ಬಳ್ಳಾರಿ ; ಜಿಲ್ಲೆಯಲ್ಲಿ ಮಳೆ ರಾಯ ಕೃಪೆ ತೋರದ ಕಾರಣ ಜಿಲ್ಲೆಯ ಅಲ್ಲಿನ  ರೈತರು ಜಮೀನುಗಳಿಗೆ ಮತ್ತು ಜಾನುವಾರಗಳಿಗೆ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಭಾಗದ ರೈತರು ಜೀವನದಿಯಾಗಿರುವ ತುಂಗ ಭದ್ರನಾಲೆಗೆ ಕನ್ನ ಹಾಕಿದ್ದಾರೆ. ನೇರವಾಗಿ ತುಂಗ ಭದ್ರ ಅಣೆಕಟ್ಟಿಗೆ ಲಗ್ಗೆಯಿಟ್ಟಿರುವ ರೈತರು ತಮ್ಮ ಜಮೀನುಗಳಿಗೆ ಕದ್ದು ನೀರನ್ನು ಉಣಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ನೀರು ಪೊಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯ ಕುರುಗೊಡು ತಾಲೂಕಿನ ಗುತ್ತಿಗೆ ನೂರು ಗ್ರಾಮದ ಹತ್ತಿರ ಎಲ್ ಎಲ್ ಸಿ ಕಾಲುವೆ 60  ಕಿಲೋಮೀಟರ್ ನಲ್ಲಿ , ಬೆಳಗಿನ ಜಾವದಲ್ಲಿ  ರೈತರು ಈ  ಕೈಚಳಕ ತೋರಿದ್ದಾರೆ. ಇನ್ನು ಜಿಲ್ಲೆಯಲ್ಲಿ ಮಳೆಯ ಅಭಾವದಿಂದಾಗಿ ರೈತರು ಈ ಕೃತ್ಯಗಳನ್ನು ಆಗಾಗ್ಗೆ  ಮಾಡುತ್ತಿರುತ್ತಾರೆ ಎಂದು ಬೋರ್ಡ್ ಅಧಿಕಾರಿ ವೆಂಕಟರಮಣ ತಿಳಿಸಿದ್ದಾರೆ. ಈ ಸಂಬಂಧ ಕುರುಗೊಡು ಪೋಲಿಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಬಜಾರಪ್ಪ.ಕೆ, ಬಳ್ಳಾರಿ

Please follow and like us:
0
http://bp9news.com/wp-content/uploads/2018/09/Karnatakada-Miditha-25.jpeghttp://bp9news.com/wp-content/uploads/2018/09/Karnatakada-Miditha-25-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ ; ಜಿಲ್ಲೆಯಲ್ಲಿ ಮಳೆ ರಾಯ ಕೃಪೆ ತೋರದ ಕಾರಣ ಜಿಲ್ಲೆಯ ಅಲ್ಲಿನ  ರೈತರು ಜಮೀನುಗಳಿಗೆ ಮತ್ತು ಜಾನುವಾರಗಳಿಗೆ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಭಾಗದ ರೈತರು ಜೀವನದಿಯಾಗಿರುವ ತುಂಗ ಭದ್ರನಾಲೆಗೆ ಕನ್ನ ಹಾಕಿದ್ದಾರೆ. ನೇರವಾಗಿ ತುಂಗ ಭದ್ರ ಅಣೆಕಟ್ಟಿಗೆ ಲಗ್ಗೆಯಿಟ್ಟಿರುವ ರೈತರು ತಮ್ಮ ಜಮೀನುಗಳಿಗೆ ಕದ್ದು ನೀರನ್ನು ಉಣಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ನೀರು ಪೊಲಾಗುತ್ತಿದೆ.  var domain = (window.location !=...Kannada News Portal