ಬಳ್ಳಾರಿ  :  ಒಂದಲ್ಲಾ ಒಂದು ವಿಷಯಕ್ಕೆ ಬಳ್ಳಾರಿ ಸುದ್ದಿ ಸದ್ದಿನಲ್ಲಿರುತ್ತದೆ. ಈ ಬಾರಿಯು ಅಂತಹುದೇ  ಒಂದು ಪ್ರಕರಣ ಇಲ್ಲಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ 19/8/2018 ರಂದು ಒಂದು ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ರೀತಿಶ್(3)ಎಂಬ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ದುಖ:ತಪ್ತ ಪೋಷಕರು ಸಂಡೂರು ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಲು ಮುಂದಾಗಿದ್ದಾರೆ.  ಆದರೆ ಪೋಷಕರಿಂದ ಬಿಳಿ ಹಾಳೆ ಮೇಲೆ ಸಹಿಹಾಕಿಸಿಕೊಂಡು ಎಫ್ ಐ ಆರ್ ದಾಖಲಿಸದೆ ದೂರುದಾರನನ್ನು ವಾಪ್ಪಸ್ ಕಳುಹಿಸಿದ್ದಾರೆ, ಪಿಎಸ್ಐ ಬಾಳನಗೌಡ.  ಏನು  ಈ ಪ್ರಕರಣ, ಎಲ್ಲಿ ನಡಿತು, ಈ 3 ವರ್ಷದ ಬಾಲಕ ಹೇಗೆ ಮೃತಪಟ್ಟ ಎಲ್ಲವನ್ನು ತಿಳಿದುಕೊಳ್ಳಲು ಈ ಸ್ಟೋರಿ ನೋಡಿ.

ರಿಯಾನ್ ಎಂಬ ಮುಸ್ಲಿಂ ಯುವತಿಯು ಅಂಜಿನೇಯಲು ಎಂಬ ಹಿಂದು ಯುವಕನ್ನು ಪ್ರೀತಿಸಿ,  ಎರಡು ಕುಟುಂಬದವರಿಂದ ಸಮ್ಮತಿ ಪಡೆದು ವಿವಾಹ ವಾಗುತ್ತಾರೆ.  ಈ ದಂಪತಿಯ ಒಬ್ಬನೇ ಮಗ ರೀತಿಶ್. ಈ ಮೂವರು  ಸಂಡೂರಿನಲ್ಲೆ ಇರುವ ತಮ್ಮ ತಾಯಿಯನ್ನು ನೋಡಲಿಕ್ಕೆ ಬರುತ್ತಾರೆ. ಆ ವೇಳೆ ತಮ್ಮ ಗಾಡಿಯನ್ನು ಅಲ್ಲೇ ಪಕ್ಕದಲ್ಲಿ ಪಾಳು ಬಿದ್ದ ಮನೆಯ ಹತ್ತಿರ ನಿಲ್ಲಿಸಿ ಇನ್ನೇನು ಅವರು  ಮನೆಯೊಳಗೆ ಹೊಗಬೇ ಕು ವೇಳೆ ಆ ಪಾಳು ಬಿದ್ದ ಮನೆಯು ಏಕಾಏಕಿ ಕುಸಿದು ಬಿಳುತ್ತದೆ. ಪಾಳು  ಮನೆ ಬಿದ್ದ ರಭಸಕ್ಕೆ, ಇನ್ನೂ ಗಾಡಿಯ ಮೇಲೆಯೇ ಕುಳಿತಿದ್ದ ರಿತೀಶ್ನ ಮೇಲೆ ಬಿದ್ದು, ಅವಶೇಷಗಳ ಅಡಿಯಲ್ಲಿ ಸಲುಕಿದ ಬಾಲಕನ ಕಾಲಿಗೆ ಬಲವಾದ ಪೇಟ್ಟು ಬೀಳುತ್ತದೆ. ಆತನನ್ನು ಕೂಡಲೆ ಪೋಷಕರು ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಏನು ಅರಿಯದ ಕಂದಮ್ಮ.

