ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲಿನಿಂದಲೂ ಒಂದು ಮಾತು ಜನಜನಿತವಾಗಿದೆ. ಅದೇನೆಂದರೆ “ಲೋಕಾಪುರ ಕಲ್ಲ” “ಮುಧೋಳ ಮಲ್ಲ” “ಮಹಾಲಿಂಗಪುರ ಬೆಲ್ಲ” ಎಂದು ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಹಾಗಾದರೆ ಆ ಜಟ್ಟಿಗಳು ಯಾರು?

ಬಾಗಲಕೋಟೆ ಜಿಲ್ಲೆಯ ಮುಧೋಳ ಘಟಪ್ರಭಾ ನದಿಯ ದಡದ ಮೇಲಿರುವ ತಾಲೂಕಾ ಕೇಂದ್ರ. ಇಲ್ಲಿ ಗದಾಯುದ್ಧ ಖ್ಯಾತಿಯ ರನ್ನ ಕವಿ, ಸ್ವಾತಂತ್ರ್ಯ ಪೂರ್ವದಿಂದಲೂ ಹೆಸರುವಾಸಿಯಾಗಿರುವ ಮುಧೋಳ ತಳಿಯ ಬೇಟೆನಾಯಿ ಇತ್ತೀಚೆಗೆ ಭಾರತೀಯ ಸೇನೆಗೆ ಸೇರ್ಪಡೆಯಾಗಿ ಜಿಲ್ಲೆಯ ಹೆಸರನ್ನು ರಾಷ್ಟ್ರವ್ಯಾಪಿ ಬೆಳಗಿತು. ಮುಧೋಳದ ಮಹಾರಾಜರು ಬೇಟೆ ನಾಯಿ ತಳಿಯ ಅಭಿವೃದ್ಧಿ ಹಾಗೂ ಪೈಲ್ವಾನರನ್ನು ಬೆಳಸುತ್ತಿದ್ದರು. ಮಹಾರಾಜರ ಕಾಲದಲ್ಲಿ “ಡರ್ ಬಸಯ್ಯ” ಎಂಬ ಪೈಲ್ವಾನ ರಾಜಾತಿತ್ಯದಲ್ಲಿ ಬೆಳೆದಿದ್ದ.

ನಂತರದ ದಿನಗಳಲ್ಲಿ ಬಾಬುರಾವ್ ಮಾನೆ, ಭೀಮಶಿ ಮುಂಡಗನೂರ ಅವರಂತಹ ಪೈಲ್ವಾನರು ಮುಧೋಳದಲ್ಲಿ ಬೆಳೆದರು. ಮುಂದೆ ನಿಂಗಪ್ಪ ವಸ್ತಾದರು ಕಿರಿಯ ಕುಸ್ತಿಪಟುಗಳಿಗೆ ತರಬೇತಿ ನೀಡುತ್ತಾ ಕುಸ್ತಿ ಸಂಪ್ರದಾಯ ಮುಂದುವರೆಸಿದರು. ಇವರ ಗರಡಿಯಲ್ಲಿ ಪಳಗಿದ ಅನೀಲ ಘೋರ್ಪಡೆ, ಸಂಜು ಮಾನೆ, ಪ್ರಕಾಶ ಯರಗಟ್ಟಿ, ಮುಂತಾದವರು ಮುಧೋಳ ಹೆಸರನ್ನು ಬೆಳಗಿದರು.

ಅದರಂತೆಯೇ ಪಡತಾರೆ ಸಹೋದರರು ಕೂಡ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಸ್ತಿಯಲ್ಲಿ ಸಾದನೆ ಮಾಡುತಿದ್ದಾರೆ. ಮುಧೋಳ ನಗರದ ಬಾಬುರಾವ್ ಪಡತಾರೆ ಹಾಗೂ ಯಂಕೂಬಾಯಿ ದಂಪತಿಗಳ ನಾಲ್ಕು ಜನ ಮಕ್ಕಳೆ ಇಂದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಯಲ್ಲಿ ಮಿಂಚುತ್ತಿದ್ದಾರೆ.

ಸಚಿನ್ ಪಡತಾರೆ ಹೇಳುವ ಹಾಗೆ ಅವರ ತಾತ ಬಾಬುರಾವ್ ಮಾನೆ ಅವರು ದೊಡ್ಡ ಪೈಲ್ವಾನರಾಗಿದ್ದರು. ಅವರೆ ನನಗೂ ಕುಸ್ತಿಯಲ್ಲಿ ಆಸಕ್ತಿ ಮೂಡಲು ಸ್ಪೂರ್ತಿ. ಸುಮಾರು ಐದು ವರ್ಷದವನಿದ್ದಾಗಲಿಂದ ನಾನು ಗರಡಿಮನೆಗೆ ಹೋಗಿ ತಾಲೀಮು ಮಾಡತೊಡಗಿದೆ. ಶಾಲಾ ದಿನಗಳಲ್ಲಿ ಸ್ಥಳೀಯ ಗರಡಿಮನೆಯಲ್ಲಿ ತಾಲೀಮು ನಡೆಸಿದೆ. ಬಿ. ಶಂಕರೆಪ್ಪ ಅವರು ನನಗೆ ಕುಸ್ತಿಯ ಪ್ರಮುಖ ಪಟ್ಟುಗಳನ್ನು ಕಲಿಸಿದರು. ಅವರ ಮಾರ್ಗದರ್ಶನದಲ್ಲಿ 2006ರ 66 kg ವಿಭಾಗದ ಸ್ಕೂಲ್ ಗೇಮ್ಸ್ ನಲ್ಲಿ ಸಿಲ್ವರ್ ಮೆಡಲ್, 2007ರಲ್ಲಿ 74 ಕೆಜಿ ವಿಭಾಗದಲ್ಲಿ ಜ್ಯೂನಿಯರ್ ನ್ಯಾಶನಲ್ ಸಿಲ್ವರ್ ಮೆಡಲ್, ಆಲ್ ಇಂಡಿಯಾ ಯುನಿವರ್ಸಿಟಿ ಸೀನಿಯರ್ ನ್ಯಾಷನಲ್ ಸಿಲ್ವರ್ ಮೆಡಲ್, 2008ರಲ್ಲಿ 74 ಕೆಜಿಯಲ್ಲಿ ಸೀನಿಯರ್ ನ್ಯಾಷನಲ್ ಬ್ರಾನ್ಸ್ ಮೆಡಲ್, ದಸರಾ ಕುಮಾರ,  ಕರ್ನಾಟಕ ಕೇಸರಿ, ಭಾರತ ಹಿಂದ್ ಕೇಸರಿ, ರನ್ನ ಕೇಸರಿ, ಗಜಾನನ ಕೇಸರಿ, ಕನಕಗಿರಿ ಕೇಸರಿ, ಹಾಗೂ ಭಾರತೀಯ ನೌಕಾ ಸೇನೆಯಲ್ಲಿ ಸೇವೆಗೆ ಸೇರಿದ ನಂತರ ಆಲ್ ಇಂಡಿಯಾ ಸರ್ವಿಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ನಲ್ಲಿ ಹಲವಾರು ರಾಷ್ಟ್ರೀಯ ಮೆಡಲಗಳು ಒಲಿದುಬಂದವು. ಕಳೆದ 10 ವರ್ಷಗಳಿಂದ ಭಾರತೀಯ ನೌಕಾಸೇನೆಯಲ್ಲಿ ದೇಶಸೇವೆಮಾಡಿಕೊಂಡು ಬಂದಿದ್ದೇನೆ ಎನ್ನುತ್ತಾರೆ.

ಹಿರಿಯ ಅಣ್ಣನ ದಾರಿಯನ್ನೇ  ಅನುಸರಿಸಿದ ಸತೀಶ್ ಪಡತಾರೆ   ನಮ್ಮಣ್ಣ ಸಚಿನ್​​​ ಸಾಧನೆ ನನಗೆ ಸ್ಫೂರ್ತಿಯಾಯಿತು.  ನಮ್ಮ ರಕ್ತದ ಪ್ರತಿಕಣದಲ್ಲೂ ಕುಸ್ತಿ ತುಂಬಿಕೊಂಡಿದೆ. ನಾನು ಶಾಲಾದಿನಗಳಲ್ಲಿ ಪ್ರಭಲ ಪ್ರತಿಸ್ಪರ್ಧಿಗಳ ನಡುವೆ ಕಠಿಣ ತಾಲೀಮು ನಡೆಸಿ ಆಲ್ ಇಂಡಿಯಾ ನ್ಯಾಷನಲ್ ಗೇಮ್ಸನಲ್ಲಿ ಗೋಲ್ಡ ಮೆಡಲ್, ಆಲ್ ಇಂಡಿಯಾ ಯುನಿವರ್ಸಿಟಿ ಗೇಮ್ಸನಲ್ಲಿ ಬ್ರಾನ್ಸ್ ಮೆಡಲ್, ದಸರಾ ಕುಮಾರ, ದಸರಾ ಕೇಸರಿ, ಕಾರವಾರ ಕೇಸರಿ, ಬಸವೇಶ್ವರ ಕೇಸರಿ, ಹೀಗೆ ಹಲವಾರು ಟೈಟಲ್ ಗಳು ನನ್ನ ಕಠಿಣ ಪರಿಶ್ರಮದ ಫಲವಾಗಿ ಒಲಿದು ಬಂದವು. ಸದ್ಯ ಮುಂಬೈ ನಗರದ ಸಾಯಿ ಹಾಸ್ಟೆಲ್ ನಲ್ಲಿ ತಾಲೀಮು ನೆಡೆಸುತ್ತಿದ್ದೇನೆ ಎನ್ನುತ್ತಾರೆ.


