ಬಾಗಲಕೋಟೆ : ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಆ ಹಿನ್ನೆಲೆಯಲ್ಲಿ ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಅಗಲಿದ ನಾಯಕ ದಿ. ಸಿದ್ದು ನ್ಯಾಮಗೌಡರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಭೆಯನ್ನು ಜಮಖಂಡಿ ನಗರದ ಬಸವ ಭವನದಲ್ಲಿ ನಡೆಸಿದರು. ದಿ. ಸಿದ್ದು ನ್ಯಾಮಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿ,  ಸಭೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಿ  ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಶ್ರದ್ದಾಂಜಲಿ ಸಮರ್ಪಿಸಿ ಮಾತನಾಡಿದ ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡರು,  ಸಿದ್ದು ನ್ಯಾಮಗೌಡ ಅವರು ನಮ್ಮ ನಾಯಕರಾಗಿದ್ದರು. ಅವರೊಬ್ಬ  ದೂರದೃಷ್ಟಿಯ ನಾಯಕರಾಗಿದ್ದರು, ಜಮಖಂಡಿಯ ಅಭಿವೃದ್ಧಿ ಕುರಿತು ತಮ್ಮದೇ ಆದ ಕನಸುಗಳನ್ನು ಕಂಡಿದ್ದರು, ರೈತರ, ನೀರಾವರಿಯ ಕುರಿತು ಅಪಾರ ಕಾಳಜಿ ಹೊಂದಿದ್ದರು. ಅವರ ಅಗಲಿಕೆಯಿಂದ ನಮಗೆ ಅನಾಥಪ್ರಜ್ಞೆ ಕಾಡುತ್ತಿದೆ. ಆ ದೇವರು ನಮಗೆ ಅನ್ಯಾಯ ಮಾಡಿದ ಎಂದು ಕಣ್ಣೀರು ಹಾಕಿ ಭಾವುಕರಾದರು. ಅಲ್ಲದೆ  ಎನ್. ಎಸ್ ದೇವರವರ, ಅಶೋಕ ಸಾಹುಕಾರ, ಅರ್ಜುನ ದಳವಾಯಿ,  ಶಾಮ ಘಟಗೆ, ಮಾತನಾಡಿ ಸಂತಾಪ ಸೂಚಿಸಿದರು.

ಶ್ರದ್ದಾಂಜಲಿ ಸಭೆಯಲ್ಲಿ ನಗರಸಭೆ ಅಧ್ಯಕ್ಷ ರಾಜು ಪಿಸಾಳ, ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಮಹೇಶ ಕೋಳಿ, ಅಶೋಕ ಸಾಹುಕಾರ, ಶಾಮ ಘಟಗೆ, ಕಾಂಗ್ರೆಸ್​​​ ಪಕ್ಷದ ಹಿರಿಯರು, ಮುಖಂಡರು, ಜನಪ್ರತಿನಿಧಿಗಳು ಪಕ್ಷ ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-02-at-1.56.21-PM.jpeghttp://bp9news.com/wp-content/uploads/2018/06/WhatsApp-Image-2018-06-02-at-1.56.21-PM-150x150.jpegBP9 Bureauಬಾಗಲಕೋಟೆಬಾಗಲಕೋಟೆ : ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಆ ಹಿನ್ನೆಲೆಯಲ್ಲಿ ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಅಗಲಿದ ನಾಯಕ ದಿ. ಸಿದ್ದು ನ್ಯಾಮಗೌಡರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಭೆಯನ್ನು ಜಮಖಂಡಿ ನಗರದ ಬಸವ ಭವನದಲ್ಲಿ ನಡೆಸಿದರು. ದಿ. ಸಿದ್ದು ನ್ಯಾಮಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿ,  ಸಭೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಿ  ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಶ್ರದ್ದಾಂಜಲಿ...Kannada News Portal