ಬೆಂಗಳೂರು : ರಕ್ತ ಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಮೇಕೆಯ ರಕ್ತವನ್ನು ಚುಚ್ಚು ಮದ್ದು ಮೂಲಕ ನೀಡುವ ವಿನೂತನ ಪದ್ಧತಿ ಒಂದನ್ನು ಪಂಜಾಬ್ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಂಡುಹಿಡಿದಿದೆ.

ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ತೀರ ತಳಮಟ್ಟಕ್ಕೆ ಇಳಿದಿದ್ದರೇ ಅಂತಹ ರೋಗಿಗಳನ್ನು ತಲೇಸ್ಮಿಯಾ ರೋಗಿಗಳು ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಹೆರಿಡಿಟಿ ರೋಗವಾಗಿರುತ್ತದೆ. ಈ ರೋಗದ ಲಕ್ಷಣ ಏನೆಂದರೇ ಎಚ್ ಬಿ ಕೌಟ್ ತಳಮಟ್ಟಕ್ಕೆ ತಲುಪುತ್ತದೆ.

ನಿಶ್ಯಕ್ತಿ , ಬಳಲುವಿಕೆ ಕಾಣಿಸಿಕೊಳ್ಳುತ್ತವೆ. ಇಂತಹ ರೋಗಕ್ಕೆ ರಾಮಬಾಣವಾಗಿ ಮೇಕೆ ರಕ್ತವನ್ನು ನೇರವಾಗಿ ರಕ್ತಕ್ಕೆ ಸಿರಿನ್ಜ್ ಮೂಲಕ ನೀಡಿದರೆ ಎಚ್ ಬಿ ಕೌಂಟ್ ತಳಮಟ್ಟಕ್ಕೆ ತಲುಪದಂತೆ ಕಾಪಾಡಿಕೊಳ್ಳುತ್ತದೆ ಎಂದು ಅಲ್ಲಿನ ವೈದ್ಯರೊಬ್ಬರು ತಿಳಿಸಿದ್ದಾರೆ.

ಈ ಯೋಜನೆಯನ್ನು ರೂಪಿಸಿರುವ ಲೂದಿಯಾನದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಕೇಂದ್ರ ಸರ್ಕಾರ 35 ಲಕ್ಷರೂ ಗಳನ್ನು ಮಂಜೂರು ಮಾಡಿದೆ. ಇದಲ್ಲದೇ ಪಂಜಾಬ್ ಸರ್ಕಾರ 13 ಲಕ್ಷ ರೂಪಾಯಿಗಳನ್ನು ಬಿಡುಗೆಡೆಮಾಡಿದೆ ಎಂದು ಪಂಜಾಬ್ನ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳ ಆರ್ ಎಂ ಓ ಹೇಮಂತ ಕುಮಾರ್ ತಿಳಿಸಿದ್ದಾರೆ.

ಇನ್ನು ಈ ಯೋಜನೆ ಅಂತಿಮ ಹಂತದಲ್ಲಿ ಇದ್ದು ನಾಲ್ಕೈದು ತಿಂಗಳಲ್ಲಿ ಚಿಕೆತ್ಸೆ ಆರಂಭಿಸಲಾಗುವುದು ಎಂದ ಅವರು, ರೋಗಿಗಳಿಗೆ ಈ ರೀತಿ ಮೇಕೆ ರಕ್ತವನ್ನು ನೀಡುವ ಚಿಕಿತ್ಸೆಯಿಂದ ಮಾತ್ರೆ ಅಥವಾ ಬೇರಾವ ಔಷಧಗಳ ಅಗತ್ಯ ಇರುವುದಿಲ್ಲ. ನಂತರ ಮೇಕೆ ರಕ್ತವನ್ನು ಹಂತಹಂತವಾಗಿ ನೀಡಿವುದರಿಂದ ಒಮ್ಮೆ 4 ಮತ್ತೊಮ್ಮೆ 2 ಹೀಗೆ ಡೋಸ್ ಪ್ರಕ್ರಿಯೆಲ್ಲಿ ಚಿಕ್ಸಿತ್ಸೆ ಪಡೆದರೆ ಶಾಶ್ವತವಾಗಿ ಈ ಕಾಯಿಲೆಯಿಂದ ಗುಣಮುಖರಾಗಬಹುದು ಎಂದು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/ಮೇಕೆ-1.jpghttp://bp9news.com/wp-content/uploads/2018/05/ಮೇಕೆ-1-150x150.jpgPolitical Bureauಪ್ರಮುಖBlood Donec Disease Blood Awareness from the Punjab Government !!!ಬೆಂಗಳೂರು : ರಕ್ತ ಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಮೇಕೆಯ ರಕ್ತವನ್ನು ಚುಚ್ಚು ಮದ್ದು ಮೂಲಕ ನೀಡುವ ವಿನೂತನ ಪದ್ಧತಿ ಒಂದನ್ನು ಪಂಜಾಬ್ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಂಡುಹಿಡಿದಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ತೀರ ತಳಮಟ್ಟಕ್ಕೆ ಇಳಿದಿದ್ದರೇ ಅಂತಹ ರೋಗಿಗಳನ್ನು ತಲೇಸ್ಮಿಯಾ ರೋಗಿಗಳು ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಹೆರಿಡಿಟಿ ರೋಗವಾಗಿರುತ್ತದೆ. ಈ ರೋಗದ ಲಕ್ಷಣ ಏನೆಂದರೇ ಎಚ್ ಬಿ ಕೌಟ್ ತಳಮಟ್ಟಕ್ಕೆ ತಲುಪುತ್ತದೆ. ನಿಶ್ಯಕ್ತಿ , ಬಳಲುವಿಕೆ ಕಾಣಿಸಿಕೊಳ್ಳುತ್ತವೆ. ಇಂತಹ ರೋಗಕ್ಕೆ...Kannada News Portal