ಸತೀಶ್ ಹಾದಿಯನ್ನೇ ತುಳಿದ ಕಿರಿಯ ಸಹೋದರ ಸುನೀಲ್ ಕೂಡ ಕುಸ್ತಿಯ ಮೇಲೆ ಅಪಾರ ಒಲವು ಹೊಂದಿದ್ದಾರೆ ನಾನು ಫ್ರೀಸ್ಟೈಲ್ ಕುಸ್ತಿಯಲ್ಲೇ ಹೆಸರುಗಳಿಸಬೇಕು ಎಂದುಕೊಂಡಿದ್ದೇನೆ 2016 ನ್ಯಾಷನಲ್ ಸ್ಕೂಲ್ ಗೇಮ್ಸನ 76 ಕೆಜಿ ವಿಭಾಗದಲ್ಲಿ ಸೆಕೆಂಡ್ ಪ್ಲೇಸ್, ಇಂಟರ್ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ ದ್ವಿತೀಯ ಸ್ಥಾನ, ಖೇಲೊ ಇಂಡಿಯದಲ್ಲಿ ದ್ವಿತೀಯ ಸ್ಥಾನ, ಸಬ್ ಜ್ಯೂನಿಯರ್ ನ್ಯಾಷನಲ್ ನಲ್ಲಿ ದ್ವಿತೀಯ ಸ್ಥಾನ ಹೀಗೆ ಹಲವಾರು ಸಾಧನೆಗಳನ್ನು ಮಾಡುತ್ತಾ ಇತ್ತೀಚಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಒಟ್ಟಿನಲ್ಲಿ ಪೂರ್ತಿ ಕುಟುಂಬ ಕುಸ್ತಿಯಲ್ಲಿ ಹೆಸರು ಮಾಡಿ ಮಿಂಚುತ್ತಿದ್ದು, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವ ಅವರ ಹಂಬಲಕ್ಕೆ ಶುಭವಾಗಲಿ.


ವರದಿ: ರವಿ ಜಾಧವ ಬಾಗಲಕೋಟೆ

Please follow and like us:
0
http://bp9news.com/wp-content/uploads/2018/06/WhatsApp-Image-2018-06-05-at-1.30.15-PM.jpeghttp://bp9news.com/wp-content/uploads/2018/06/WhatsApp-Image-2018-06-05-at-1.30.15-PM-150x150.jpegBP9 Bureauಅಂಕಣಪ್ರಮುಖಬಾಗಲಕೋಟೆಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲಿನಿಂದಲೂ ಒಂದು ಮಾತು ಜನಜನಿತವಾಗಿದೆ. ಅದೇನೆಂದರೆ 'ಲೋಕಾಪುರ ಕಲ್ಲ' 'ಮುಧೋಳ ಮಲ್ಲ' 'ಮಹಾಲಿಂಗಪುರ ಬೆಲ್ಲ' ಎಂದು ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಹಾಗಾದರೆ ಆ ಜಟ್ಟಿಗಳು ಯಾರು? ಬಾಗಲಕೋಟೆ ಜಿಲ್ಲೆಯ ಮುಧೋಳ ಘಟಪ್ರಭಾ ನದಿಯ ದಡದ ಮೇಲಿರುವ ತಾಲೂಕಾ ಕೇಂದ್ರ. ಇಲ್ಲಿ ಗದಾಯುದ್ಧ ಖ್ಯಾತಿಯ ರನ್ನ ಕವಿ, ಸ್ವಾತಂತ್ರ್ಯ ಪೂರ್ವದಿಂದಲೂ ಹೆಸರುವಾಸಿಯಾಗಿರುವ ಮುಧೋಳ ತಳಿಯ ಬೇಟೆನಾಯಿ ಇತ್ತೀಚೆಗೆ ಭಾರತೀಯ ಸೇನೆಗೆ ಸೇರ್ಪಡೆಯಾಗಿ ಜಿಲ್ಲೆಯ ಹೆಸರನ್ನು ರಾಷ್ಟ್ರವ್ಯಾಪಿ ಬೆಳಗಿತು....Kannada News Portal