ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮಂಗಲಪದವು, ಕುಡ್ತಮುಗೇರಿನಲ್ಲಿ ವಿಜಯೋತ್ಸವದ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ನಿನ್ನೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ  ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವನ್ನ ಸಂಸದ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಮಾತನಾಡಿದ ಸಂಸದ ಕಟೀಲ್, ಹಿಂದೂ ಸಮಾಜವನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಹಲ್ಲೆ ಮಾಡುವ ದ್ವೇಷದ ರಾಜಕಾರಣ ಆರಂಭಗೊಂಡಿದೆ. ಇದೊಂದು ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿಯಾಗಿದೆ ಎಂದು  ಆರೋಪಿಸಿದ್ದಾರೆ. ಕಳೆದ ಚುನಾವಣೆಲ್ಲಿ ಬಿಜೆಪಿಯ ಏಳು ಮಂದಿ ಶಾಸಕರು ಗೆಲುವಿನ ಮೂಲಕ ಜನರ ಆಶೀರ್ವಾದ ಪಡೆದಿದ್ದು, ಅದನ್ನು ಸಹಿಸದ ಕಾಂಗ್ರೆಸ್‌ನ ಕಾರ್ಯಕರ್ತರು ವಿಜಯೋತ್ಸವಗಳಲ್ಲಿ ಹಲ್ಲೆ ಮಾಡುವುದನ್ನು ಆರಂಭಿಸಿದ್ದಾರೆ.

ನಿನ್ನೆ ಸರಕಾರ ಬದಲಿಯಾದ ಕಾರಣ ಕಾರ್ಯಕರ್ತರು ನೇರವಾಗಿ ಮನೆಗಳಿಗೆ ದಾಳಿ ಮಾಡಿ ಹಲ್ಲೆ ಮಾಡುವುದನ್ನು ಆರಂಭಿಸಿದ್ದಲ್ಲದೆ, ಹಿಂದೂ ಸಮಾಜ ಹಾಗೂ ದೇವತೆಗಳನ್ನು ನಿಂದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Please follow and like us:
0
http://bp9news.com/wp-content/uploads/2018/05/Karnatakada-Miditha-66.jpeghttp://bp9news.com/wp-content/uploads/2018/05/Karnatakada-Miditha-66-150x150.jpegBP9 Bureauಮಂಗಳೂರುಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮಂಗಲಪದವು, ಕುಡ್ತಮುಗೇರಿನಲ್ಲಿ ವಿಜಯೋತ್ಸವದ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ನಿನ್ನೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ  ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವನ್ನ ಸಂಸದ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಸಂಸದ ಕಟೀಲ್, ಹಿಂದೂ ಸಮಾಜವನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಹಲ್ಲೆ ಮಾಡುವ ದ್ವೇಷದ ರಾಜಕಾರಣ ಆರಂಭಗೊಂಡಿದೆ....Kannada News Portal