ಬಾಗಲಕೋಟೆ : ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ಬಾಡಗಿ ಗ್ರಾಮದಲ್ಲಿ ಮುರುಗೇಶ ನಿರಾಣಿ ಸಮ್ಮುಖದಲ್ಲಿ ನೂರಾರು ಜನರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮುರುಗೇಶ ನಿರಾಣಿ, ಕಳೆದ 5 ವರ್ಷಗಳಲ್ಲಿ ಆಶ್ರಯ ಯೋಜನೆಯ ಮನೆಗಳನ್ನು ಕಟ್ಟಲು ಮರಳಿನ ಅಭಾವವನ್ನು  ಸೃಷ್ಟಿಸಿ ಸಾಮಾನ್ಯ ಜನರಿಗೆ, ಗಾರೆ ಕೆಲಸಗಾರರಿಗೆ, ಸೇಂಟ್ರಿಂಗ್ ಕಾರ್ಮಿಕರಿಗೆ ತೊಂದರೆ ನೀಡಿದವರು ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದರು.ಕಳೆದ 2013 ರಲ್ಲಿ ನಾವು ಸೋಲು ಕಂಡರೂ ಕೂಡ ಸಾಮಾಜಿಕ ಕೆಲಸ ಮುಂದುವರೆಸಿದ್ದೇವೆ. ಎಮ್ ಆರ್ ಎನ್ (ನಿರಾಣಿ) ಪೌಂಡೇಶನ್ ಮೂಲಕ 78 ಸಾವಿರ ಜನರ ಆರೋಗ್ಯ ತಪಾಸಣೆ ಮಾಡಿದ್ದೆವೆ. ಅದರಲ್ಲಿ 26 ಸಾವಿರ ಜನರಿಗೆ ನೇತ್ರ ಹಾಗೂ ಹೃದಯ ಸಂಬಂದಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇವೆ. ಬೀಳಗಿ ನಗರದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದ್ದೇವೆ. ಈ ಬಾರಿ ನಮಗೆ ಸಿಗುತ್ತಿರುವ ಜನ ಬೆಂಬಲವನ್ನು ನೋಡಿ ಈ ಬಾರಿ ನಾವು ಸುಮಾರು 30 ಸಾವಿರ ಮತಗಳ ಅಂತರದ ಗೆಲುವು ಸಾಧಿಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದರು.

Please follow and like us:
0
http://bp9news.com/wp-content/uploads/2018/05/Karnatakada-Miditha-34.jpeghttp://bp9news.com/wp-content/uploads/2018/05/Karnatakada-Miditha-34-150x150.jpegBP9 Bureauಬಾಗಲಕೋಟೆರಾಜಕೀಯಬಾಗಲಕೋಟೆ : ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ಬಾಡಗಿ ಗ್ರಾಮದಲ್ಲಿ ಮುರುಗೇಶ ನಿರಾಣಿ ಸಮ್ಮುಖದಲ್ಲಿ ನೂರಾರು ಜನರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಮುರುಗೇಶ ನಿರಾಣಿ, ಕಳೆದ 5 ವರ್ಷಗಳಲ್ಲಿ ಆಶ್ರಯ ಯೋಜನೆಯ ಮನೆಗಳನ್ನು ಕಟ್ಟಲು ಮರಳಿನ ಅಭಾವವನ್ನು  ಸೃಷ್ಟಿಸಿ ಸಾಮಾನ್ಯ ಜನರಿಗೆ, ಗಾರೆ ಕೆಲಸಗಾರರಿಗೆ, ಸೇಂಟ್ರಿಂಗ್ ಕಾರ್ಮಿಕರಿಗೆ ತೊಂದರೆ ನೀಡಿದವರು ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದರು. ಕಳೆದ 2013 ರಲ್ಲಿ...Kannada News Portal