ಬಳ್ಳಾರಿ : ಜನಾರ್ಧನ್​​ ರೆಡ್ಡಿ ಕನಸು ಭಗ್ನಗೊಂಡಿದ್ದು, ಸುಪ್ರಿಂ ಕೋರ್ಟ್‌ ಬಳ್ಳಾರಿ ಜೆಲ್ಲೆ ಪ್ರವೇಶಿಸಲು ಅನುಮತಿ ನಿರಾಕರಿಸಿದೆ. ಇದರಿಂದ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಸಹೋದರರ ಪರ ಪ್ರಚಾರ ಮಾಡುವ ಉದ್ದೇಶದಿಂದ ಬಳ್ಳಾರಿಗೆ ಪ್ರವೇಶ ನೀಡುವಂತೆ  ಅನುಮತಿ ಕೋರಿದ್ದ ಜನಾರ್ಧನ್‌ ರೆಡ್ಡಿ ಹಿನ್ನಡೆಯಾಗಿದೆ.

ಭ್ರಷ್ಟಾಚಾರದ ಆರೋಪ ಹೊಂದಿರುವ ಜನಾರ್ಧನ್​​ ರೆಡ್ಡಿ ಬಳ್ಳಾರಿಗೆ ಹೋಗಲು ಒಂದಲ್ಲಾ ಒಂದು ಕಾರಣ ಹುಡುಕುತ್ತಿದ್ದರು. ಆದರೆ ಈಗ ಚುನಾವಣೆ ಪ್ರಚಾರಕ್ಕೆ 2 ದಿನವಾದರೂ ಅವಕಾಶ ನೀಡಿ ಎಂದು ಕೋರ್ಟ್​ಗೆ ಅನು ಮತಿ ನೀಡಿದ್ದರು.

ಕೋರ್ಟ್​ ಈಗ  ಅನುಮತಿ ನಿರಾಕರಿಸಿದೆ. ಯಾವುದೇ ಕಾರಣಕ್ಕೂ ಜನಾರ್ಧನ್​ ರೆಡ್ಡಿ ಬಳ್ಳಾರಿಗೆ ಹೋಗ ಬಾರದೆಂದು ಆದೇಶ ನೀಡಿದೆ. ಮಗಳ ಮದುವೆಯನ್ನ ಹೊರತು ಪಡಿಸಿ ಬಳ್ಳಾರಿಗೆ ಜನಾರ್ಧನ್​​ ರೆಡ್ಡಿ ಪ್ರವೇಶಿಸಲು  ನ್ಯಾಯಾಲಯ ಇದುವರೆಗೂ ಅವಕಾಶ ನೀಡಿಲ್ಲ.

ಈ ಎಲ್ಲಾ ಬೆಳವಣಿಗೆಗಳಿಂದ ಬಿಜೆಪಿ ಪರ ಅದರಲ್ಲೂ ತಮ್ಮ ಸಹೋದರರ ಮತ್ತು ಆಪ್ತರ  ಪರವಾಗಿ ಪ್ರಚಾರ ಮಾಡಬೇಕೆಂಬ ಆಸೆ ಇಟ್ಟು ಕೊಂಡಿದ್ದ ಜನಾರ್ಧನ್​​ ರೆಡ್ಡಿಗೆ ನಿರಾಸೆ ಉಂಟಾಗಿದೆ. ಹಾಗೆ  ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಶಕ್ತಿಯಾಗಿದ್ದ ಜನಾರ್ಧನ್​​ ರೆಡ್ಡಿ ಬರದೆ ಇರುವುದು ಅಲ್ಪ ಹಿನ್ನೆಡೆಯಾದಂತಾಗಿದೆ.

 

 

 

Please follow and like us:
0
http://bp9news.com/wp-content/uploads/2018/05/collage-1-4.jpghttp://bp9news.com/wp-content/uploads/2018/05/collage-1-4-150x150.jpgBP9 Bureauಪ್ರಮುಖಬಳ್ಳಾರಿಬಳ್ಳಾರಿ : ಜನಾರ್ಧನ್​​ ರೆಡ್ಡಿ ಕನಸು ಭಗ್ನಗೊಂಡಿದ್ದು, ಸುಪ್ರಿಂ ಕೋರ್ಟ್‌ ಬಳ್ಳಾರಿ ಜೆಲ್ಲೆ ಪ್ರವೇಶಿಸಲು ಅನುಮತಿ ನಿರಾಕರಿಸಿದೆ. ಇದರಿಂದ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಸಹೋದರರ ಪರ ಪ್ರಚಾರ ಮಾಡುವ ಉದ್ದೇಶದಿಂದ ಬಳ್ಳಾರಿಗೆ ಪ್ರವೇಶ ನೀಡುವಂತೆ  ಅನುಮತಿ ಕೋರಿದ್ದ ಜನಾರ್ಧನ್‌ ರೆಡ್ಡಿ ಹಿನ್ನಡೆಯಾಗಿದೆ. ಭ್ರಷ್ಟಾಚಾರದ ಆರೋಪ ಹೊಂದಿರುವ ಜನಾರ್ಧನ್​​ ರೆಡ್ಡಿ ಬಳ್ಳಾರಿಗೆ ಹೋಗಲು ಒಂದಲ್ಲಾ ಒಂದು ಕಾರಣ ಹುಡುಕುತ್ತಿದ್ದರು. ಆದರೆ ಈಗ ಚುನಾವಣೆ ಪ್ರಚಾರಕ್ಕೆ 2 ದಿನವಾದರೂ ಅವಕಾಶ ನೀಡಿ ಎಂದು...Kannada News Portal