ಅಂದಹಾಗೇ ಬಿ ಟೌನ್​ ನ ಈ  ಬಿಗ್​ ಸ್ಟಾರ್​ಗಳು ಮಾಡಿದ್ದಾದ್ರು ಏನು..? ಇನ್ನು  ಅಮೇರಿಕಾದಲ್ಲಿ ಬಾಲಿವುಡ್​ ಮಂದಿ ಮೋಸಗಾರರು ಎಂಬ ಸುದ್ದಿ ಹರಿದಾಡುತ್ತಿದ್ದ ಬೆನ್ನಲ್ಲೇ ಬಿ ಟೌನ್ ಪಂಡಿತರ ಬಾಯಿಗೆ ಆಹಾರವಾಗಿದ್ದಾರೆ. ಮೋಸ ಮಾಡಿ ಹಣ ಪಡೆದು  ಕೈ ಕೊಟ್ಟಿದ್ದಾರೆ ಈ ಸ್ಟಾರ್​ ನಟರು. ಸಲ್ಮಾನ್​ ಖಾನ್​, ರಣವೀರ್​ ಸಿಂಗ್​, ಸೋನಾಕ್ಷಿ  ಸಿನ್ಹಾ, ಪ್ರಭುದೇವ, ಕತ್ರಿನಾ ಕೈಫ್​ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಮೋಸಗಾರರು ಎಂಬ ಹಣೆ ಪಟ್ಟಿ ಹಚ್ಚಿಸಿಕೊಂಡಿದ್ದಾರೆ. ಇವರ ಮೇಲೆ  ಅಮೇರಿಕಾದ ಕಂಪನಿಯಯೊಂದು ಆರೋಪ ಮಾಡುತ್ತಿದೆ .ಬಾಲಿವುಡ್​ ಒಂದು ಗಾಸಿಪ್​ ಸಾಗರ ಎಂಬ ಮಾತಿದೆ. ಅದರ ಜೊತೆಗೆ  ಬಾಲಿವುಡ್ ಸ್ಟಾರ್​ಗಳು ಮೋಸಗಾರರು ಎಂದು ಹೊಸದಾಗಿ ಸೇರಿಕೊಂಡಿದೆ.

2013 ರಲ್ಲಿ ಭಾರತೀಯ  ಸಿನಿಮಾದ ಶತಮಾನೋತ್ಸವ ಅಂಗವಾಗಿ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಈ ಸಮಾರಂಭವನ್ನು ನಡೆಸಿಕೊಡುವಂತೆ ಈ ಸ್ಟಾರ್​ಗಳಿಗೆ ಅಡ್ವಾನ್ಸ್​  ಕೊಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಈ ನಟರು ಯಾರು ಕಾರ್ಯಕ್ರಮ ನಡೆಸಿಕೊಡದೇ  ಕೈ ಕೊಟ್ಟಿದ್ದರು. ಈ ಸಂಬಂಧ ಕಂಪನಿಯು ನಟರನ್ನು ಸಂಪರ್ಕಿಸಿತ್ತು. ಆದರೆ ಇವರು ಯಾರು ಉತ್ತರ ನೀಡಿರಲಿಲ್ಲ. ಇದರಿಂದ ಬೇಸತ್ತ ಕಂಪನಿ ನೇರವಾಗಿ ಕೋರ್ಟಿನ ಮೆಟ್ಟಿಲು ಏರಿದ್ದು, ಇದೀಗ ದೂರು ದಾಖಲಾಗಿದೆ. ಇವರಷ್ಟೇಅ ಲ್ಲದೇ ಗಾಯಕರಾದ ಉದಿತ್​ ನಾರಯಣ್​, ಅಲ್ಕಾ ಯಾಗ್​ ನಿಕ್​ ಮತ್ತು ಉಷಾ ಮಂಗೇಶ್ಕರ್​ ಮೇಲೂ ದೂರು ದಾಖಲಾಗಿದೆ. ಈ ನಟರ ತಪ್ಪಿನಿಂದಾಗಿ ಸುಮಾರು 1 ಮಿಲಿಯನ್​ ಅಮೆರಿಕಾನ್​ ಡಾಲರ್​ ನಷ್ಟವಾಗಿದೆ ಎಂದು ಕಂಪನಿ ದೂರಿನಲ್ಲಿ ಆರೋಪಿಸಿದೆ.

Please follow and like us:
0
http://bp9news.com/wp-content/uploads/2018/06/collage-30.jpghttp://bp9news.com/wp-content/uploads/2018/06/collage-30-150x150.jpgBP9 Bureauಪ್ರಮುಖಸಿನಿಮಾಅಂದಹಾಗೇ ಬಿ ಟೌನ್​ ನ ಈ  ಬಿಗ್​ ಸ್ಟಾರ್​ಗಳು ಮಾಡಿದ್ದಾದ್ರು ಏನು..? ಇನ್ನು  ಅಮೇರಿಕಾದಲ್ಲಿ ಬಾಲಿವುಡ್​ ಮಂದಿ ಮೋಸಗಾರರು ಎಂಬ ಸುದ್ದಿ ಹರಿದಾಡುತ್ತಿದ್ದ ಬೆನ್ನಲ್ಲೇ ಬಿ ಟೌನ್ ಪಂಡಿತರ ಬಾಯಿಗೆ ಆಹಾರವಾಗಿದ್ದಾರೆ. ಮೋಸ ಮಾಡಿ ಹಣ ಪಡೆದು  ಕೈ ಕೊಟ್ಟಿದ್ದಾರೆ ಈ ಸ್ಟಾರ್​ ನಟರು. ಸಲ್ಮಾನ್​ ಖಾನ್​, ರಣವೀರ್​ ಸಿಂಗ್​, ಸೋನಾಕ್ಷಿ  ಸಿನ್ಹಾ, ಪ್ರಭುದೇವ, ಕತ್ರಿನಾ ಕೈಫ್​ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಮೋಸಗಾರರು ಎಂಬ ಹಣೆ ಪಟ್ಟಿ ಹಚ್ಚಿಸಿಕೊಂಡಿದ್ದಾರೆ....Kannada News Portal