ನವದೆಹಲಿ: ಟ್ವಿಟರ್ ನಕಲಿ ಖಾತೆಗಳನ್ನು ನಿಯಂತ್ರಿಸಿ ಸಾಮಾಜಿಕ ಅಂತರ್ಜಾಲ ತಾಣ ಶುದ್ಧೀಕರಿಸುವ ಪ್ರಕ್ರಿಯೆಗೆ ಟ್ವಿಟರ್ ಕಂಪನಿ ಮುಂದಾಗಿದೆ. ಈ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಕೋಟ್ಯಂತರ ಖಾತೆಗಳನ್ನು ರದ್ದು ಗೊಳಿಸಿದೆ. ಇದರಿಂದಾಗಿ ಜಗತ್ತಿನಾದ್ಯಂತ ಹಲವು ಗಣ್ಯರ ಖಾತೆಯಲ್ಲಿನ ಫಾಲೋವರ್‌ಗಳ ಸಂಖ್ಯೆಯಲ್ಲಿ ದಿನ ಬೆಳಗಾಗುವುದರೊಳಗೆ ಭಾರಿ ಇಳಿಕೆ ಕಂಡುಬಂದಿದೆ.

ಅದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಗಣ್ಯರ ಪೈಕಿ ಮೂರನೇ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಫಾಲೋವರ್‌ಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಖಂಡಿದೆ.

ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಅವರ ಫಾಲೋವರ್‌ಗಳ ಸಂಖ್ಯೆ 4,33,83,525 ಇತ್ತು. ಈಗ 4,30,98,779 ಆಗಿದೆ. ಅಂದರೆ ಮೋದಿ ಫಾಲೋವರ್‌ಗಳ ಸಂಖ್ಯೆ 2.85 ಲಕ್ಷ ಕಡಿಮೆಯಾಗಿದೆ.

ಇತ್ತ ರಾಹುಲ್ ಗಾಂಧಿ ಅವರ ಟ್ವಿಟರ್ ಫಾಲೋವರ್‌ಗಳ ಸಂಖ್ಯೆಯಲ್ಲಿಯು ಕಡಿಮೆಯಾಗಿದೆ. ಆದರೆ ಪ್ರಧಾನಿ ಮೋದಿ ಅವರ ಫಾಲೋವರ್‌ಗಳ ಸಂಖ್ಯೆಯಲ್ಲಿ ಆಗಿರುವಷ್ಟು ಅಜಗಜಾಂತರ ಇಳಿಕೆ ಕಂಡಿಲ್ಲ. ರಾಹುಲ್ ಗಾಂಧಿ ಫಾಲೋವರ್ಗಳ ಪೈಕಿ 17 ಸಾವಿರ ಫಾಲೋವರ್‌ಗಳು ಕಡಿಮೆಯಾಗಿದ್ದಾರೆ.

ಈ ಮೂಲಕ ಕಾಂಗ್ರೆಸ್ ಅಧಿನಾಯಕ ರಾಹುಲ್ ಮೇಲಿದ್ದ ನಕಲಿ ಹಿಂಬಾಲಕರ ಆರೋಪ ತುಸು ಕಡಿಮೆಯಾಗಿದ್ದು, ಆರೋಪ ಮಾಡುತ್ತಿದ್ದ ಬಿಜೆಪಿಯ ಪ್ರಶ್ನಾತೀತ ನಾಯಕ ಪ್ರಧಾನಿ ಮೋದಿ ಅವರ ಹಿಂಬಾಲಕರಲ್ಲಿ ಕಣನೀಯ ಸಂಖ್ಯೆಯ ಇಳಿಕೆ ಕಂಡುಬಂದಿದೆ.

Please follow and like us:
0
http://bp9news.com/wp-content/uploads/2018/07/rahul-modi-F.jpghttp://bp9news.com/wp-content/uploads/2018/07/rahul-modi-F-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯBig Breaking: Out Of The Truth !!! Twitter fake followers to Modi Rahul is less than !!!ನವದೆಹಲಿ: ಟ್ವಿಟರ್ ನಕಲಿ ಖಾತೆಗಳನ್ನು ನಿಯಂತ್ರಿಸಿ ಸಾಮಾಜಿಕ ಅಂತರ್ಜಾಲ ತಾಣ ಶುದ್ಧೀಕರಿಸುವ ಪ್ರಕ್ರಿಯೆಗೆ ಟ್ವಿಟರ್ ಕಂಪನಿ ಮುಂದಾಗಿದೆ. ಈ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಕೋಟ್ಯಂತರ ಖಾತೆಗಳನ್ನು ರದ್ದು ಗೊಳಿಸಿದೆ. ಇದರಿಂದಾಗಿ ಜಗತ್ತಿನಾದ್ಯಂತ ಹಲವು ಗಣ್ಯರ ಖಾತೆಯಲ್ಲಿನ ಫಾಲೋವರ್‌ಗಳ ಸಂಖ್ಯೆಯಲ್ಲಿ ದಿನ ಬೆಳಗಾಗುವುದರೊಳಗೆ ಭಾರಿ ಇಳಿಕೆ ಕಂಡುಬಂದಿದೆ. ಅದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಗಣ್ಯರ ಪೈಕಿ ಮೂರನೇ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಫಾಲೋವರ್‌ಗಳ ಸಂಖ್ಯೆ ಗಣನೀಯವಾಗಿ...Kannada News Portal