ಟಗರು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಹಿಟ್ ಆದ ಮೇಲೆ  ನಟಿಸಿದ ಕಲಾವಿದರಿಗೆ ​ ಸ್ಟಾರ್​ ಇಮೇಜ್​ ತಂದು ಕೊಟ್ಟಿತು. ಟಗರು ಶಿವ, ಪುಟ್ಟಿ ಕಾನ್ಸ್​ಟೇಬಲ್​  ಸರೋಜ, ಡಾಲಿ ಧನಂಜಯ, ಚಿಟ್ಟೆ ಹೀಗೆ ಒಬ್ಬೊಬ್ಬರಿಗೂ ಒಂದೊಂದು ನ್ಯೂ ಡಿಫರೆಂಟ್​ ಲುಕ್​ ಕ್ರಿಯೇಟ್​ ಆಯ್ತು.  ಧನಂಜಯನ ಹೆಸರು ಸದ್ಯ ಡಾಲಿ ಅಂತಾನೇ ಫೇಮಸ್ಸ್​. ಟಗರು ಮುಗಿದ ಮೇಲೂ ಧನಂಜಯಗೆ ಸಿಕ್ಕಾಪಟ್ಟೆ ಆಫರ್​ ಬಂತು. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಲು  ಈಗಲೇ ಅಡ್ವಾನ್ಸ್  ಕೂಡ ಬುಕ್​ ಮಾಡಲಾಗಿದೆ. ಡಾಲಿಗೆ ಇಂಥದ್ದೊಂದು ಆಫರ್ ಬಹುಬೇಗ ಬರುತ್ತದೆ ಎಂದು ಅಂದುಕೊಂಡಿರಲಿಲ್ವಂತೆ. ಸದ್ಯ ಡಾಲಿಗೆ ಒಂದು ಬಿಗ್​ ಆಫರ್​ ಹುಡುಕೊಕೊಂಡು ಬಂದಿದೆ.

ಧನಂಜಯ್ ನಟಿಸ್ತಾ ಇರೋ ಈ ಬಹುಭಾಷಾ ಚಿತ್ರಕ್ಕೆ ಈಗಾಗಲೇ ಪೋಟೋ ಶೂಟ್​ ಕೂಡ ನಡೆಯುತ್ತಿದೆ. ಧನಂಜಯ ತೆಲುಗು ಫ್ರೇಂ ನಲ್ಲಿ ಕಿಲ್ಲಿಂಗ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೇ ಈ ಫೋಟೋ ವೈರಲ್​ ಆಗುತ್ತಿದ್ದಂತೆ, ಒಂದಷ್ಟು ಗಾಂಧೀನಗರದ ಮಂದಿ ಎಲ್ರಪ್ಪಾ ನಮ್ಮ ಡಾಲಿ ಯಾವ್ದೋ ಹೊಸ ಪ್ರಾಜೆಕ್ಟ್​ ಗೆ ಕೈ ಹಾಕಿದ್ದಾನೆ ಅನ್ಸುತ್ತೆ  ಕಾಣ್ತಾ ಇಲ್ಲಾ ಎನ್ನುತ್ತಿದ್ದಾರಂತೆ.  ಇನ್ನು ಧನಂಜಯ ಅಭಿಮಾನಿಗಳಂತೂ ನಮ್ಮ ಕನ್ನಡದ ಕಂದ ಹೊರ ರಾಜ್ಯದಲ್ಲಿ  ಮಿಂಚೋದು  ಗ್ಯಾರಂಟಿ ಎನ್ನುತ್ತಿದ್ದಾರೆ.

ಕನ್ನಡದಲ್ಲಿ ಕೇವಲ ಧನಂಜಯ್ ಆಗಿದ್ದವರು ಈಗ ಡಾಲಿ ಧನಂಜಯ್ ಆಗೋಕೆ ಕಾರಣವೇ ‘ಟಗರು’ ಮತ್ತು ಸೂರಿ. ಸೂರಿ ತನ್ನ ಪಾತ್ರಸೃಷ್ಟಿಯಲ್ಲಿ ಅದೆಷ್ಟು ಚಾಣಾಕ್ಷ ಅನ್ನೋದಕ್ಕೆ ಅವರ ಸಿನಿಮಾಗಳೇ ಸಾಕ್ಷಿ. ಡಾಲಿಯನ್ನು ನೋಡಿದ ಮೇಲೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸರಿಯಾಗಿ ನಿದ್ದೆ ಮಾಡಿಲ್ಲವಂತೆ. ಡಾಲಿಯಿಂದ ಬೇರೆ ಏನನ್ನೋ ಮಾಡಿಸಬಹುದು ಅಂತ ಹೊಳೆದಿದೆ. ಆ ಯೋಚನೆಯ ಫಲವೇ ಈಗ ಬಿಡುಗಡೆಯಾಗಿರೋ ಈ ಹಸಿಹಸಿ ಫೋಟೋಸ್.

