ಬಾಸ್​  ಮನೆಯಲ್ಲಿನ ವಿಶೇಷ, ವಿಚಿತ್ರ ಮನಸ್ಥಿತಿಯುಳ್ಳ ಸದಸ್ಯರನ್ನು ಹ್ಯಾಂಡಲ್​ ಮಾಡಿ ಗೆದ್ದಿದ್ದರು. ಆದರೆ ಈ ಬಾರಿ ಬಿಗ್​ಬಾಸ್​ ನಿರೂಪಕ ಯಾರೆಂಬ ವಿಚಾರ ದಲ್ಲಿ ಅಭಿಮಾನಿಗಳಲ್ಲಿ ದ್ವಂದ್ವ ಇದೆ.  ಇದೊಂದು ಕಾರಣವಾದ್ರೆ, ಈ ಬಾರಿ ಬಿಗ್​ಬಾಸ್​ಗೆ ಎಂಟ್ರಿ ಕೊಡುವ ಸೆಲೆಬ್ರಿಟಿ ಮುಖಗಳು ಯಾರೆಂಬುದು…?

ಕಳೆದ ಸೀಸನ್​ನಲ್ಲಿ ಸಾಮನ್ಯ ಮತ್ತು ಸೆಲೆಬ್ರಿಟಿ ಕಂಟೆಸ್ಟೆಂಟ್ಸ್​ಗಳನ್ನು  ಬಿಗ್​ಬಾಸ್​ ಮನೆಯೊಳಗೆ ಕಳುಹಿಸಲಾಗಿತ್ತು.ಅದಕ್ಕೂ ಹಿಂದಿನ ಸೀಸನ್​ನಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಇತ್ತು. ಆದರೆ  ಕಳೆದ ಬಾರಿಯಿಂದ  ಸಾಮಾನ್ಯ ರಿಗೂ ಅವಕಾಶ ಕೊಡಲಾಗಿದೆ. ಅದೇನೇ ಇರಲಿ ಬಿಗ್​ಬಾಸ್​ ಜ್ವರ ಮಾತ್ರ ಆರಂಭವಾಗಿದ್ದು, ಈಗಾಗಲೃಏ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ಸ್​ ಗಳು  ಆರಂಭವಾಗ್ತಿದೆ. ಇನ್ನು ಈ ಲಕ್ಷುರಿ ಬಿಗ್​ಬಾಸ್​ ಮನೆಯಳಗೆ ಪ್ರವೇಶ ಮಾಡುವ ಸೆಲೆಬ್ರಿಟಿಗಳು ಯಾರೆಂಬುದೇ ಬಿಗ್​ಬಾಸ್​ ಅಭಿಮಾನಿಗಳ ಕುತೂಹಲ.

ಒಂದಷ್ಟು  ಸೆಲಬ್ರಿಟಿಗಳ  ಲೀಸ್ಟ್​ನಲ್ಲಿ ಕೇಳಿ ಬರುತ್ತಿರುವ ಹೆಸರುಗಳೆಂದರೆ….

ನಟಿ ವಿಜಯ ಲಕ್ಷ್ಮಿ,  ಹಾಸ್ಯ ನಟ ಮಂಡ್ಯ ರಮೇಶ್​, ಆರ್​ ಜೆ rappid ರಶ್ಮಿ,  ಮುಂಗಾರುಗಾರು ಮಳೆ-2 ಸಿನಿಮಾ ನಾಯಕಿ ನೇಹಾ ಶೆಟ್ಟಿ, ಕಿರುತೆರೆ  ನಟ ರವಿಶಂಕರ್​, ಕಿರಿಕ್​ ಪಾರ್ಟಿ ,  ಕುರಿ ಪ್ರತಾಪ್​, ಪುಟ್ಟಗೌರಿ ಸೀರಿಯಲ್​ ನಾಯಕಿ ರಂಜನಿ.

ಸಿಂಗರ್​ ಚನ್ನಪ್ಪ, ನಟ ಅನಿರುದ್ಧ, ಇವರ ಜೊತೆಗೆ ಇನ್ನಷ್ಟು ಮಂದಿ ಇವರೆಲ್ಲಾ ಈ ಬಾರಿ ಬಿಗ್​ಬಾಸ್​ ಗೃಹಪ್ರವೇಶ ಮಾಡ್ತಾರೆ ಎಂಬುದು ಅಂದಾಜು ಅಷ್ಟೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಹೆಸರುಗಳು ಟ್ರೆಂಡಿಂಗ್​ನಲ್ಲಿದ್ದು ಬಹುಶಃ ಒಳಹೋಗುವ ಸಾಧ್ಯತೆಗಳಿವೆ ಎಂದು ಕೇಳಿ ಬರುತ್ತಿದೆ.

ಇನ್ನು ಇವರನ್ನು ಬಿಗ್​ಬಾಸ್​ ರಿಯಾಲಿಶೋ ತಂಡ ಸಂಪರ್ಕ ಮಾಡಬಹುದು ಎಂಬ ಮಾಹಿತಿ ಲಭ್ಯವಾಗಿದೆ.  ಈ ಹೆಸರುಗಳು ಕೇಳಿ ಬರಲು ಕಾರಣವೆಂದರೆ, ಸದ್ಯ ಸಂದರ್ಭದಲ್ಲಿ ಟ್ರೆಂಡಿಂಗ್​ನಲ್ಲಿ ಇರುವ ಹೆಸರು ಕೇಳಿ ಬರುತ್ತಿದ್ದು, ಇವರೇ ಹೋಗಬಹುದು ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.

ಅಭಿಮಾನಿಗಳು ಬಿಗ್​ಹೌಸ್​ ಒಳಗೆ ಹೋಗುವ ಸ್ಪರ್ಧಿಗಳ ಹೆಸರನ್ನು ಕಮೆಂಟ್​ ಮಾಡುತ್ತಿದ್ದಾರೆ. ಇದು ಫೈನಲ್​ ಅಲ್ಲಾ ಬಿಡಿ. ಈ ಬಗ್ಗೆ ವಾಹಿನಿ, ಹಾಗೂ ಪ್ರೋಗ್ರಾಂ ಪ್ರೊಡ್ಯೂಸರ್​ ನಿರ್ಧಾರ ಮಾಡಲಿದ್ದು, ಸದ್ಯದಲ್ಲೇ ಆ ಬಗ್ಗೆ ಮಾಹಿತಿ ಹೊರಬೀಳಲಿದೆ.

 

Please follow and like us:
0
http://bp9news.com/wp-content/uploads/2018/07/WhatsApp-Image-2018-07-10-at-18.34.37.jpeghttp://bp9news.com/wp-content/uploads/2018/07/WhatsApp-Image-2018-07-10-at-18.34.37-150x150.jpegBP9 Bureauಸಿನಿಮಾಬಿಗ್​ಬಾಸ್ ರಿಯಾಲಿಟಿ ಶೋ  ಕಿರುತೆರೆಯಲ್ಲಿ ಒಂದು ಟ್ರೆಂಡ್​ ಕ್ರಿಯೇಟ್​ ಮಾಡಿದ್ದಂತಹ ವಿಶಿಷ್ಟ ರಿಯಾಲಿಟಿ ಶೋ ಎಂದರೆ ತಪ್ಪಾಗಲಾರದು. ಕನ್ನಡದ ಬಿಗ್​, ಲಕ್ಷುರಿ ರಿಯಾಲಿಟಿ ಶೋಗಳಲ್ಲಿ ಬಿಗ್​ಬಾಸ್​ ಕೂಡ ಒಂದು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180630120129'); document.getElementById('div_1520180630120129').appendChild(scpt); ಕನ್ನಡದಲ್ಲಿ ಈಗಾಲೇ 5 ಸೀಸನ್​ಗಳನ್ನು ಮುಗಿದಿದ್ದು...Kannada News Portal