ವಿಜಯಪುರ: ಸಂತರು, ಮಠಾಧೀಶರು ಈ ಪ್ರದೇಶದಲ್ಲಿ ಸಾಕಷ್ಟು ಅದ್ಭುತ ಕೆಲಸವಾಗಿದೆ. ನಮ್ಮ ಕರ್ನಾಟದಲ್ಲಿ ತ್ರಿವಿಧ ದಾಸೋಹ ನಿರ್ಮಾಣ ಮಾಡಿದ್ದಾರೆ. ಭಾರತೀಯ ಜನತ ಪಕ್ಷಕ್ಕೂ ಕೂಡ ಇದೇ ಧ್ಯೇಯವಾಗಿದೆ. ಅಕ್ಷರ , ಅನ್ನ , ಆರೋಗ್ಯದ ಸೇವೆಯೇ ನಮ್ಮ ಮಂತ್ರವೂ ಹೌದು ಎಂದು ಪ್ರಧಾನಿ ಮೋದಿ ವಿಜಯಪುರದಲ್ಲಿ ಹೇಳಿದ್ದಾರೆ.

ಇಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಈ ವಿಷಯ ತಿಳಿಸಿದ ಅವರು, ವಿಜಯಪುರ ಮಹಾ ಜನತೆಗೆ ಸಮಸ್ಕಾರಗಳು. ಈ ಪುಣ್ಯ ಭೂಮಿಯಲ್ಲಿ ಜನಿಸಿದ ಜಗಜ್ಯೋತಿ ಬಸವಣ್ಣ, ಆಲೂರು ವೆಂಕರರಾವ್ ಅವರಿಗೆ ವಂದಿಸಿ, ಸಿದ್ದೇಶ್ವರಸ್ವಾಮಿಗೆ ಪ್ರಣಾಮಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಸಿದ ಮೋದಿ, ನಿಮ್ಮ ಉತ್ಸಾಹಕ್ಕೆ ನಾನು ಚಕಿತನಾಗಿದ್ದೇನೆ ಎಂದರು.

ಹವಾನಿಯಂತ್ರಿತ ಕೊಠಡಯಲ್ಲಿ ಕುಳಿತು ರಾಜ್ಯದಲ್ಲಿ ಪೂರ್ಣ ಬಹುಮತ ಬರುವುದಿಲ್ಲ, ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಹೇಳುತ್ತಿದ್ದಾರೋ ಅವರು ಬಂದು ಈ ಮೈದಾನದಲ್ಲಿ ಸೇರಿರುವ ಜನ ಸಾಗರವನ್ನು ನೋಡಬೇಕು. ಇಡೀ ರಾಜ್ಯದಲ್ಲಿ ಬದಲಾವಣೆಯ ವಾತಾವರಣ ಇದೆ. ನಾನು ಆರೇಳು ದಿನಗಳಿಂದ ರಾಜ್ಯದ ಪ್ರವಾಸದಲ್ಲಿ ಇದ್ದೇನೆ. ಇಲ್ಲಿನ ಜನ ಕೇವಲ ಸರ್ಕಾರವನ್ನು ಬದಲಾವಣೆ ಮಾಡಬೇಕು ಎಂಬ ಆಶಯ ಹೊಂದಿಲ್ಲ. ಆಗಿರುವ ನಷ್ಟ, ಅಕ್ರಮಗಳಿಗೆ ತಕ್ಕ ಪಾಠ ಕಲಿಸಬೇಕು ಎಂಬ ಆಶಯ ಹೊಂದಿದ್ದಾರೆ.

ಕಾಂಗ್ರೆಸ್ನ ಪ್ರಮುಖರು ಮತದಾರರ ಜೊತೆ ಸಂಪರ್ಕ ಹೊಂದುವುದನ್ನ ಮರೆತಿದ್ದಾರೆ. ಈಗಾಗಲೇ ಅವರ ಕಚೇರಿಯಲ್ಲಿ ಫಲಿತಾಂಶ ಬಂದ ಮೇಲೆ EVM ಮೇಲೆ ಹೇಗೆಲ್ಲಾ ಗೂಬೆ ಕೂರಿಸಬಹುದು ಎಂದು ಪ್ಲಾನ್ ಮಾಡುತ್ತಿದ್ದಾರೆ. ಇದು ಇಂದಿನ ರಾಜ್ಯ ಮತ್ತು ಕೇಂದ್ರ ಕಾಂಗ್ರೆಸ್ನ ಪರಿಸ್ಥಿತಿಯಾಗಿದೆ.

