ಬಳ್ಳಾರಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಬಹುದೊಡ್ಡ ಭಿನ್ನಮತ ವಿಕೋಪಕ್ಕೆ ತಿರುಗಿದೆ. ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಸಂಸದ ಶ್ರೀರಾಮುಲು ಇಂದು ಕ್ಷೇತ್ರಕ್ಕೆ ಬಂದಿದ್ದು ಗಲಾಟೆಗೆ ಕಾರಣವಾಗಿದೆ.

ಮೊಳಕಾಲ್ಮೂರು ಕ್ಷೇತ್ರದ ಬಂಡಾಯ ಅಭ್ಯರ್ಥಿ ತಿಪ್ಪೇಸ್ವಾಮಿ ಬೆಂಬಲಿಗರು ನಾಯಕನ ಹಟ್ಟಿಗೆ ಪೂಜೆ  ಮಾಡಿ ಪ್ರಚಾರಕ್ಕೆ ತೆರಳಲು ಬಂದ ಶ್ರೀರಾಮುಲು ಅವರಿಗೆ ಚಪ್ಪಲಿ, ಪೂರಕೆ, ಕಲ್ಲು ಗಳನ್ನು ಹಿಡಿದು ಪ್ರತಿಭಟನೆ ