ಬಳ್ಳಾರಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸದ್ಯದಲ್ಲೇ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್​​ ಸದಸ್ಯರುಗಳು ಪ್ರತಿಭಟನೆ ನಡೆಸಲಿದ್ದಾರಂತೆ. ಈ ವಿಚಾರವಾಗಿ ರಾಜ್ಯ ಜಿಪಂ ಸದಸ್ಯರ ಒಕ್ಕೂಟ ಸಂಚಾಲಕರಾದ  ಕೆರೆ ಹಳ್ಳಿ  ನವೀನ್ ಅವರ ನೇತೃತ್ವದಲ್ಲಿ ಹಲವು ಸಿದ್ಧತೆಗಳು ನಡೆದಿದೆಯಂತೆ.


ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಕೆರೆ ಹಳ್ಳಿ  ನವೀನ್, ಜಿಪಂ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಅನುದಾನದಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನೀಡುವಷ್ಟು ಅನುದಾನ ಕೂಡಾ ನಮಗೆ ಬರುತ್ತಿಲ್ಲ. ಆದ್ದರಿಂದ  ರಾಜ್ಯ,ಕೇಂದ್ರ ಸರ್ಕಾರಗಳ ಬಳಿಗೆ ನಿಯೋಗ ಹೋಗಲಿದ್ದೇವೆ ಮತ್ತು ಇದೇ ತಿಂಗಳಲ್ಲಿ ಉಗ್ರ ಹೋರಾಟ ಕೂಡಾ ಮಾಡುತ್ತೇವೆ  ಎಂದರು.

ಈಗಾಗಲೇ13 ಜಿಪಂಗಳಲ್ಲಿ ಸಮಾವೇಶ ಮಾಡಿ, ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು. ಆಲ್ಲದೆ  ಅದರ ಮುಂದುವರೆದ ಭಾಗವಾಗಿ ಬಳ್ಳಾರಿ ಜಿಪಂನಲ್ಲಿ ಸಮಾವೇಶ ನಡೆಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ವರದಿ: ಬಜಾರಪ್ಪ, ಬಳ್ಳಾರಿ

 

Please follow and like us:
0
http://bp9news.com/wp-content/uploads/2018/07/PM-Modi-nominates-Karnataka-CM-Kumaraswamy-for-fitness-challenge-gets-cheeky-reply-1024x674.jpghttp://bp9news.com/wp-content/uploads/2018/07/PM-Modi-nominates-Karnataka-CM-Kumaraswamy-for-fitness-challenge-gets-cheeky-reply-150x150.jpgBP9 Bureauಪ್ರಮುಖಬಳ್ಳಾರಿಬಳ್ಳಾರಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸದ್ಯದಲ್ಲೇ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್​​ ಸದಸ್ಯರುಗಳು ಪ್ರತಿಭಟನೆ ನಡೆಸಲಿದ್ದಾರಂತೆ. ಈ ವಿಚಾರವಾಗಿ ರಾಜ್ಯ ಜಿಪಂ ಸದಸ್ಯರ ಒಕ್ಕೂಟ ಸಂಚಾಲಕರಾದ  ಕೆರೆ ಹಳ್ಳಿ  ನವೀನ್ ಅವರ ನೇತೃತ್ವದಲ್ಲಿ ಹಲವು ಸಿದ್ಧತೆಗಳು ನಡೆದಿದೆಯಂತೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal