ಬೆಳಗಾವಿ: ಇಲ್ಲಿನ ಗಾಂಧಿ ನಗರದ ಹಣ್ಣಿನ ಮಾರುಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಬಿಜೆಪಿ ಶಾಸಕ ಗ್ಲೆನ್‌ ಶಿಕ್ಲಾನ್‌ ಅವರ ಪುತ್ರ ಕೈಲ್‌ ಟಿಕ್ಲೋನನ್ನು ಮಾಳಮಾರುತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಕಾಕತಿ ಕಡೆ ಹೊರಟಿದ್ದ BMW ಕಾರ್‌ ಡಿಕ್ಕಿ ಹೊಡೆದ ಪರಿಣಾಮ ಆಝಾದ ನಗರದ ಸೆಹನಿಯತ್‌ ವಾಹೀದ್ (18) ಎಂಬ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ ಸ್ನೇಹಿತೆ ಸಮ್ರಿನ್‌ ಖಾಲೀದ್ (21) ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಬಳಿಕ ಉದ್ರಿಕ್ತಗೊಂಡ ಸಾರ್ವಜನಿಕರು ಕಾರಿಗೆ ಕಲ್ಲೆಸೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಉಜ್ವಲ ನಗರದಿಂದ ರಸ್ತೆ ದಾಟಿ ಆಝಾದ ನಗರಕ್ಕೆ ಒಟ್ಟು ನಾಲ್ವರು ಯುವತಿಯರು ಹೊರಟಿದ್ದರು. ಇಬ್ಬರು ಯುವತಿಯರು ರಸ್ತೆ ದಾಟಿ ಮುಂದಕ್ಕೆ ಹೋಗಿದ್ದರು. ಈ ಇಬ್ಬರು ಸಹೋದರಿಯರು ಹಿಂದೆ ಇದ್ದರು. ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಆಗ ಕಾರಿನ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟಿದ್ದಾಳೆ.

ಅಪಘಾತವಾಗುತ್ತಿದ್ದಂತೆ ಕೂಡಲೇ ಜಮಾಯಿಸಿದ ಸಾರ್ವಜನಿಕರು ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಿಂಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಹಚ್ಚಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಬೆಂಕಿ ಹಚ್ಚಿದ ಕೆಲವರನ್ನು ಮಾಳಮಾರುತಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾತ್ರಿ ಠಾಣೆಗೆ ಬಂದು ಶರಣಾಗಿದ್ದ ಕೈಲ್‌ ಟಿಕ್ಲೋ ತನ್ನ ಮೇಲಾದ ಹಲ್ಲೆಯ ಕುರಿತು ಪ್ರತಿ ದೂರನ್ನೂ ದಾಖಲಿಸಿದ್ದಾನೆ.

Please follow and like us:
0
http://bp9news.com/wp-content/uploads/2018/10/News-k4-arrest.jpghttp://bp9news.com/wp-content/uploads/2018/10/News-k4-arrest-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯBig breaking: BJP MLA son arrestedಬೆಳಗಾವಿ: ಇಲ್ಲಿನ ಗಾಂಧಿ ನಗರದ ಹಣ್ಣಿನ ಮಾರುಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಬಿಜೆಪಿ ಶಾಸಕ ಗ್ಲೆನ್‌ ಶಿಕ್ಲಾನ್‌ ಅವರ ಪುತ್ರ ಕೈಲ್‌ ಟಿಕ್ಲೋನನ್ನು ಮಾಳಮಾರುತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಕಾಕತಿ ಕಡೆ ಹೊರಟಿದ್ದ BMW ಕಾರ್‌ ಡಿಕ್ಕಿ ಹೊಡೆದ ಪರಿಣಾಮ ಆಝಾದ ನಗರದ ಸೆಹನಿಯತ್‌ ವಾಹೀದ್ (18) ಎಂಬ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ...Kannada News Portal