ಬಳ್ಳಾರಿ : ಪ್ರಾದೇಶಿಕ ಸಾರಿಗೆ ಕಚೇರಿಗಳು ಶುಕ್ರವಾರದಿಂದ ಮಧ್ಯ ವರ್ತಿಗಳಕಾಟದಿಂದ ಮುಕ್ತವಾಗಲಿದ್ದು, ಆನ್ ಲೈನ್ ಮೂಲಕ ಚಾಲನೆ ಪರವಾನಗಿ ಪಡೆದುಕೊಳ್ಳ ಬಹುದಾಗಿದೆ. ಸಾರ್ವಜನಿಕರು ವಾಹನ ಚಾಲನೆ ಪರವಾನಿಗೆ (ಡಿಎಲ್)ಪಡೆಯಲು ಇನ್ನು ಮುಂದೆ ಮಧ್ಯ ವರ್ತಿಗಳ ಮೊರೆ ಹೋಗಬೇಕಾದ ಅವಶ್ಯಕತೆ ಇಲ್ಲ. ಅಲ್ಲದೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿಯು ಇಲ್ಲ.

ಏಕೆಂದರೆ ಸಾರಿಗೆ ಇಲಾಖೆ ನೂತನ  ಯೋಜನೆಯೊಂದನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಕಲಿಕಾ ಚಾಲನಾ ಪರವಾನಿಗೆ ಪತ್ರ(ಎಲ್ಎಲ್ ಆರ್) ಹಾಗೂ ಚಾಲನಾ ಪರವಾನಿಗೆ ಪತ್ರ (ಡಿಎಲ್)ಪಡೆಯಲು ಸಾರಥಿ-4 ಸಾಫ್ಟ್‌ವೇರ್ ಮೂಲಕ ಆರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.

LLR –   http://transport.karnataka.gov.in/index.php/information/details/how_to_get_ll

DL –     http://transport.karnataka.gov.in/index.php/information/details/get_permanent_dl


ವೆಬ್ ಸೈಟ್ ಗೆ ಭೇಟಿ ನೀಡಿ ಆನ್‌ಲೈನ್​​​ನಲ್ಲಿ ಆರ್ಜಿ ಸಲ್ಲಿಸಬಹುದು. ಸಂಬಂಧಿತ ಶುಲ್ಕಗಳನ್ನು ಬ್ಯಾಂಕ್ ಮೂಲಕ ಪಾವತಿಸಬೇಕು . ಆನ್‌ಲೈನ್ ಆರ್ಜಿ ರ್ಸಲ್ಲಿಸಲು, ಅರ್ಜಿದಾರರು ಮೂಲ ದಾಖಲೆಗಳಾದ ವಿಳಾಸ ಪುರಾವೆ, ಜನ್ಮದಿನಾಂಕ ಪುರಾವೆ, ವೈದ್ಯಕೀಯ ಪ್ರಮಾಣಪತ್ರ, ಮತ್ತು ಇತರೆ ದಾಖಲೆಗಳನ್ನು ಸ್ಕ್ಯಾನ್​​​ ಮಾಡಿ ಸಲ್ಲಿಸಬೇಕು. ಕಲಿಕಾ ಪರವಾನಗಿ ನಂತರ ಡಿಎಲ್ ಪಡೆಯಲು ಅರ್ಜಿದಾರರು ಆರ್ ಟಿಒ ಕಚೇರಿಯಲ್ಲಿ ಸಿದ್ದಪಡಿಸಿರುವ ಕಂಪ್ಯೂಟರ್ ಮುಂದೆ ಇಲಾಖೆ ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರೆ ಶೀಘ್ರ ಪರವಾನಗಿ ಲಭಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ/ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಬಳ್ಳಾರಿ ಪ್ರಾದೇಶಿಕ ಸಾರಿಗೆ ಆಧಿಕಾರಿ ಶ್ರೀಧರ್ ಮಾಲ್ಲಾಡ್  ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್​​​ ಕ್ಲಿಕ್​​ ಮಾಡಿ
LLR –   http://transport.karnataka.gov.in/index.php/information/details/how_to_get_ll

DL –     http://transport.karnataka.gov.in/index.php/information/details/get_permanent_dl
ವರದಿ : ಬಜಾರಪ್ಪ, ಬಳ್ಳಾರಿ

Please follow and like us:
0
http://bp9news.com/wp-content/uploads/2018/06/driving-licence-500x500.pnghttp://bp9news.com/wp-content/uploads/2018/06/driving-licence-500x500-150x150.pngBP9 Bureauಪ್ರಮುಖಬಳ್ಳಾರಿಬೆಂಗಳೂರುಬಳ್ಳಾರಿ : ಪ್ರಾದೇಶಿಕ ಸಾರಿಗೆ ಕಚೇರಿಗಳು ಶುಕ್ರವಾರದಿಂದ ಮಧ್ಯ ವರ್ತಿಗಳಕಾಟದಿಂದ ಮುಕ್ತವಾಗಲಿದ್ದು, ಆನ್ ಲೈನ್ ಮೂಲಕ ಚಾಲನೆ ಪರವಾನಗಿ ಪಡೆದುಕೊಳ್ಳ ಬಹುದಾಗಿದೆ. ಸಾರ್ವಜನಿಕರು ವಾಹನ ಚಾಲನೆ ಪರವಾನಿಗೆ (ಡಿಎಲ್)ಪಡೆಯಲು ಇನ್ನು ಮುಂದೆ ಮಧ್ಯ ವರ್ತಿಗಳ ಮೊರೆ ಹೋಗಬೇಕಾದ ಅವಶ್ಯಕತೆ ಇಲ್ಲ. ಅಲ್ಲದೆ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿಯು ಇಲ್ಲ. ಏಕೆಂದರೆ ಸಾರಿಗೆ ಇಲಾಖೆ ನೂತನ  ಯೋಜನೆಯೊಂದನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಕಲಿಕಾ ಚಾಲನಾ ಪರವಾನಿಗೆ ಪತ್ರ(ಎಲ್ಎಲ್ ಆರ್) ಹಾಗೂ...Kannada News Portal