ಇದು ‘ಭೈರವ ಗೀತ’ ಅನ್ನೊ ಹೊಸ ಚಿತ್ರದ ಫೋಟೋಶೂಟ್. ಡಾಲಿ ಧನಂಜಯ್ ಮೊದಲ ಬಾರಿಗೆ ಬೇರೆ ಭಾಷೆಯಲ್ಲಿ ಅಭಿನಯಿಸೋಕೆ ರೆಡಿಯಾಗಿರೊ ವೇದಿಕೆಯ ಮೊದಲ ನೋಟ. ಫೋಟೋದಲ್ಲಿ ಧನಂಜಯ್ ಕೈಲಿ ಹೀಗೆ ಮೊಂಡಾದ,ಕಿಲುಬು ಹಿಡಿದ ಕೊಡಲಿ ಕೊಟ್ಟು ಕಣ್ಣಲ್ಲಿ ಅದೇನೊ ಭಾವವನ್ನಿಟ್ಟು ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ ರಾಮ್ ಗೋಪಾಲ್ ವರ್ಮಾ.

ಈ ಸಿನಿಮಾದ ಹಣ ಮತ್ತು ಪ್ರಾಣ ಆರ್​ಜಿವಿ. ವರ್ಮಾ ಇಲ್ಲಿ ನಿರ್ಮಾಪಕರಾಗಿ ‘ಭೈರವ ಗೀತ’ವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡರೆ ಆತನ ಶಿಷ್ಯ ಸಿದ್ಧಾರ್ಥ್ ಈ ಸಿನಿಮಾಗೆ ಮೊದಲ ಬಾರಿಗೆ ಆ್ಯಕ್ಷನ್‍ಕಟ್ ಹೇಳುತ್ತಿದ್ದಾರೆ. ಇದೇ ತಿಂಗಳ 21ರಂದು ಈ ಚಿತ್ರದ ಫಸ್ಟ್​ಲುಕ್​ ಅನಾವರಣಗೊಳ್ಳಲಿದೆ.

ಬರೀ ಅದೃಷ್ಟವನ್ನ ನಂಬಿ ಬದುಕೋದಲ್ಲ, ಪ್ರತಿಭೆನೂ ಇರಬೇಕು; ಹಾಗೇ ಕೇವಲ ಪ್ರತಿಭೆ ಇದ್ದರೆ ಸಾಲದು, ಅದೃಷ್ಟವೂ ಬೇಕು ಅನ್ನೊ ಮಾತು ಧನಂಜಯ್ ಅಲಿಯಾಸ್ ಡಾಲಿಯ ಬೆಳವಣಿಗೆ ನೋಡಿದಾಗ ಅನ್ನಿಸುತ್ತದೆ. ಸಿನಿಮಾ ಅನ್ನೊ ಈ ಮಾಯಾಪ್ರಪಂಚದಲ್ಲಿ ಇಂಥ ಅನೇಕ ಜಾದೂ ಆಗುವ ಮೂಲಕ ಆಗಾಗ  ಸಾಮಾನ್ಯರನ್ನ ಸದಾ ಬೆರಗುಗೊಳಿಸುತ್ತವೆ.

Please follow and like us:
0
http://bp9news.com/wp-content/uploads/2018/06/collage-1-21.jpghttp://bp9news.com/wp-content/uploads/2018/06/collage-1-21-150x150.jpgBP9 Bureauಸಿನಿಮಾಟಗರು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಹಿಟ್ ಆದ ಮೇಲೆ  ನಟಿಸಿದ ಕಲಾವಿದರಿಗೆ ​ ಸ್ಟಾರ್​ ಇಮೇಜ್​ ತಂದು ಕೊಟ್ಟಿತು. ಟಗರು ಶಿವ, ಪುಟ್ಟಿ ಕಾನ್ಸ್​ಟೇಬಲ್​  ಸರೋಜ, ಡಾಲಿ ಧನಂಜಯ, ಚಿಟ್ಟೆ ಹೀಗೆ ಒಬ್ಬೊಬ್ಬರಿಗೂ ಒಂದೊಂದು ನ್ಯೂ ಡಿಫರೆಂಟ್​ ಲುಕ್​ ಕ್ರಿಯೇಟ್​ ಆಯ್ತು.  ಧನಂಜಯನ ಹೆಸರು ಸದ್ಯ ಡಾಲಿ ಅಂತಾನೇ ಫೇಮಸ್ಸ್​. ಟಗರು ಮುಗಿದ ಮೇಲೂ ಧನಂಜಯಗೆ ಸಿಕ್ಕಾಪಟ್ಟೆ ಆಫರ್​ ಬಂತು. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಲು  ಈಗಲೇ...Kannada News Portal