ಬಾಗಲಕೋಟೆ :  ಕಾಂಗ್ರೆಸ್ ನಾಯಕ  ಆನಂದ್​ ಸಿಂಗ್​ ರವರ ಒಡೆತನಕ್ಕೆ  ಸೇರಿದ್ದ  ಕೃಷ್ಣ ಹೆರಿಟೇಜ್​  ರೆಸಾರ್ಟ್ ಮೇಲೆ ರಾತ್ರಿ ಐಟಿ  ದಾಳಿ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ರೆಸಾರ್ಟ್ ಮೇಲೆ ದಾಳಿ  ನಡೆದಿದ್ದು ಮತ್ತಷ್ಟ ಕುತೂಹಲ ಮೂಡಿಸಿದೆ. ಮಿಡ್ ನೈಟ್ ಕಾರ್ಯಾಚರಣೆಗೆ ಇಳಿದ ಐಟಿ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಸಿಎಂ ಆಪ್ತರು ರೆಸಾರ್ಟ್​ನಲ್ಲಿ ಇದ್ದರೆಂಬ ಮಾಹಿತಿ ಹೊರ ಹಾಕಿದ್ದಾರೆ. ಚುನಾವಣೆ

ಜಂಟಿ ನಿರ್ದೇಶಕರ ನೇತೃತ್ವದಲ್ಲಿ ರೆಸಾರ್ಟ್ ನಲ್ಲಿ  ನಡೆಸಿದ ಕಾರ್ಯಚರಣೆಯಲ್ಲಿ ಐಟಿ ತಂಡ  ಸತತ ಎಂಟು ಗಂಟೆಗಳ ಕಾಲ ಶೋಧ ಕಾರ್ಯ  ನಡೆಸಿತು. ೧೦ಕ್ಕೂ ಹೆಚ್ಚು ಐಟಿ ಅಧಿಕಾರಗಳ ತಂಡದಿಂದ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ರಿಗೆ ಒಡೆತನಕ್ಕೆ ಸೇರಿದ್ಈದ  ರೆಸಾರ್ಟ್ನಲ್ಲಿ  ಸಿದ್ದರಾಮಯ್ಯ ಆಪ್ತ ಸಿಎಂ ಇಬ್ರಾಹಿಂ, ಎಸ್​ ಆರ್​ ಪಾಟೀಲರು ಇದ್ದರು.

ದಾಳಿ ಮಧ್ಯೆಯೇ ಐಟಿ ಅಧಿಕಾರಿಗಳು ರೆಸಾರ್ಟ್ ನಿಂದ ಇಬ್ರಾಹಿಂ, ಪಾಟೀಲರನ್ನು ಅವರನ್ನು  ಹೊರ ಕಳುಹಿಸಿದ್ದಾರೆ.  ದಾಳಿ  ಮಧ್ಯೆಯಲ್ಲಿ  ಸಿಆರ್ ಪಿ ಎಫ್ ಹಾಗೂ ಬಾದಾಮಿ ಸಿವಿಲ್ ಪೊಲೀಸ್ ರಿಂದ ರೆಸಾರ್ಟ್ ಗೆ ಬಿಗಿ ಭದ್ರತೆ ಒದಗಿಸಲಾಗದೆ . ಇನ್ನು ದಾಳಿಯಲ್ಲಿ 11 ಲಕ್ಷ ರೂವನ್ನು ವಶಪಡಿಸಿಕೊಳ್ಳಲಾಗಿದೆ.

ಹಿಂದೆ ಹೋಟೆಲ್ ಮಯೂರ ಮೇಲೂ ದಾಳಿ ನಡೆದಿತ್ತು. ಹೊಟೇಲ್ ಮಯೂರದಲ್ಲಿ 2.8 ಲಕ್ಷ ಜಪ್ತಿ ಮಾಡಲಾಗಿತ್ತು. ಕೆಪಿಸಿಸಿ ಕಾರ್ಯದರ್ಶಿ ಪಾರಸ್ಮಲ್ ಜೈನ್ ತಂಗಿದ್ದ ಮಯೂರ ಹೋಟಲ್​ ನಲ್ಲಿ ಐಟಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿ ದಾಳಿ ನಡೆಸಿದ್ದರು.

 

 

Please follow and like us:
0
http://bp9news.com/wp-content/uploads/2018/05/Karnatakada-Miditha-25.jpeghttp://bp9news.com/wp-content/uploads/2018/05/Karnatakada-Miditha-25-150x150.jpegBP9 Bureauಪ್ರಮುಖಬಾಗಲಕೋಟೆಬಾಗಲಕೋಟೆ :  ಕಾಂಗ್ರೆಸ್ ನಾಯಕ  ಆನಂದ್​ ಸಿಂಗ್​ ರವರ ಒಡೆತನಕ್ಕೆ  ಸೇರಿದ್ದ  ಕೃಷ್ಣ ಹೆರಿಟೇಜ್​  ರೆಸಾರ್ಟ್ ಮೇಲೆ ರಾತ್ರಿ ಐಟಿ  ದಾಳಿ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ರೆಸಾರ್ಟ್ ಮೇಲೆ ದಾಳಿ  ನಡೆದಿದ್ದು ಮತ್ತಷ್ಟ ಕುತೂಹಲ ಮೂಡಿಸಿದೆ. ಮಿಡ್ ನೈಟ್ ಕಾರ್ಯಾಚರಣೆಗೆ ಇಳಿದ ಐಟಿ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಸಿಎಂ ಆಪ್ತರು ರೆಸಾರ್ಟ್​ನಲ್ಲಿ ಇದ್ದರೆಂಬ ಮಾಹಿತಿ ಹೊರ ಹಾಕಿದ್ದಾರೆ. ಚುನಾವಣೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ರೆಸಾರ್ಟ್...Kannada News Portal