ಬೆಂಗಳೂರು: ಸುಸ್ತಿಸಾಲದ ಜತೆಗೆ ಗುರುವಾರ ಚಾಲ್ತಿ ಸಾಲಗಳನ್ನು ಮನ್ನಾ ಮಾಡುವ ‘ಋಣ ಮುಕ್ತ ರೈತ’ ಘೋಷಣೆಯನ್ನು ಮಾಡಿದ್ದಾರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.

ರೈತ ಸಮುದಾಯಕ್ಕೆ ಸಾಲಮನ್ನಾದ ಮತ್ತೊಂದು ಕಂತಿನ ‘ಸುಗ್ಗಿ’ಯ ಹುಗ್ಗಿ ಕೊಟ್ಟಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸರ್ವರ ಮೇಲೆ ಎಳೆದಿದ್ದ ತೆರಿಗೆಯ ಸುಡು ಬರೆಯನ್ನು ಹಾಗೆಯೇ ಮುಂದುವರಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಗುರುವಾರ ಉತ್ತರ ನೀಡಿದ ಬಳಿಕ ತೆರಿಗೆ, ಸೆಸ್ ಏರಿಕೆಗೆ ಸಂಬಂಧಿಸಿದ ಧನವಿನಿಯೋಗ ಮಸೂದೆಗಳನ್ನು ಅವರು ಉಭಯ ಸದನಗಳಲ್ಲಿ ಮಂಡಿಸಿದರು. ಶುಕ್ರವಾರ ಈ ಮಸೂದೆಗಳಿಗೆ ಅನುಮೋದನೆ ಸಿಗಲಿದೆ. ತೆರಿಗೆ ಏರಿಕೆ ಪ್ರಹಾರ ತಕ್ಷಣದಿಂದಲೇ ಜಾರಿಗೆ ಬರಲಿದೆ. ಹೀಗಾಗಿ ವಿದ್ಯುತ್‌, ತೈಲ ಹಾಗೂ ಮದ್ಯ ಶನಿವಾರದಿಂದಲೇ ದುಬಾರಿಯಾಗುವುದು ಬಹುತೇಕ ಖಚಿತವಾಗಿದೆ.

ಮೋಟಾರು ವಾಹನಗಳ ಮೇಲಿನ ತೆರಿಗೆ ಮಾತ್ರ ಆಗಸ್ಟ್ 1ರಿಂದ ಜಾರಿಯಾಗಲಿದೆ. ಇತ್ತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಆಡಳಿತ ಪಕ್ಷದ (ಕಾಂಗ್ರೆಸ್ – ಜೆಡಿಎಸ್) ಶಾಸಕರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದರು. ತೆರಿಗೆ ಏರಿಕೆ ಕ್ರಮಗಳನ್ನು ಕೈಬಿಟ್ಟು, ಕೆಲವು ಪರಿಹಾರಗಳನ್ನು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಅದು ಈಡೇರಲಿಲ್ಲ.

ಸುಸ್ತಿಸಾಲದ ಜತೆಗೆ ಚಾಲ್ತಿ ಸಾಲಗಳನ್ನು ಮನ್ನಾ ಮಾಡುವ ‘ಋಣ ಮುಕ್ತ ರೈತ’ ಘೋಷಣೆಯನ್ನು ಮಾಡಿದರು. ಅನ್ನಭಾಗ್ಯ ಯೋಜನೆಯಡಿ ಪ್ರತಿ ಘಟಕಕ್ಕೆ ನೀಡುತ್ತಿದ್ದ 7 ಕೆ.ಜಿ ಅಕ್ಕಿ ಬದಲು 5 ಕೆ.ಜಿಗೆ ಇಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದರು. ಈ ಬಗ್ಗೆ ಮರು ಪರಿಶೀಲಿಸುವ ಭರವಸೆ ಕೊಟ್ಟರೇ ವಿನಃ ಯಾವುದೇ ಘೋಷಣೆ ಮಾಡಲಿಲ್ಲ.

Please follow and like us:
0
http://bp9news.com/wp-content/uploads/2018/07/pricerise001.jpghttp://bp9news.com/wp-content/uploads/2018/07/pricerise001-150x150.jpgPolitical Bureauಪ್ರಮುಖರಾಜಕೀಯBig breaking: Taxes rise to allies soon Farmers get rid of 'suggy' another season !!!ಬೆಂಗಳೂರು: ಸುಸ್ತಿಸಾಲದ ಜತೆಗೆ ಗುರುವಾರ ಚಾಲ್ತಿ ಸಾಲಗಳನ್ನು ಮನ್ನಾ ಮಾಡುವ ‘ಋಣ ಮುಕ್ತ ರೈತ’ ಘೋಷಣೆಯನ್ನು ಮಾಡಿದ್ದಾರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ರೈತ ಸಮುದಾಯಕ್ಕೆ ಸಾಲಮನ್ನಾದ ಮತ್ತೊಂದು ಕಂತಿನ ‘ಸುಗ್ಗಿ’ಯ ಹುಗ್ಗಿ ಕೊಟ್ಟಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸರ್ವರ ಮೇಲೆ ಎಳೆದಿದ್ದ ತೆರಿಗೆಯ ಸುಡು ಬರೆಯನ್ನು ಹಾಗೆಯೇ ಮುಂದುವರಿಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var...Kannada News Portal