ಬಾಗಲಕೋಟೆ : ಕಾಂಗ್ರೆಸ್​​​ ಕಾರ್ಯಕರ್ತರೆಂದು ಹೇಳಲಾದ ಯುವಕರ ಗುಂಪು  ಹಣದ ಆಮಿಷ ತೊರಿಸಿ ಮತದಾರರಿಗೆ ಭಾಷೆ, ಆಣೆ ಹಾಕಿಸುತ್ತಿದ್ದ ಘಟನೆ ಲಿಂಗಸಗೂರು ತಾಲೂಕಿನ ಚಿಕ್ಕಲಕ್ಕಹಾಳ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ದುರ್ಗಮ್ಮ ದೇವಸ್ಥಾನದ ಮುಂದೆ ಮತದಾರರನ್ನ ಕರೆಸಿ ಕೊಂಡ ಕೆಲ ಯುವಕರು ಹಣ ನೀಡಿ ತಮಗೆ ಮತ ಹಾಕುವಂತೆ ದುರ್ಗಮ್ಮ ದೇವಿಯ ಬಳಿ ಆಣೆ, ಪ್ರಮಾಣ  ಮಾಡಿಸುತ್ತಿದ್ದರು ಎಂದು ಹೇಳಲಾಗಿದೆ.

ಈ ಸಂಬಂಧ  ವಿಷಯ ತಿಳಿದ ಪ್ಲೈಯಿಂಗ್​​ ಸ್ವ್ಕಾಡ್​​​ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಇಬ್ಬರು ಯುವಕರನ್ನ ವಶಕ್ಕೆ ಪಡೆದು ಕೊಂಡಿದ್ದಾರೆ. ಅವರ ಬಳಿ ಹಣ ಇದ್ದು, ಮುದ್ದೆಬಿಹಾಳ ಪೊಲೀಸರು ತನಿಕೆ ನಡೆಸುತ್ತಿದ್ದಾರೆ.

ನಗದು ವಶ..

ಮತದಾರರಿಗೆ ರಸ್ತಯಲ್ಲೇ ಹಣ ಹಂಚುತ್ತಿದ್ದ  ಗುಂಪಿನ ,ಮೇಲೆ ದಾಳಿ ನಡೆಸಿದೆ ಚುನಾವಣಾ ಅಧಿಕಾರಿಗಳು 1.60 ಲಕ್ಷ ರೂಪಾಯಿಗಳನ್ನು ವಶ ಪಡಿಸಿಕೊಂಡ ಘಟನೆ ಬದಾಮಿಯ ಮಾರುತಿ ನಗರದಲ್ಲಿ ನಡೆದಿದೆ.

ಇಲ್ಲಿನ ಶಾಸಕ  ಬಿ.ಬಿ.ಚಿಮ್ಮನಕಟ್ಟಿಯವರ ಅಪ್ತರಿಗೆ ಸೇರಿದ ಖಾಸಗಿ ಶಾಲೆಯಲ್ಲಿ ಹಣವನ್ನ ಅಕ್ರಮವಾಗಿ ಇರಿಸಿರುವ ಬಗ್ಗೆ  ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರ ತಂಡ ದಾಳಿ ನಡೆಸಿದರು. ಈ ಸಂದರ್ಭದಲ್ಲಿ  ಶಾಲೆಯ ಮುಂದೆ  ಹಣ ಹಂಚುತ್ತಿದ್ದ ಯುವಕರು  ರಸ್ತೆಯಲ್ಲಿಯೇ ಹಣ ಬಿಟ್ಟು ಪರಾರಿಯಾಗಿದ್ದಾರೆ.

 

 

Please follow and like us:
0
http://bp9news.com/wp-content/uploads/2018/05/16648f28819e36e4fed6e104366b6288.jpghttp://bp9news.com/wp-content/uploads/2018/05/16648f28819e36e4fed6e104366b6288-150x150.jpgBP9 Bureauಪ್ರಮುಖಬಾಗಲಕೋಟೆರಾಜಕೀಯಬಾಗಲಕೋಟೆ : ಕಾಂಗ್ರೆಸ್​​​ ಕಾರ್ಯಕರ್ತರೆಂದು ಹೇಳಲಾದ ಯುವಕರ ಗುಂಪು  ಹಣದ ಆಮಿಷ ತೊರಿಸಿ ಮತದಾರರಿಗೆ ಭಾಷೆ, ಆಣೆ ಹಾಕಿಸುತ್ತಿದ್ದ ಘಟನೆ ಲಿಂಗಸಗೂರು ತಾಲೂಕಿನ ಚಿಕ್ಕಲಕ್ಕಹಾಳ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ದುರ್ಗಮ್ಮ ದೇವಸ್ಥಾನದ ಮುಂದೆ ಮತದಾರರನ್ನ ಕರೆಸಿ ಕೊಂಡ ಕೆಲ ಯುವಕರು ಹಣ ನೀಡಿ ತಮಗೆ ಮತ ಹಾಕುವಂತೆ ದುರ್ಗಮ್ಮ ದೇವಿಯ ಬಳಿ ಆಣೆ, ಪ್ರಮಾಣ  ಮಾಡಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ  ವಿಷಯ ತಿಳಿದ ಪ್ಲೈಯಿಂಗ್​​ ಸ್ವ್ಕಾಡ್​​​ ಮತ್ತು ಪೊಲೀಸರು ಸ್ಥಳಕ್ಕೆ...Kannada News Portal