ಬಾಗಲಕೋಟೆ: ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಡಿವೈಎಸ್‍ಪಿ ಬಾಳೇಗೌಡ ಸೇರಿದಂತೆ ಮೂವರು ಪೊಲೀಸರು ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ರಾತ್ರಿ 8 ಗಂಟೆಯಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಲ್ಲಿನ ಕೋರಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೋಟೆಲ್ನಲ್ಲಿ ಊಟ ಮಾಡಿ ಬಾಗಲಕೋಟೆಗೆ ತೆರಳುತ್ತಿದ್ದರು. ಬಾಗಲಕೋಟೆಗೆ ಇನ್ನು ಏಳು ಕಿಲೋಮೀಟರ್ ದೂರದಲ್ಲಿ ಇರುವ ಇಳಕಲ್ಲು ರಸ್ತೆಯ ಮಲ್ಲಾಪುರ ಕ್ರಾಸ್ ಬಳಿ (ಕೊಡಲ ಸಂಗಮ ಕ್ರಾಸ್) ಎದುರುಗಡೆಯಿಂದ ಬಂದ ಲಾರಿ ಬಾಗಲಕೋಟೆ ಕಡೆ ಹೋಗುತ್ತಿದ್ದ ಪೊಲೀಸ್ ಜೀಪಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದ  ಸ್ಥಳದಲ್ಲಿಯೇ ಮೂರು ಜನರು ಮೃತಪಟ್ಟಿದ್ದಾರೆ. ಅದರಲ್ಲಿ  ಡಿವೈ ಎಸ್ಪಿ ಬಾಳೇಗೌಡ, ಸಬ್ ಇನ್ಸ್​ಸ್ಪೆಕ್ಟರ್ ಹೆಚ್ ಕೆ.ಶಿವಸ್ವಾಮಿ, ಚಾಲಕ ವೇಣುಗೋಪಾಲ್ಅವರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ.

ದಕ್ಷ ಅಧಿಕಾರಿ ಬಾಳೇಗೌಡ

ಕಾನೂನು ಬಾಹಿರ ಚಟುವಟಿಕೆಗಳಿಗೆ ಸಿಂಹ ಸ್ವಪ್ನವಾಗಿದ್ದ ತುಮಕೂರು ನಗರದ ತಿಲಕ್ ಪಾರ್ಕ್ ವೃತ್ತನೀರಿಕ್ಷಕರಾಗಿ ಕರ್ತವ್ಯ ನಿರ್ವಸಿದ್ದ ಬಾಳೇಗೌಡ ಅತ್ಯಂತ ಜನಪ್ರೀಯ, ಸ್ನೇಹ ಮನೋಭಾವ ಹೊಂದಿದ್ದ ಇವರು ಕುಣಿಗಲ್​​ಗೆ ವರ್ಗಾವಣೆ ಅಗಿ ಕೆಲಸ ನಿರ್ವಹಣೆ ಮಾಡಿದ್ದರು. ಇವರ ದಕ್ಷ ಆಡಳಿತ, ಕರ್ತವ್ಯನಿಷ್ಠೆ ಮನಗಂಡ  ರಾಜ್ಯ ಸರ್ಕಾರ ಇವರ ಸೇವೆಗೆ ರಾಷ್ಟ್ರಪತಿಗಳ ಪದಕ, ಮುಖ್ಯ ಮಂತ್ರಿಗಳ ಪದಕ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಘೌರವಿಸಿದೆ. ಇತ್ತೀಚೆಗೆ ಅಷ್ಟೇ ಇವರಿಗೆ ಬಡ್ತಿ ನೀಡಿ DYSP ಆಗಿ CIDಗೆ ವರ್ಗಾವಣೆ ಅಗಿತ್ತು, ಇತ್ತೀಚೆಗೆ ತುಮಕೂರು ನಗರದ ಫೋಲಿಸ್ ಠಾಣೆಯಲ್ಲಿ ಲಾಕಪ್​​ಡೆತ್ ಪ್ರಕರಣದಲ್ಲಿ ಇವರೇ ತನಿಖೆ ಕೈಗೊಂಡಿದ್ದರು. ರಾಜ್ಯದಲ್ಲಿ 12 ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆಗೆ ನಿಯೋಜನೆ ಮಾಡಲಾಗಿತ್ತು.

ಇನ್ನು ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ದೌಡಾಯಿಸಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದವರನ್ನು ಅಸ್ಪತ್ರೆಗೆ ಸಾಗಿಸಲು ಹರ ಸಾಹಸ ಪಟ್ಟರು, ಅದರೆ ಲಾರಿಗೆ ಜೀಪು ಕಚ್ಚಿ ಕೊಂಡಿತ್ತು ಆದ್ದರಿಂದ  ಸಾವಿರಾರು ಮಂದಿ ಸಾರ್ವಜನಿಕರು ಸೇರಿದಂತೆ ಬಾಗಲಕೋಟೆಯ ಪೊಲೀಸರು ಜೀಪಿನಲ್ಲಿ ಇದ್ದವರನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನ ವಾಗಲಿಲ್ಲ.

ಈ ದುರಂತ ಸಾವಿಗೆ ರಾಜ್ಯಪಾಲರು ಸೇರಿಂದತೆ ಪೋಲಿಸ್ ಮಹಾ ನಿರ್ದೇಶಕರು, ಹಲವು ಐಜಿಪಿ, ತುಮಕೂರು ಜಿಲ್ಲಾ ಪೊಲೀಸ್​​​ವರಿಷ್ಠಾಧಿಕಾರಿ ಡಾ.ದಿವ್ಯ ಗೋಪಿನಾಥ್, ಡಾ .ಶೋಭಾ ರಾಣಿ, ಇತರೆ ಅಧಿಕಾರಿಗಳು, ಸಿಬ್ಬಂದಿಗಳು , ತೀವ್ರವಾಗಿ ಕಂಬನಿ ಮಿಡಿದಿದ್ದಾರೆ.

 

Please follow and like us:
0
http://bp9news.com/wp-content/uploads/2018/05/fb48b826a417ee6d213102b575c4d4df.jpghttp://bp9news.com/wp-content/uploads/2018/05/fb48b826a417ee6d213102b575c4d4df-150x150.jpgBP9 Bureauಪ್ರಮುಖಬಾಗಲಕೋಟೆಬಾಗಲಕೋಟೆ: ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಡಿವೈಎಸ್‍ಪಿ ಬಾಳೇಗೌಡ ಸೇರಿದಂತೆ ಮೂವರು ಪೊಲೀಸರು ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ರಾತ್ರಿ 8 ಗಂಟೆಯಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಲ್ಲಿನ ಕೋರಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೋಟೆಲ್ನಲ್ಲಿ ಊಟ ಮಾಡಿ ಬಾಗಲಕೋಟೆಗೆ ತೆರಳುತ್ತಿದ್ದರು. ಬಾಗಲಕೋಟೆಗೆ ಇನ್ನು ಏಳು ಕಿಲೋಮೀಟರ್ ದೂರದಲ್ಲಿ ಇರುವ ಇಳಕಲ್ಲು ರಸ್ತೆಯ ಮಲ್ಲಾಪುರ ಕ್ರಾಸ್ ಬಳಿ (ಕೊಡಲ ಸಂಗಮ ಕ್ರಾಸ್)...Kannada News Portal