ಇವ ಯಾರವ, ಇವ ಯಾರವ, ಇವ ನಮ್ಮವ ಎಂಬ ಬಸವಣ್ಣನ ವಚನವನ್ನು ಕನ್ನಡದಲ್ಲಿ ತಡವರಿಸುತ್ತಲೇ ತುಸು ಸ್ಪಷ್ಟವಾಗಿಯೇ ಹೇಳಿದ ಮೋದಿ, ವಿಜಯಪುರವಾದ ಈ ಪ್ರದೇಶ ಬಸವಣ್ಣನವರ ಜನ್ಮಸ್ಥಳ. ಯಾರನ್ನು ದೂರ ಮಾಡಬೇಡಿ, ಎಲ್ಲರೂ ಜೊತೆ ಜೊತೆಯಾಗಿ ಸಾಗೋಣ ಎಂಬುದು ಬಸವಣ್ಣನ ವಚನ. ಆದರೆ ಈ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ. ಅವರ ದಾರಿಯಲ್ಲಿ ಹೋಗೋದು ಇರಲಿ, ಅವರ ಧರ್ಮವನ್ನೇ ಹೊಡೆದು ಓಟ್ ಬ್ಯಾಂಕ್ ಮಾಡಲು ಕತಂತ್ರ ನಡೆಸಿದೆ. ಆದರೆ ಈ ಪುಣ್ಯ ಭೂಮಿಯಲ್ಲಿ ಅದು ಸಾಧ್ಯವಾಗದು ಎಂಬುದನ್ನು ಇಲ್ಲಿನ ಜನ ಮೇ 12ರಂದು ಬಿಜೆಪಿಗೆ ಮತ ನೀಡುವ ಮೂಲಕ ತಿಳಿಸಲಿದ್ದಾರೆ ಎಂದು ಗುಡುಗಿದರು.

ಕೆಲವು ವರ್ಷಗಳಿಂದ ಈ ಭಾಗ ಬರ ಪೀಡಿತವಾಗಿದೆ. ಶಾಲೆಯಲ್ಲಿ ಉಪನ್ಯಾಸಕರಿಲ್ಲ. ಭೂಮಾಫಿಯಾ ಕಾಟ ಬೇರೆ. ಆದರೆ ಈ ಭಾಗದ ಮೂರೂ ಜನ ಸಚಿವರು ಏನು ಮಾಡುತ್ತಿದ್ದರು. ಮತ್ತೇನು ಇಲ್ಲ ಧರ್ಮವನ್ನು ಹೇಗೆ ಹೊಡೆಯುವುದು ಎಂದು ಪ್ಲಾನ್ ಮಾಡುತ್ತಿದ್ದರು ಅಷ್ಟೇ.

ನೀವೆ ಹೇಳಿ ಈ ಸರ್ಕಾರದ ಯಾವ ಮಂತ್ರಿಯ ಮೇಲೆ ಭ್ರಷ್ಟಾಚಾರ ಆರೋಪ ಇಲ್ಲ ಎಂದು ಎಂಬುದಾಗಿ ಪ್ರಶ್ನಿಸಿದ ಪ್ರಧಾನಿ ಮೋದಿ, ತಮ್ಮ ನಿರಾವರಿ ಸಚಿವರನ್ನೇ ಉದಾಹರಣೆ ತೆಗೆದುಕೊಳ್ಳಿ ಅವರು ಯಾವ ಯಾವ ರೀತಿ ಗುತ್ತಿಗೆದಾರರು ಯಾವ ಯಾವ ಸ್ಥಳಗಳಲ್ಲಿ ಹಣ ಇಟ್ಟಿದ್ದರು, ಹೆಲಿಕ್ಯಾಪ್ಟರ್ ನಲ್ಲಿ ಓಡಾಡುವಂತೆ ಹಣ ಮಾಡಿದ್ದು ಹೇಗೆ ಎಂಬುದನ್ನು ತಾವು ತಿಳಿಯಲೇ ಬೇಕಾಗಿದೆ ಎಂದು ಎಂ ಬಿ ಪಾಟೀಲ ತಾವು ಬರುವ ಮೊದಲು ಟ್ವೀಟ್ ಮಾಡಿ ನೀಡಿದ್ದ ಟಾಂಟ್ ಗೆ ಉತ್ತರ ನೀಡಿದರು.

ಕಾಂಗ್ರೆಸ್ 50 ವರ್ಷಗಳಿಂದ ಮಾಡಿರದ ಕೆಲಸ, ಬಸವ ತತ್ವವನ್ನು ಆಡಳಿತದಲ್ಲಿ ಅಳವಡಿಸಿ ಕೊಳ್ಳಲಾಗಿದೆ. ಲಂಡನ್ನಲ್ಲಿ ಅವರ ಪುತ್ಥಳಿಯನ್ನು ಉದ್ಘಾಟನೆ ಮಾಡುವ ಅದೃಷ್ಠ ನನಗೆ ದೊರೆತಿದೆ.

