ಬಳ್ಳಾರಿ :  ರಾಜ್ಯದಲ್ಲಿ ನಡೆಯುತ್ತಿರುವ ಸಿಬಿಐ ದಾಳಿ ಸರ್ವೆಸಾಮಾನ್ಯವಾಗಿದೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮುಲು, ಈ ಹಿಂದೆ ಕೂಡ ಕಾಂಗ್ರೆಸ್​​​​ ಸರ್ಕಾರ ಇದ್ದಾಗ  ನನ್ನ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಸಿಬಿಐ ದಾಳಿಯಾಗಿ ಜೈಲಿಗೆ ಹೊಗಿದ್ದರು.

ಆದರೆ ಆ ಬಗ್ಗೆ ನಾವು ಮಾತನಾಡಿಲ್ಲ. ಈಗ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆದರೆ ಅದು ಕೇಂದ್ರ ಸರ್ಕಾರ ಪ್ರೇರಿತ ದಾಳಿ ಎಂದು ಹೇಳುತ್ತಿದ್ದಾರೆ. ಅದರೆ ಇದು ಸರಿಯಲ್ಲ.  ಅವರಿಗೆ ಏನೊ ಸುಳಿವು ಸಿಕ್ಕಿರ ಬೇಕು ಅದಕ್ಕೆ ದಾಳಿ ನಡೆಸಿದ್ದಾರೆ ಎಂದರು.

ನೂತನ ಸರ್ಕಾರ,  ಅವರೆ ಹೇಳಿದಂತೆ  ರೈತರು ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ. ದಶಕದ ರಾಜಕೀಯ ಅನುಭವ ಇರುವ ನೀವು ಕಥೆ ಹೇಳದೆ ಸಾಲಾ ಮನ್ನಾ ಮಾಡಿ ಎಂದು ಕುಮಾರಸ್ವಾಮಿಗೆ ಟಾಂಗ್​​​ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-91.jpeghttp://bp9news.com/wp-content/uploads/2018/05/Karnatakada-Miditha-91-150x150.jpegBP9 Bureauಪ್ರಮುಖಬಳ್ಳಾರಿರಾಜಕೀಯಬಳ್ಳಾರಿ :  ರಾಜ್ಯದಲ್ಲಿ ನಡೆಯುತ್ತಿರುವ ಸಿಬಿಐ ದಾಳಿ ಸರ್ವೆಸಾಮಾನ್ಯವಾಗಿದೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮುಲು, ಈ ಹಿಂದೆ ಕೂಡ ಕಾಂಗ್ರೆಸ್​​​​ ಸರ್ಕಾರ ಇದ್ದಾಗ  ನನ್ನ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಸಿಬಿಐ ದಾಳಿಯಾಗಿ ಜೈಲಿಗೆ ಹೊಗಿದ್ದರು. ಆದರೆ ಆ ಬಗ್ಗೆ ನಾವು ಮಾತನಾಡಿಲ್ಲ. ಈಗ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆದರೆ ಅದು ಕೇಂದ್ರ ಸರ್ಕಾರ ಪ್ರೇರಿತ ದಾಳಿ...Kannada News Portal