ಬಳ್ಳಾರಿ : ಖತರ್ನಾಕ್ ಸರಗಳ್ಳರನ್ನು ಬಂಧಿಸುವಲ್ಲಿ ಕೌಲ್ ಬಜಾರ್  ಠಾಣಾಪೊಲೀಸರು ಯಶಸ್ವಿಯಾಗಿದ್ದಾರೆ ಹಾಗೂ ಬಂಧಿತರಿಂದ 17,07,900 ರೂಗಳ ಮೌಲ್ಯದ ಆಭರಣಗಳು ಹಾಗು ಮೋಟರ್ ಬೈಕ್ ವಶ ಪಡೆಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಅರುಣ್ ರಂಗಾನಾಥ್ ಪೊಲೀಸ್ ಅಧೀಕ್ಷಕರು, ಜಗದೀಶ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಉಮೇಶ್ ಈಶ್ವರ್ ನಾಯ್ಕ್ ಡಿ.ಎಸ್.ಪಿ ಬಳ್ಳಾರಿ ನಗರ ಇವರುಗಳ ನೇತೃತ್ವದಲ್ಲಿ ಸರಗಳ್ಳರನ್ನು ಮತ್ತು ಮನೆಗಳ್ಳರನ್ನು  ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತ್ಯೇಕ ತಂಡದಿಂದ ಆರೋಪಿಗಳ ಶೋಧ ಕಾರ್ಯನಡೆಸಲಾಯಿತು, ಇನ್ನು ಈ  ಪ್ರಕರಣ ಸಂಬಂಧ ಖಚಿತ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಪಡೆದುಕೊಂಡು ಕಳುವಾಗಿದ್ದಾ ಆಭರಣಗಳ ಮಾರಾಟ ಮಾಡುವ ವೇಳೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 17ಲಕ್ಷಮೌಲ್ಯದ  ಚಿನ್ನ ,ಬೇಳ್ಳಿ,ಲ್ಯಾಪ್‌ಟಾಪ್ ಮತ್ತು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಆರೋಪಿಗಳನ್ನು ಲಂಬಾಣಿ ಮಲ್ಲಿಕಾರ್ಜುನ (38) ತಿಳಿದುಬಂದಿದ್ದು ಹಾಗೂ ಮತ್ತೊಬ್ಬ ಆರೋಪಿಯನ್ನು ವೆಂಕಟೇಶ್ ನಾಯಕ್  (43) ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಖಚಿತ ಮಾಹಿತಿಯನ್ನು ಪಡೆದುಕೊಂಡ ಅಧಿಕಾರಿಗಳು ನಿನ್ನೆ ಸಂಜೆ ಬಳ್ಳಾರಿ ಹಳೇ ಬೈಪಾಸ್ ರಸ್ತೆ ಈದ್ಗಾ ಮೈದಾನದ ಬಳಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಇನ್ನು ಮಂಗಳವಾರ ವರಿಷ್ಠ ಅಧಿಕಾರಿಗಳು ಪತ್ರಿಕೆ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/09/Karnatakada-Miditha-21.jpeghttp://bp9news.com/wp-content/uploads/2018/09/Karnatakada-Miditha-21-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ : ಖತರ್ನಾಕ್ ಸರಗಳ್ಳರನ್ನು ಬಂಧಿಸುವಲ್ಲಿ ಕೌಲ್ ಬಜಾರ್  ಠಾಣಾಪೊಲೀಸರು ಯಶಸ್ವಿಯಾಗಿದ್ದಾರೆ ಹಾಗೂ ಬಂಧಿತರಿಂದ 17,07,900 ರೂಗಳ ಮೌಲ್ಯದ ಆಭರಣಗಳು ಹಾಗು ಮೋಟರ್ ಬೈಕ್ ವಶ ಪಡೆಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಅರುಣ್ ರಂಗಾನಾಥ್ ಪೊಲೀಸ್ ಅಧೀಕ್ಷಕರು, ಜಗದೀಶ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಉಮೇಶ್ ಈಶ್ವರ್ ನಾಯ್ಕ್ ಡಿ.ಎಸ್.ಪಿ ಬಳ್ಳಾರಿ ನಗರ ಇವರುಗಳ ನೇತೃತ್ವದಲ್ಲಿ ಸರಗಳ್ಳರನ್ನು ಮತ್ತು ಮನೆಗಳ್ಳರನ್ನು  ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಪ್ರತ್ಯೇಕ ತಂಡದಿಂದ ಆರೋಪಿಗಳ ಶೋಧ ಕಾರ್ಯನಡೆಸಲಾಯಿತು, ಇನ್ನು ಈ ...Kannada News Portal