ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 56 ನೇ ವರ್ಷಕ್ಕೆ ಕಾಲಿಟ್ಟಿರುವ ಕರ್ನಾಟಕದ ಚಕ್ರವರ್ತಿ ಶಿವಣ್ಣನ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್​ ಹುಟ್ಟುಹಬ್ಬವನ್ನು ಬಹಳ ಸಡಗರದಿಂದ, ಸಂಭ್ರಮದಿಂದ ಸರಳವಾಗಿ ಆಚರಿಸಿಕೊಂಡಿದ್ದಾರೆ.

ಶಿವರಾಜ್​ಕುಮಾರ್​ ಜೊತೆ ಪತ್ನಿ ಗೀತಾ  ಜೊತೆ ಕೇಕ್​ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಶುಭ ಕೋರಲು ನಾನಾ ಜಿಲ್ಲೆಗಳಿಂದ ಅಭಿಮಾನಿಗಳು, ಶಿವಣ್ಣರ ನಿವಾಸಕ್ಕೆ  ಆಗಮಿಸಿ ಶುಭ ಕೋರಿದ್ದಾರೆ.

ಈ ಬಗ್ಗೆ ಮಾತನಾಡಿದ ಶಿವಣ್ಣ, ಅಭಿಮಾನಿಗಳನ್ನು ನೋಡಿದ್ರೆ ಖುಷಿಯಾಗುತ್ತೆ, ಅವರು ತೋರಿಸುತ್ತಿರುವ ಪ್ರೀತಿ, ಸಂತೋಷ ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತದೆ ಎಂದಿದ್ದಾರೆ,  ಅಲ್ಲದೇ ಈ ಬಾರಿ ಟಗರು ಯಶಸ್ಸಿನ ಖುಷಿ ಇದೆ. ಅಲ್ಲದೇ ದಿ ವಿಲನ್​ ಟೀಸರ್​ ರಿಲೀಸ್​ ಆಗಿದೆ, ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಇನ್ನೂ ಕವಚ, ರುಸ್ತುಂನಲ್ಲಿ ನಟಿಸ್ತಾ ಇದ್ದೇನೆ. ಅಲ್ಲದೇ ಈ ಬಾರಿ ನನ್ನ ಮಗಳು ನನ್ನ ಬರ್ತ್​ ಡೇ ಗೆ ವಿಶೇಷ ಗಿಫ್ಟ್​ ಕೊಟ್ಟಿದ್ದಾಳೆ. ಯುವರ ರಾಜ್​ ಟೀ ಶರ್ಟ್​ ಕೊಟ್ಟಿದ್ದು ಬಹಳ ಖುಷಿಯಾಗ್ತಿದೆ ಎಂದು ಸಂತೋಷ ಹಂಚಿಕೊಂಡರು.

ಶಿವಣ್ಣನ ಹುಟ್ಟುಹಬ್ಬಕ್ಕೆ ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿ ಶುಭಾಷಯ ಕೋರಿದ್ದಾರೆ . ನಾಲ್ಕೈದು ದಿನ ಮುಂಚಿತವಾಗಿಯೇ ಅಭಿಮಾನಿಯೊಬ್ಬ ದೂರದ ಜಿಲ್ಲೆಯಿಂದ ಸೈಕಲ್​ ಯಾತ್ರೆಮಾಡಿ  ಬೆಂಗಳೂರಿಗೆ ಬಂದು ವಿಶ್​ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/07/shivarajkumar.jpghttp://bp9news.com/wp-content/uploads/2018/07/shivarajkumar-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 56 ನೇ ವರ್ಷಕ್ಕೆ ಕಾಲಿಟ್ಟಿರುವ ಕರ್ನಾಟಕದ ಚಕ್ರವರ್ತಿ ಶಿವಣ್ಣನ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್​ ಹುಟ್ಟುಹಬ್ಬವನ್ನು ಬಹಳ ಸಡಗರದಿಂದ, ಸಂಭ್ರಮದಿಂದ ಸರಳವಾಗಿ ಆಚರಿಸಿಕೊಂಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal