ಬೆಂಗಳೂರು : ನಾಳೆ ನಡೆಯ ಬೇಕಿದ್ದ ಆರ್ ಆರ್ ನಗರ ಚುನಾವಣೆ ರದ್ದಾಗಿದೆ. ಕ್ಷೇತ್ರದಲ್ಲಿ ದೊರೆತ ಅಕ್ರಮ ವೋಟರ್ ಐಡಿ ಕಾರ್ಡ್ ಪ್ರಕರಣ ಬೆನ್ನತ್ತಿರುವ ಚುನಾವಣಾ ಆಯೋಗ ಈ ನಿರ್ಧಾರವನ್ನು ಪ್ರಕಟಮಾಡಿದೆ.

ಮೇ 28ರಂದು ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಮೇ 31 ಕ್ಕೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು ಎಸ್ಎಲ್ವಿ ಅಪಾಟ್ಮೆಂಟ್ನಲ್ಲಿ ಸುಮಾರು 9 ಸಾವಿರದ 746 ವೋಟರ್ ಐಡಿಗಳು ದೊರೆತಿದ್ದವು. ಆ ಮನೆಯಲ್ಲಿ ತನಿಖೆ ನಡೆಸುದ್ದಿ ಅಧಿಕಾರಿಗಳಿಗೆ ಮುನಿರತ್ನಗೆ ಸಂಬಂಧಿಸಿದ ಕರಪತ್ರ ಮತ್ತು ನೀರಿನ ಕ್ಯಾನ್ಗಳು, ಪ್ರಮುಖವಾಗಿ ಶಾಸಕ ಮುನಿರತ್ನ ಅವರ ಫಿಂಗರ್ ಪ್ರಿಂಟ್ನಿಂದ ಓಪನ್ ಆಗುವ ಲ್ಯಾಪ್ಟಾಪ್ ದೊರೆತಿತ್ತು.

ಈ ಪ್ರಕರಣಕ್ಕೆ ಪುಷ್ಠಿತರುವಂತೆ ಈ ಬಾರಿ ನೂತನ ಮತದಾರರ ಸಂಕ್ಯೆ ಕೂಡ ಈ ಕ್ಷೇತ್ರದಲ್ಲಿ ಗಣನೀಯವಾಗಿ ಕಂಡುಬಂದಿದ್ದು, ಈ ವಿಚಾರವಾಗಿ ಆಯೋಗಕ್ಕೆ ದೂರು ನೀಡಲಾಗಿತ್ತು. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮುನಿರತ್ನ ಸೇರಿದಂತೆ ಇತರರ ಮೇಲೆ 2 ಪ್ರಕರಣಗಳು ದಾಖಲು ಕೂಡ ಆಗಿತ್ತು.

Please follow and like us:
0
http://bp9news.com/wp-content/uploads/2018/05/Munirathna.jpghttp://bp9news.com/wp-content/uploads/2018/05/Munirathna-150x150.jpgPolitical Bureauಪ್ರಮುಖಬೆಂಗಳೂರುರಾಜಕೀಯBig breaking: RR postponed city election pollsಬೆಂಗಳೂರು : ನಾಳೆ ನಡೆಯ ಬೇಕಿದ್ದ ಆರ್ ಆರ್ ನಗರ ಚುನಾವಣೆ ರದ್ದಾಗಿದೆ. ಕ್ಷೇತ್ರದಲ್ಲಿ ದೊರೆತ ಅಕ್ರಮ ವೋಟರ್ ಐಡಿ ಕಾರ್ಡ್ ಪ್ರಕರಣ ಬೆನ್ನತ್ತಿರುವ ಚುನಾವಣಾ ಆಯೋಗ ಈ ನಿರ್ಧಾರವನ್ನು ಪ್ರಕಟಮಾಡಿದೆ. ಮೇ 28ರಂದು ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಮೇ 31 ಕ್ಕೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು ಎಸ್ಎಲ್ವಿ ಅಪಾಟ್ಮೆಂಟ್ನಲ್ಲಿ ಸುಮಾರು 9 ಸಾವಿರದ 746 ವೋಟರ್ ಐಡಿಗಳು ದೊರೆತಿದ್ದವು. ಆ...Kannada News Portal