ಪೋಷಕರು ವಿಧಿಯಿಲ್ಲದೆ ಮಗನ ಸಾವಿನ ಕುರಿತಾಗಿ ದೂರುದಾಖಲಿಸಲು ಸಂಡೂರು ಪೊಲೀಸ್ ಠಾಣೆಗೆ ಬರುತ್ತಾರೆ.  ಆದರೆ ಪೋಷಕರಿಗೆ ನ್ಯಾಯಾ ಒದಗಿಸಬೇಕಾದ ಈ ಠಾಣೆಯ ಪಿಎಸ್ಐ ಬಾಳನಗೌಡ ವಿಲನ್ ಆಗಿದ್ದಾರೆ.

ಓದುಗರೇ… ಪಿಎಸ್ಐ ಬಾಳನಗೌಡರು ದು:ಖದಲ್ಲಿದ್ದ ಪೋಷಕರ ಬಳಿ ಯಾವುದೇ ಲೀಖಿತವಾದ ದೂರನ್ನು ಪಡಿಯದೆ, ಬರಿ ಕಾಲಿ ಹಾಳೆಯ ಮೇಲೆ ಸಹಿಹಾಕಿಸಿಕೊಂಡು ಕಳುಹಿಸಿದ್ದಾರೆ. ಇನ್ನು ಈ ಸಂಬಂಧ ಪ್ರಕರಣ ನಡೆದು ಒಂದು ತಿಂಗಳ(10/9/2018) ನಂತರ ದೂರುದಾರರಾದ ಮೃತನ ಪೋಷಕರನ್ನು ಠಾಣೆಗೆ ಕರೆಸಿದ ಪಿಎಸ್ಐ ಬಾಳನಗೌಡ, ನಿಮ್ಮ ದೂರಿನ (507/2018 ) ಪ್ರಕಾರ ಮನೆ ಮಾಲಿಕನಿಗೆ 15 ದಿನದೊಳಗೆ  ಪಾಳು ಬಿದ್ದ ಮನೆಯನ್ನು ತೆರವು ಗೊಳಿಬೇಕೆಂದು  ಕಾನೂನಿನ ಪ್ರಕಾರ ಹಿಂಬರಹವನ್ನು ಕೊಟ್ಟಿದ್ದೇನೆ,ಆದ್ದರಿಂದ ಈ ಪ್ರಕರಣ ಇಲ್ಲಿಗೆ ಮುಗಿದಿದೆ ಎಂದು ತಿಳಿಸಿದ್ದಾರೆ.

ಆದರೆ ಇಲ್ಲಿ ಪಿಎಸ್ಐ ಬಾಳನಗೌಡ ಬೇಜವಾಬ್ಧಾರಿಯನ್ನ ತೊರಿದ್ದಾನೆ ಎಂದು ತಿಳಿದು ಬರುತ್ತದೆ. ಏಕೆಂದರೆ ಮಗನ ಸಾವಿಗೆ ನ್ಯಾಯ ಬೇಕೆಂದು ಪೋಷಕರು ದೂರು ನೀಡಿದ್ದರು. ಆದರೆ ಪಿಎಸ್ಐ ಅವನಿಗೆ ಹೇಗೆ ಬೇಕೋ ಹಾಗೆ ತನಿಖೆಯನ್ನು ಮುಗಿಸಿದ್ದಾನೆ. ಅಲ್ಲದೆ ನ್ಯಾಯಾಕ್ಕಾಗಿ ದೂರು ನೀಡಿದ ಪೋಷಕರಿಗೆ ಧಮಕಿ ಹಾಕಿದ್ದಾನೆ.

