JUGGESHಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಮುಖಂಡ, ಮಾಜಿ ಶಾಸಕರಾದ ನವರಸ ನಾಯಕ ಜಗ್ಗೇಶ್​ ಅವರಿಗೆ ನೀಡಲು ತಿರ್ಮಾನಿಸಲಾಗಿದೆ. ಇವರಿಗೆ ಟಿಕೆಟ್​ ನೀಡಲು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಆಸಕ್ತಿ ವಹಿಸಿದ್ದು. ಜಗ್ಗೇಶ್​ ಅವರೇ ಸೂಕ್ತ ಅಭ್ಯರ್ಥಿ ಎಂದು ಮಾಜಿ ಡಿಸಿಎಂ ಆರ್​ ಅಶೋಕ್​ ಕೂಡ ಜಗ್ಗೇಶ್​ ಅವರ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಯಶವಂತಪುರ ಕ್ಷೇತ್ರವನ್ನು ಕಾಂಗ್ರೆಸ್​ನ ಎಸ್​ಟಿ ಸೋಮಶೇಖರ್​ ಪ್ರತಿನಿಧಿಸುತ್ತಿದ್ದು ಅವರಿಗೆ ಸರಿಯಾದ ಎದುರಾಳಿ ಎಂದರೆ ನವರಸ ನಾಯಕ ಜಗ್ಗೇಶ್​ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದು. ಈಗಾಗಲೇ ಇಲ್ಲಿನ ಸ್ಥಳಿಯ ನಾಯಕರುಗಳು ಮತ್ತು ಟಿಕೆಟ್​ ಆಕಾಂಕ್ಷಿಗಳೊಂದಿಗೆ ಮಾತನಾಡಿರುವ ರಾಜ್ಯ ನಾಯಕರು, ಕ್ಷೇತ್ರದಲ್ಲಿ ಗೆಲ್ಲುವ ದೃಷ್ಟಿಯಿಂದ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದವಾಗಿರುವಂತೆ ಸೂಚಿಸಿರುವ ಕಾರಣದಿಂದಾಗಿ ಇಲ್ಲಿನ ಕಾರ್ಯಕರ್ತರು ಮತ್ತು ಮುಖಂಡರು ಯಾರಿಗೇ ಟಿಕೆಟ್​ ನೀಡಿದರರೂ ಪಕ್ಷದ ಪರವಾಗಿ ಕೆಲಸ ಮಾಡಲು ಸಿದ್ದರಾಗಿದ್ದಾರೆ.

ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಜಗ್ಗೇಶ್​ ಅಷ್ಟೇ ಸಕ್ರಿಯವಾಗಿ ರಾಜಕಾರಣದಲ್ಲಿಯೂ ಆ್ಯಕ್ಟಿವ್​ ಆಗಿದ್ದಾರೆ. ನಟನಾಗಿ ಎಲ್ಲರಿಗೂ ಚಿರಪರಿಚಿತರಾಗಿರುವ ಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರವಾಗಿ ಅವರು ಮಾಡುವ ಚರ್ಚೆಗಳಿಂದಾಗಿ ಜಗ್ಗೇಶ್​ ರನ್ನು ಚುನಾವಣೆಯಲ್ಲಿ ಟಿಕೆಟ್​ ನೀಡಿದರೆ ಸುಲಭವಾಗಿ ನಗರದ ವಿದ್ಯಾವಂತರ ಮತಗಳನ್ನು ಪಡೆದು ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಮಾಡಿದೆ.

Please follow and like us:
0
http://bp9news.com/wp-content/uploads/2018/03/JUGGESH.jpghttp://bp9news.com/wp-content/uploads/2018/03/JUGGESH-150x150.jpgBP9 News Bureauರಾಜಕೀಯjuggesh,R.Ashok,yashvanthpura bjp ticket to juggeshಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಮುಖಂಡ, ಮಾಜಿ ಶಾಸಕರಾದ ನವರಸ ನಾಯಕ ಜಗ್ಗೇಶ್​ ಅವರಿಗೆ ನೀಡಲು ತಿರ್ಮಾನಿಸಲಾಗಿದೆ. ಇವರಿಗೆ ಟಿಕೆಟ್​ ನೀಡಲು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಆಸಕ್ತಿ ವಹಿಸಿದ್ದು. ಜಗ್ಗೇಶ್​ ಅವರೇ ಸೂಕ್ತ ಅಭ್ಯರ್ಥಿ ಎಂದು ಮಾಜಿ ಡಿಸಿಎಂ ಆರ್​ ಅಶೋಕ್​ ಕೂಡ ಜಗ್ಗೇಶ್​ ಅವರ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಯಶವಂತಪುರ ಕ್ಷೇತ್ರವನ್ನು ಕಾಂಗ್ರೆಸ್​ನ ಎಸ್​ಟಿ ಸೋಮಶೇಖರ್​ ಪ್ರತಿನಿಧಿಸುತ್ತಿದ್ದು ಅವರಿಗೆ...Kannada News Portal