ಬೆಂಗಳೂರು:  ಆಡಳಿತ ಕೇಂದ್ರಗಳಾದ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ವನ್ನು ನಿಗಧಿ ಪಡಿಸಲಾಗಿದೆ. ಇದೇ ತಿಂಗಳ 29 ರಂದು ಎರಡು ಹಂತದಲ್ಲಿ ಮತದಾನ  ನಡೆಯಲಿದೆ. ಎಂದು ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ಹಂತದಲ್ಲಿ 29 ನಗರಸಭೆಯ 927 ವಾರ್ಡ್​ ಗಳು 53 ಪುರಸಭೆಯ 1,247 ವಾರ್ಡ್​ಗಳು ಹಾಗೂ 23 ಪಟ್ಟಣ ಪಂಚಾಯಿತಗಳ 400 ವಾರ್ಡ್​ಗಳು ಸೇರಿ ಒಟ್ಟು 2574 ವಾರ್ಡ್ಗಳಿಗೆ ಆಗಸ್ಟ್ 29 ರಂದು ಚುನಾವಣೆ ನಡೆಯಲಿದೆ ಎಂದು ಪಿ.ಎನ್.ಶ್ರೀನಿವಾಸಾಚಾರಿ ಹೇಳಿದರು.

ಶಿವಮೊಗ್ಗ, ಮೈಸೂರು , ತುಮಕೂರು ಜಿಲ್ಲೆಗಳ ಚುನಾವಣೆ ವಿಚಾರ ನ್ಯಾಯಾಲಯದಲ್ಲಿ  ಇರುವುದರಿಂದ  ಈ ಭಾಗದ  ವಾರ್ಡ್​ಗಳಿಗೆ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಚುನಾವಣೆ
ಅಕ್ಟೋಬರ್  ಅಥವಾ ನವೆಂಬರ್ ನಲ್ಲಿ  ನಡೆಸಲಾಗುವುದು ಎಂದು ತಿಳಿಸಿದರು.

Election Order Original

ಇನ್ನು ಚುನುವಾಣೆ ದಿನಾಂಕವನ್ನು ಘೋಷಿಸುತ್ತಿದ್ದಂತೆ ಇದಿಂನಿಂದಲೇ (02/08/2018) ನೀತಿ ಸಂಹಿತೆ ಜಾರಿಯಾಗಿದೆ, ಮತದಾನಕ್ಕೆ ಎಲ್ಲಾ  ಸಿದ್ಧತೆಗಳು ಆರಂಭಗೊಂಡಿವೆ. ಆಗಸ್ಟ್ 10ರಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಚುನಾವಾಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮ ಪತ್ರ ಸಲ್ಲಿಕೆಗೆ ಈ ತಿಂಗಳ 17 ಕೊನೇ ದಿನಾಂಕವಾಗಿದ್ದು, 18 ರಂದು ನಾಮಪತ್ರ ಪರಿಶೀಲನೆ ನಡೆಯಲಾವುದು ಎಂದು ತಿಳಿಸಿದರು. ಇನ್ನು ಎರಡನೇ ಹಂತದ ಚುನಾವಾಣೆ ಆಕ್ಟೋಬರ್ 29ಕ್ಕೆ ಮತದಾನ ನಡೆಯಲಿದ್ದು. ಸೆಪ್ಟಂಬರ್ 1 ರಂದು ಮತ ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಬುಧಾವಾರವೇ ಮೀಸಲು ಪಟ್ಟಿ ಪ್ರಕಟಿಸಿದ್ದು, ಆಯೋಗದ ವೆಬ್ ಸೈಟ್ ನಲ್ಲಿ ಮೀಸಲು ಪಟ್ಟಿ ಲಭ್ಯವಿದೆ. ಇನ್ನು ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ವೆಚ್ಚದ ಬಗ್ಗೆಯೂ ಮಾಹಿತಿ ನೀಡಿದರು. ನಗರಸಭೆಗೆ ಸ್ಪರ್ಧಿಸುವ ಒಬ್ಬ ಅಭ್ಯರ್ಥಿ 2ಲಕ್ಷ ರೂಪಾಯಿ ಹಾಗೂ ಪುರಸಭೆಗೆ  ಸ್ಪರ್ಧಿಸುವ ಅಭ್ಯರ್ಥಿ 1.5 ಲಕ್ಷ ರೂಪಾಯಿಯನ್ನು ಮಾತ್ರವೇ ವೆಚ್ಚ ಮಾಡಬಹುದಾಗಿದೆ. ಮತ್ತು ಈ ಸ್ಥಳೀಯ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದರು
ಒಟ್ಟು 2574 ವಾರ್ಡ್​ಗಳಲ್ಲಿ 3897 ಮತಗಟ್ಟಿಗಳನ್ನು ಗುರುತಿಸಲಾಗಿದ್ದು 36,03,691 ಮತದಾರರು ಇದ್ದಾರೆ ಎಂದು ತಿಳಿಸಿದರು.
http://karsec.gov.in/

Please follow and like us:
0
http://bp9news.com/wp-content/uploads/2018/08/EVM-1.jpghttp://bp9news.com/wp-content/uploads/2018/08/EVM-1-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು ಗ್ರಾಮಾಂತರರಾಜಕೀಯಬೆಂಗಳೂರು:  ಆಡಳಿತ ಕೇಂದ್ರಗಳಾದ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ವನ್ನು ನಿಗಧಿ ಪಡಿಸಲಾಗಿದೆ. ಇದೇ ತಿಂಗಳ 29 ರಂದು ಎರಡು ಹಂತದಲ್ಲಿ ಮತದಾನ  ನಡೆಯಲಿದೆ. ಎಂದು ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊದಲ ಹಂತದಲ್ಲಿ 29 ನಗರಸಭೆಯ 927 ವಾರ್ಡ್​ ಗಳು 53 ಪುರಸಭೆಯ 1,247 ವಾರ್ಡ್​ಗಳು ಹಾಗೂ 23 ಪಟ್ಟಣ ಪಂಚಾಯಿತಗಳ 400 ವಾರ್ಡ್​ಗಳು ಸೇರಿ ಒಟ್ಟು 2574 ವಾರ್ಡ್ಗಳಿಗೆ ಆಗಸ್ಟ್ 29 ರಂದು...Kannada News Portal