ಬಳ್ಳಾರಿ:  ಇದು ಹಳಸಿದ ಮತ್ತು ಹಸಿದ ಸರಕಾರ. ತಾಂತ್ರಿಕವಾಗಿ ಅಧಿಕಾರದಲ್ಲಿದೆ. ಆದರೆ, ನೈತಿಕವಾಗಿ ಸರ್ಕಾರ ನಡೆಸಲು ಉಭಯ ಪಕ್ಷಗಳಿಗೂ ಯೋಗ್ಯತೆ ಇಲ್ಲ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಬಿ.ಶ್ರೀನಿವಾಸ್ ಪರ ಪ್ರಚಾರ ನಡೆಸುತ್ತಿರುವ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಲಿವಿಂಗ್ ಟುಗೆದರ್ ಸರಕಾರವಿದು. ಅರೆಂಜ್ಡ್ ಮ್ಯಾರೇಜೇ ಹೆಚ್ಚು ದಿನ ಉಳಿಯದ ಈ ಕಾಲದಲ್ಲಿ, ಸಹ ಜೀವನ ಉಳಿಯುತ್ತಾ? ಸಚಿವ ಸಂಪುಟ ರಚನೆ ವೇಳೆ ಸರಕಾರ ಬೀಳಲಿದೆ ಎಂದು ಹೇಳಿದರು. ಬಳ್ಳಾರಿ, ಬೀದರ್, ಬೆಳಗಾವಿ ಹಾಗೂ ಬೀಜಾಪುರ ಜಿಲ್ಲೆಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದ್ದರಿಂದ ಸರಕಾರ ರಚಿಸುವಲ್ಲಿ ಹಿನ್ನೆಡೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ನಾಲ್ಕು ವರ್ಷಗಳ ಸಾಧನೆ ಬಗ್ಗೆ ತೃಪ್ತಿ ಇದೆ. ಮೋದಿ ಜನರಿಗೆ ಹತ್ತಿರವಾಗಿ, ಪ್ರಧಾನ ಸೇವಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

Please follow and like us:
0
http://bp9news.com/wp-content/uploads/2018/06/Karnatakada-Miditha-3.jpeghttp://bp9news.com/wp-content/uploads/2018/06/Karnatakada-Miditha-3-150x150.jpegBP9 Bureauಪ್ರಮುಖಬಳ್ಳಾರಿರಾಜಕೀಯಬಳ್ಳಾರಿ:  ಇದು ಹಳಸಿದ ಮತ್ತು ಹಸಿದ ಸರಕಾರ. ತಾಂತ್ರಿಕವಾಗಿ ಅಧಿಕಾರದಲ್ಲಿದೆ. ಆದರೆ, ನೈತಿಕವಾಗಿ ಸರ್ಕಾರ ನಡೆಸಲು ಉಭಯ ಪಕ್ಷಗಳಿಗೂ ಯೋಗ್ಯತೆ ಇಲ್ಲ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಬಿ.ಶ್ರೀನಿವಾಸ್ ಪರ ಪ್ರಚಾರ ನಡೆಸುತ್ತಿರುವ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಲಿವಿಂಗ್ ಟುಗೆದರ್ ಸರಕಾರವಿದು. ಅರೆಂಜ್ಡ್ ಮ್ಯಾರೇಜೇ ಹೆಚ್ಚು ದಿನ ಉಳಿಯದ ಈ ಕಾಲದಲ್ಲಿ, ಸಹ ಜೀವನ ಉಳಿಯುತ್ತಾ?...Kannada News Portal