ನೀವು ಈ ಕೆಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೇಳಿದರೆ ನಿಮ್ಮನ್ನೇ ಒಳಗೆ ಹಾಕಬೇಕಾಗುತ್ತದೆ ಎಂದು ಹೇಳಿದ್ದಾನೆ ಪಿಎಸ್ಐ. ಈ ಮಾತಿನಿಂದ ಗಾಬರಿಗೊಂಡ ಪೋಷಕರು, ಯಾವುದೇ ಮಾಹಿತಿಯನ್ನು ಪಡಯದೆ ಹೇಗೆ ತನಿಖೆಯನ್ನು ಮುಗಿಸಿದ್ದಾರೆಂದು ಗೊಂದಲದಿಂದ ಹೊರ ಬಂದಿದ್ದಾರೆ. ನಂತರ ಈ ಕೇಸಿನಲ್ಲಿ ನಡೆಯಬಾರದ್ದೇನೋ ನಡೆದಿದೆ ಎಂದು ಪೋಷಕರು ಅಭಿಪ್ರಾಯ ಪಟ್ಟು ಪಿಎಸ್ಐ ಬಾಳನಗೌಡ ವಿರುದ್ಧವೇ ಕ್ರಮಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೋಷಕರು ದೂರು ನೀಡಿದ್ದಾರೆ.

ಪೋಷಕರು ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿಯ ಭೇಟಿ ಸಂದರ್ಭದಲ್ಲಿ ಪ್ರಕರಣದ ಸಂಪೂರ್ಣ ವಿವರವನ್ನ ಪೋಷಕರು ತಿಳಿಸಿದ್ದು, ತಮಗೆ ಅನ್ಯಾಯವಾಗಿದೆ, ನಮಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಪಿಎಸ್ ಐ ಬಾಳನಗೌಡ ಏನೋ ತಪ್ಪೆಸಗಿದ್ದಾನೆ ಎಂದು ಸಂಡೂರಿನಲ್ಲಿ ಚರ್ಚೆ ನಡೆಯುತಿದ್ದು ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಪ್ರಕರಣಕ್ಕೆ ನ್ಯಾಯ ವದಗಿಸಿಬೇಕೆಂದು ಸಾರ್ವಜನಿಕರ ಆದಿಯಾಗಿ ಪೋಷಕರು ಆಗ್ರಹಿಸಿದ್ದಾರೆ.

ವರದಿ : ಬಜ್ಜಾರಪ್ಪ.ಕೆ, ಬಳ್ಳಾರಿ

Please follow and like us:
0
http://bp9news.com/wp-content/uploads/2018/09/Karnatakada-Miditha-27.jpeghttp://bp9news.com/wp-content/uploads/2018/09/Karnatakada-Miditha-27-150x150.jpegBP9 Bureauಪ್ರಮುಖಬಳ್ಳಾರಿ  ಬಳ್ಳಾರಿ  :  ಒಂದಲ್ಲಾ ಒಂದು ವಿಷಯಕ್ಕೆ ಬಳ್ಳಾರಿ ಸುದ್ದಿ ಸದ್ದಿನಲ್ಲಿರುತ್ತದೆ. ಈ ಬಾರಿಯು ಅಂತಹುದೇ  ಒಂದು ಪ್ರಕರಣ ಇಲ್ಲಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ 19/8/2018 ರಂದು ಒಂದು ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ರೀತಿಶ್(3)ಎಂಬ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ದುಖ:ತಪ್ತ ಪೋಷಕರು ಸಂಡೂರು ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಲು ಮುಂದಾಗಿದ್ದಾರೆ.  ಆದರೆ ಪೋಷಕರಿಂದ ಬಿಳಿ ಹಾಳೆ ಮೇಲೆ ಸಹಿಹಾಕಿಸಿಕೊಂಡು ಎಫ್ ಐ ಆರ್ ದಾಖಲಿಸದೆ ದೂರುದಾರನನ್ನು ವಾಪ್ಪಸ್ ಕಳುಹಿಸಿದ್ದಾರೆ,...Kannada News Portal