ಬೆಂಗಳೂರು : ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದುವ ವಿಚಾರದಲ್ಲಿ ಪಾಕಿಸ್ತಾನವು ಭಾರತವನ್ನು ಹಿಂದಿಕ್ಕಿದೆ ಎಂದು ಸ್ವೀಡನ್‌ನ ‘ಸ್ಟಾಕ್‌ಹೋಮ್ ಅಂತರ ರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ (ಎಸ್‌ಐಪಿಆರ್‌ಐ) ತನ್ನ ವಾರ್ಷಿಕ ಪರಮಾಣು ಶಕ್ತಿ ಅಂಕಿ–ಅಂಶಗಳನ್ನು ಬಹಿರಂಗಪಡಿಸಿದೆ.

ಈ ವರ್ಷ ಪಾಕಿಸ್ತಾನದ ಬಳಿ 140ರಿಂದ 150 ಅಣ್ವಸ್ತ್ರ ಸಿಡಿತಲೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸದಾಗಿ 10 ಸಿಡಿತಲೆಗಳು ಸೇರ್ಪಡೆಯಾಗಿವೆ. ಭಾರತವು 130–140ನ್ನು ಮಾತ್ರ ಹೊಂದಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ಭಾರತ ಹಾಗೂ ಪಾಕಿಸ್ತಾನಗಳೆರಡೂ ತಮ್ಮ ಪರಮಾಣು ಅಸ್ತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುತ್ತಿವೆ. ಭೂ ಮೇಲ್ಮೈ ಆಗಸ ಹಾಗೂ ಸಮುದ್ರದ ಮೇಲೆ ಕಾರ್ಯಾಚರಿಸಬಲ್ಲ ಹೊಸ ಕ್ಷಿಪಣಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿವೆ.‘ಪರಮಾಣು ಶಸ್ತ್ರಾಸ್ತ್ರ ಆಧುನೀಕರಣ ಪ್ರಕ್ರಿಯೆಯನ್ನು ಚೀನಾ ಮುಂದುವರಿಸಿದ್ದು, ಸಲಕರಣೆಗಳ ದಾಸ್ತಾನನ್ನು ಕ್ರಮೇಣ ಹೆಚ್ಚಿಸಿಕೊಳ್ಳುತ್ತಿದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

ಒಟ್ಟು ಅಣ್ವಸ್ತ್ರ ಸಿಡಿತಲೆಗಳಲ್ಲಿ ಅಮೆರಿಕ ಹಾಗೂ ರಷ್ಯಾಗಳ ಪಾಲು ಶೇ 92. ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ ಇಸ್ರೇಲ್ ಹಾಗೂ ಉತ್ತರ ಕೊರಿಯಾಗಳ ಬಳಿ 14,465 ಸಿಡಿತಲೆಗಳಿವೆ. ಈ ಪೈಕಿ 3750ನ್ನು ಈಗಾಗಲೇ ನಿಯೋಜಿಸಲಾಗಿದೆ.

Please follow and like us:
0
http://bp9news.com/wp-content/uploads/2018/06/ind-pak.jpghttp://bp9news.com/wp-content/uploads/2018/06/ind-pak-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯBig Shocking News: Nuclear Thought: Pakistan Is More Right Than Indiaಬೆಂಗಳೂರು : ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದುವ ವಿಚಾರದಲ್ಲಿ ಪಾಕಿಸ್ತಾನವು ಭಾರತವನ್ನು ಹಿಂದಿಕ್ಕಿದೆ ಎಂದು ಸ್ವೀಡನ್‌ನ ‘ಸ್ಟಾಕ್‌ಹೋಮ್ ಅಂತರ ರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ (ಎಸ್‌ಐಪಿಆರ್‌ಐ) ತನ್ನ ವಾರ್ಷಿಕ ಪರಮಾಣು ಶಕ್ತಿ ಅಂಕಿ–ಅಂಶಗಳನ್ನು ಬಹಿರಂಗಪಡಿಸಿದೆ. ಈ ವರ್ಷ ಪಾಕಿಸ್ತಾನದ ಬಳಿ 140ರಿಂದ 150 ಅಣ್ವಸ್ತ್ರ ಸಿಡಿತಲೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸದಾಗಿ 10 ಸಿಡಿತಲೆಗಳು ಸೇರ್ಪಡೆಯಾಗಿವೆ. ಭಾರತವು 130–140ನ್ನು ಮಾತ್ರ ಹೊಂದಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ. var domain = (window.location...Kannada News Portal