ಬಾಗಲಕೋಟೆ : ಇಮ್ಮಡಿ ಪುಲಿಕೇಶಿಯ ರಾಜಧಾನಿ ಬಾದಾಮಿ ಕ್ಷೇತ್ರ ಇದೀಗ ಇಬ್ಬರು ದಿಗ್ಗಜರ ಚುನಾವಣಾ ಕದನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಶ್ರೀರಾಮುಲು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇದೀಗ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ.

ಅಳೆದು ತೂಗಿ ಜಾತಿ, ಗೆಲುವಿನ ಸಾಧ್ಯತೆಗಳ ಲೆಕ್ಕಹಾಕಿ ಸಿಎಂ ಸಿದ್ದರಾಮಯ್ಯ ಕುರುಬ ಜನಾಂಗದ ಮತಗಳು ಅಧಿಕವಾಗಿರುವ ಬಾದಾಮಿ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳುತಿದ್ದಂತೆ, ಶತಾಯ ಗತಾಯ ಸಿಎಂ ಅವರನ್ನು ಮಣಿಸಿಯೇ ತೀರಬೇಕೆಂದು ಬಿಜೆಪಿ  ಮತ್ತೊಂದು ಪ್ರಭಲ ನಾಯಕ (ವಾಲ್ಮಿಕಿ) ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ. ಲಿಂಗಾಯತ (ಪಂಚಮಸಾಲಿ) ಸಮಾಜದ ಹಣಮಂತ ಮಾವಿನಮರದ ಜೆಡಿಎಸ್ ಅಭ್ಯರ್ಥಿಯಾಗಿರುವುದರಿಂದ ಯಾರಿಗೆ ತಾಯಿ ಬನಶಂಕರಿ ಆಶಿರ್ವಾದ ದೊರೆಯಲಿದೆ ಎನ್ನುವುದೇ ಕುತೂಹಲ ಮೂಡಿಸಿದೆ.

ಬಾದಾಮಿ ಕ್ಷೇತ್ರದಲ್ಲಿ ಇದು ಕೌರವ, ಪಾಂಡವರ ಯುದ್ಧ ಎನ್ನುತಿದ್ದಾರೆ, ಆದರೆ ಯಾರು ಕೌರವರು, ಪಾಂಡವರು ಎಂಬುದು ಕುರುಕ್ಷೇತ್ರದ ನಂತರವೇ ತಿಳಿಯಲಿದೆ,  ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪ್ರಭಾವಿ ಮುಖಂಡರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದರೆ, ಮಾವಿನಮರದ ನಾನು ಸ್ಥಳೀಯ ನಿಮ್ಮ ಜೊತೆ ನಾನಿರುವನೆ ಹೊರತು ಮೈಸೂರು, ಬಳ್ಳಾರಿಯವರಲ್ಲ ಎಂದು  ಮತದಾರರನ್ನು  ಸೆಳೆಯುತಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಬಾದಾಮಿ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದೆ. ನಾಮಪತ್ರ ಸಲ್ಲಿಸುವ ವೇಳೆ ಇಬ್ಬರು ನಾಯಕರು ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ. ಇದೀಗ ಕ್ಷೇತ್ರಕ್ಕೆ ಹೊರಗಿನವರು ಬಂದು ನಿಂತಿದ್ದಾರೆ. ಇಬ್ಬರು ಪ್ರಬಲ ಸಮದಾಯದವರಾಗಿದ್ದು, ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಸದ್ಯಕ್ಕೆ ಗೆಲುವು ಇವರಿಗೆ ಅಂಥ ಹೇಳುವ ವಾತಾವರಣ ಇಲ್ಲವಾಗಿದೆ.  ಇಬ್ಬರು ಮದಗಜಗಳ ಕಾಳಗದಲ್ಲಿ ಮತದಾರ ಪ್ರಭುಗಳು ಕೃಪೆ ಯಾರಿಗೆ..? ಎಂದು ಕಾದು ನೋಡಬೇಕಿದೆ.

ವರದಿ : ರವಿ ಜಾಧವ ಬಾಗಲಕೋಟೆ

 

 

 

 

 

Please follow and like us:
0
http://bp9news.com/wp-content/uploads/2018/04/collage-4-25.jpghttp://bp9news.com/wp-content/uploads/2018/04/collage-4-25-150x150.jpgBP9 Bureauಅಂಕಣಬಾಗಲಕೋಟೆರಾಜಕೀಯಬಾಗಲಕೋಟೆ : ಇಮ್ಮಡಿ ಪುಲಿಕೇಶಿಯ ರಾಜಧಾನಿ ಬಾದಾಮಿ ಕ್ಷೇತ್ರ ಇದೀಗ ಇಬ್ಬರು ದಿಗ್ಗಜರ ಚುನಾವಣಾ ಕದನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಶ್ರೀರಾಮುಲು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇದೀಗ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಅಳೆದು ತೂಗಿ ಜಾತಿ, ಗೆಲುವಿನ ಸಾಧ್ಯತೆಗಳ ಲೆಕ್ಕಹಾಕಿ ಸಿಎಂ ಸಿದ್ದರಾಮಯ್ಯ ಕುರುಬ ಜನಾಂಗದ ಮತಗಳು ಅಧಿಕವಾಗಿರುವ ಬಾದಾಮಿ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳುತಿದ್ದಂತೆ, ಶತಾಯ ಗತಾಯ ಸಿಎಂ ಅವರನ್ನು ಮಣಿಸಿಯೇ ತೀರಬೇಕೆಂದು ಬಿಜೆಪಿ ...Kannada News Portal