ಬೆಂಗಳೂರು :   ರಾಜ್ಯಪಾಲರ ನಡೆ, ಸಂವಿಧಾನದ ಕಗ್ಗೊಲೆ. ಬಿಜೆಪಿ  ನೇತೃತ್ವದ ಮೋದಿ ಸರ್ಕಾರ. ಸ್ವಚ್ಛ ಆಡಳಿತ ನೀಡುತ್ತೇನೆ ಎಂಬುದು ಬೊಗಳೆ. ಅಕ್ರಮವಾಗಿ ಹಿಂಬಾಗಿಲಿನಿಂದ ಅಧಿಕಾರ ಪಡೆಯುವುದು ಅವರ ಉದ್ದೇಶ. ಅದಕ್ಕಾಗಿ ಏನು ಮಾಡಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್​ ಶಾಸಕ  ಆನಂದ್​ ಸಿಂಗ್​ಗೆ ನೀನು ಬಿಜೆಪಿಗೆ ಬೆಂಬಲಿಸದಿದ್ದರೆ ಇಡಿ ಮತ್ತು ಐಟಿ ದಾಳಿ ನಡೆಸಿ ನಿನ್ನ ಮುಗಿಸುವುದಾಗಿ ಬೆದರಿಕೆ ಹಾಕಿ, ಅವರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರ ಈ ನಡೆ ವಿರುದ್ಧ ನಾವು  ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದೇವೆ, ಈ ಸಂಬಂಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಹೋರಾಟ ನಡೆಸಿದ್ದಾರೆ.

ಇದರಿಂದಾಗಿ ಸಂವಿಧಾನದ ಕಗ್ಗೊಲೆ ಆಗುತ್ತಿದೆ. ಈ ದೇಶದ ಜನತೆ ಇದರ ವಿರುದ್ಧ ಪ್ರತಿಭಟನೆ ನಡೆಸ ಬೇಕು. ಇಲ್ಲದಿದ್ದರೆ ಬಿಜೆಪಿ ಈ ದಬ್ಬಾಳಿಕೆ ಇನ್ನೂ ಹಲವು ರಾಜ್ಯಗಳಲ್ಲಿ ಹಬ್ಬುತ್ತದೆ ಎಂದು   ಕುಮಾರಸ್ವಾಮಿ ಮನವಿ ಮಾಡಿದರು.

Please follow and like us:
0
http://bp9news.com/wp-content/uploads/2018/05/collage-2-26.jpghttp://bp9news.com/wp-content/uploads/2018/05/collage-2-26-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು :   ರಾಜ್ಯಪಾಲರ ನಡೆ, ಸಂವಿಧಾನದ ಕಗ್ಗೊಲೆ. ಬಿಜೆಪಿ  ನೇತೃತ್ವದ ಮೋದಿ ಸರ್ಕಾರ. ಸ್ವಚ್ಛ ಆಡಳಿತ ನೀಡುತ್ತೇನೆ ಎಂಬುದು ಬೊಗಳೆ. ಅಕ್ರಮವಾಗಿ ಹಿಂಬಾಗಿಲಿನಿಂದ ಅಧಿಕಾರ ಪಡೆಯುವುದು ಅವರ ಉದ್ದೇಶ. ಅದಕ್ಕಾಗಿ ಏನು ಮಾಡಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್​ ಶಾಸಕ  ಆನಂದ್​ ಸಿಂಗ್​ಗೆ ನೀನು ಬಿಜೆಪಿಗೆ ಬೆಂಬಲಿಸದಿದ್ದರೆ ಇಡಿ ಮತ್ತು ಐಟಿ ದಾಳಿ ನಡೆಸಿ ನಿನ್ನ ಮುಗಿಸುವುದಾಗಿ ಬೆದರಿಕೆ ಹಾಕಿ, ಅವರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಿಜೆಪಿ...Kannada News Portal