ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಂದಹಾಗೇ ನಮ್ಮ  ಕ್ಯೂಟ್​ ಚಿತ್ತಾರದ ಚೆಲುವೆ  ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮಿಗೂ ಎತ್ತಡ ಸಂಬಂಧ. ಅಂದಹಾಗೇ  ಸೆಲೆಬ್ರಿಟಿಗಿಂತಲೂ , ಇನ್ನೂ ಯಾಕೆ ಪತಿ ದರ್ಶನ್​ಕ್ಕಿಂತೂ  ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗ್ತಿದ್ದಾರೆ ಮಿಸಸ್​ದ ರ್ಶನ್​. ಅಂದಹಾಗೇ ಈ ಬಾರಿ ನಟಿ ಅಮೂಲ್ಯ ಅವರಿಗೆ ಬರ್ತ್​ಡೇ ಡೇ ವಿಶ್​ ಮಾಡಿದ್ದಾರೆ.

ಸ್ಯಾಂಡಲ್ ವುಡ್ ಚಿಲುವಿನ ಚಿತ್ತಾರದ ಹುಡುಗಿ ಅಮೂಲ್ಯ ಜಗದೀಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ತಮ್ಮ ಮನೆಯವರ ಜೊತೆಗೆ ಬರ್ತ್  ಡೇಯನ್ನು ಆಚರಣೆ ಮಾಡಿಕೊಂಡಿದ್ದಾರೆ.

ಅಮೂಲ್ಯ ತನ್ನ ತವರು ಮನೆಯಲ್ಲಿ ಹುಟ್ಟಹಬ್ಬವನ್ನು ಆಚರಣೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಪತಿ ಮನೆಯವರು ಮತ್ತು ಅಭಿಮಾನಿಗಳ ಮುಂದು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

 

ಗುರುವಾರ ಗೌರಿ-ಗಣೇಶ ಹಬ್ಬದಂದು ಅಮೂಲ್ಯ ಜಗದೀಶ್ ಅವರು ಮಣ್ಣಿನ ಗಣಪನನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಿಮ್ಮ ಮನೆಯಲ್ಲೂ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪನೆ ಮಾಡಿ ಎಂದು ಗೌರಿ-ಗಣೇಶ ಹಬ್ಬದ ಶುಭಾಶಯವನ್ನು ತಿಳಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

ಹಬ್ಬಕ್ಕೆಂದು ಅಮ್ಮನ ಮನೆಗೆ ಬಂದಿದ್ದ ಅಮೂಲ್ಯಗೆ ಅಂದು ಮಧ್ಯರಾತ್ರಿಯೇ ಅವರ ಅಮ್ಮ, ಅಣ್ಣ ಮತ್ತು ಕುಟುಂಬದ ಆಪ್ತರು ಕೇಕ್ ತಂದು ಕತ್ತರಿಸಿ ಶುಭಾಶಯವನ್ನು ತಿಳಿಸಿದ್ದಾರೆ. ಬಳಿಕ ಅವರ ಪತಿ ಜಗದೀಶ್ ಮತ್ತು ಅತ್ತೆ, ಮಾವ ಎಲ್ಲರು ಕೇಕ್ ಕತ್ತರಿಸಿ ಶುಭ ಕೋರಿದ್ದಾರೆ.

ಬರ್ತ್ ಡೇ ಫೋಟೋಗಳನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಅಮೂಲ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅಮೂಲ್ಯ ನಟ ಗಣೇಶ್ ಅಭಿನಯದ ‘ಮುಗುಳು ನಗೆ’ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ `ವೇದಾಲಂ’ ತಮಿಳು ರಿಮೇಕ್ ಸಿನಿಮಾ ಮಾಡಲಿದ್ದು, ಈ ಚಿತ್ರದಲ್ಲಿ ದರ್ಶನ್ ತಂಗಿಯ ಪಾತ್ರದಲ್ಲಿ ಅಮೂಲ್ಯ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

Please follow and like us:
0
http://bp9news.com/wp-content/uploads/2018/09/41675003_1107889559372517_3562742107233845248_n.jpghttp://bp9news.com/wp-content/uploads/2018/09/41675003_1107889559372517_3562742107233845248_n-150x150.jpgBP9 Bureauಸಿನಿಮಾಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಂದಹಾಗೇ ನಮ್ಮ  ಕ್ಯೂಟ್​ ಚಿತ್ತಾರದ ಚೆಲುವೆ  ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮಿಗೂ ಎತ್ತಡ ಸಂಬಂಧ. ಅಂದಹಾಗೇ  ಸೆಲೆಬ್ರಿಟಿಗಿಂತಲೂ , ಇನ್ನೂ ಯಾಕೆ ಪತಿ ದರ್ಶನ್​ಕ್ಕಿಂತೂ  ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗ್ತಿದ್ದಾರೆ ಮಿಸಸ್​ದ ರ್ಶನ್​. ಅಂದಹಾಗೇ ಈ ಬಾರಿ ನಟಿ ಅಮೂಲ್ಯ ಅವರಿಗೆ ಬರ್ತ್​ಡೇ ಡೇ ವಿಶ್​ ಮಾಡಿದ್ದಾರೆ. ಸ್ಯಾಂಡಲ್ ವುಡ್ ಚಿಲುವಿನ ಚಿತ್ತಾರದ ಹುಡುಗಿ...Kannada News Portal