ಮಕ್ಕಳಿಗೆ ಶಿಕ್ಷಣ , ಯುವಕರಿಗೆ ಕೆಲಸ, ವೃದ್ಧರಿಗೆ ಆರೋಗ್ಯ ಭಾಗ್ಯ ನೀಡುವಲ್ಲಿ ನಮ್ಮ ಸರ್ಕಾರ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಈ ಬಾರಿಯ ಬಜೆಟ್ನಲ್ಲಿಯೂ ಈ ಮೂರು ಅಂಶಗಳನ್ನು ತಂದಿರುವದು ನಿಮಗೆ ಕಾಣಸಿಗುತ್ತದೆ. ಮುದ್ರ ಯೋಜನೆ ಅಡಿಯಲ್ಲಿ12 ಸಾವಿರ ಕೋಟಿ ಸಾಲ ನೀಡಿ ಸ್ವಯಂ ಉದ್ಯೋಗ ಸೃಷ್ಠಿ ಮಾಡಿದ್ದೇವೆ. ರೈತರ ಸಂಕಷ್ಟಕ್ಕಾಗಿ ಫಸಲ್ ವಿಮಾ ಯೋಜನೆ ನೀಡಿದ್ದೇವೆ. ಅತ್ಯಂತ ಕಡಿಮೆ ಹಣ ನೀಡಿ ಪ್ರೀಮಿಯಂ ವಿಮೆ ಮಾಡಿಸಲು ಅವಕಾಶ ಮಾಡಿಕೊಟ್ಟು ರೈತರ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

ವೃದ್ಧಾಪ್ಯದಲ್ಲಿ ಇರುವವರಿಗೆ ಅಟಲ್ ಬಿಹಾರಿ ಪೆನ್ಶನ್ ಯೋಜನೆ ತಂದು ಅವರಿಗೆ ಸಹಾಯ ಹಸ್ತ ನೀಡಿದ್ದೇವೆ. ಆರೋಗ್ಯದ ವಿಚಾರವಾಗಿ ಆಯುಷ್ ಮಾನ್ ಭಾರತ್ ತಂದಿದೆ. 5 ಲಕ್ಷದ ವರೆಗಿನ ಸಹಾಯದ ಹಣವನ್ನುಕೇಂದ್ರ ಸರ್ಕಾರ ರೋಗಿಗಳಿಗೆ ನೀಡಲು ಮುಂದಾಗಿದೆ. ಇದು ನಮ್ಮ ತ್ರಿವಿಧ ದಾಸೋಹದ ಮಂತ್ರದ ಸಾಕಾರ ಕಾರ್ಯ ಎಂದು ಪಿಎಂ ಮೋದಿ ವಿಜಯಪುರದಲ್ಲಿ ಡೈನಮಿಕ್ ಭಾಷಣವನ್ನ ಮತ್ತೆ ಪ್ರಸ್ತುತಪಡಿಸಿದ್ರು.

Please follow and like us:
0
http://bp9news.com/wp-content/uploads/2018/05/ವಿಜಯ-ಪುರ.jpghttp://bp9news.com/wp-content/uploads/2018/05/ವಿಜಯ-ಪುರ-150x150.jpgPolitical Bureauಪ್ರಮುಖರಾಜಕೀಯವಿಜಯಪುರbjps-original-mantra-is-tripura-dasoha-modi-speaks-in-vijay-puraವಿಜಯಪುರ: ಸಂತರು, ಮಠಾಧೀಶರು ಈ ಪ್ರದೇಶದಲ್ಲಿ ಸಾಕಷ್ಟು ಅದ್ಭುತ ಕೆಲಸವಾಗಿದೆ. ನಮ್ಮ ಕರ್ನಾಟದಲ್ಲಿ ತ್ರಿವಿಧ ದಾಸೋಹ ನಿರ್ಮಾಣ ಮಾಡಿದ್ದಾರೆ. ಭಾರತೀಯ ಜನತ ಪಕ್ಷಕ್ಕೂ ಕೂಡ ಇದೇ ಧ್ಯೇಯವಾಗಿದೆ. ಅಕ್ಷರ , ಅನ್ನ , ಆರೋಗ್ಯದ ಸೇವೆಯೇ ನಮ್ಮ ಮಂತ್ರವೂ ಹೌದು ಎಂದು ಪ್ರಧಾನಿ ಮೋದಿ ವಿಜಯಪುರದಲ್ಲಿ ಹೇಳಿದ್ದಾರೆ. ಇಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಈ ವಿಷಯ ತಿಳಿಸಿದ ಅವರು, ವಿಜಯಪುರ ಮಹಾ ಜನತೆಗೆ ಸಮಸ್ಕಾರಗಳು. ಈ ಪುಣ್ಯ ಭೂಮಿಯಲ್ಲಿ ಜನಿಸಿದ...Kannada News Portal