ಬಳ್ಳಾರಿ : ಮೈತ್ರಿ ಸರ್ಕಾರ ವಿಶ್ವಾಸ ಮತ ಸಾಭೀತು ಪಡಿಸಿದಲ್ಲಿ ನಾನು  ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಪಕ್ಷದ ವತಿಯಿಂದ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಕೂಡಾ  ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನೇತ್ರತ್ವದಲ್ಲಿ ಕರಾಳ ದಿನಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ್ ರೆಡ್ಡಿ, ಮೈತ್ರಿ ಸರ್ಕಾರ ಬಹಳಷ್ಟು ದಿನಗಳು ನಡೆಯುವುದಿಲ್ಲ. ಈಗಾಗಲೇ ಕಾಂಗ್ರೆಸ್​​​ ಮತ್ತು ಜೆಡಿಎಸ್ನ ಅನೇಕ​​​ ಶಾಸಕರು ಸಚಿವ ಸ್ಥಾನಕ್ಕೆ ಬೆಡಿಕೆ ಇಡುತ್ತಿದ್ದು, ತಮಗೆ ಮೊದಲು ಸಚಿವ ಸ್ಥಾನ ನೀಡಿ ಆ ಮೇಲೆ ಪ್ರಮಾಣ ವಚನೆ ಸಮಾರಂಭ ಮಾಡಿ ಎನ್ನುವ ವಿರೋಧ ವ್ಯಕ್ತವಾಗುತ್ತಿದೆ ಎಂದರು. ಇನ್ನು ಕೆಲವೆ ದಿನಗಳಲ್ಲಿ ಇದರ ಪರಿಣಾಮ ಗೊತ್ತಾಗಲಿದ್ದು, ಚಿತ್ರಣವೆ ಬದಲಾಗಲಿದೆ ಎಂದರು.

ಮೈತ್ರಿ ಸರ್ಕಾರ ಪೂರ್ತಿ ಅವಧಿ ಪೂರೈಸುವುದಿರಲಿ, ವಿಶ್ವಾಸ ಸಾಭೀತು ಪಡಿಸುವುದೇ ಕಷ್ಟ. ಒಮ್ಮೆ ವಿಶ್ವಾಸ ಮತ ಸಾಭೀತು ಪಡಿಸಿದಲ್ಲಿ ನಾನು  ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-74.jpeghttp://bp9news.com/wp-content/uploads/2018/05/Karnatakada-Miditha-74-150x150.jpegBP9 Bureauಪ್ರಮುಖಬಳ್ಳಾರಿರಾಜಕೀಯಬಳ್ಳಾರಿ : ಮೈತ್ರಿ ಸರ್ಕಾರ ವಿಶ್ವಾಸ ಮತ ಸಾಭೀತು ಪಡಿಸಿದಲ್ಲಿ ನಾನು  ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಪಕ್ಷದ ವತಿಯಿಂದ ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಕೂಡಾ  ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನೇತ್ರತ್ವದಲ್ಲಿ ಕರಾಳ ದಿನಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ್ ರೆಡ್ಡಿ, ಮೈತ್ರಿ ಸರ್ಕಾರ...Kannada News Portal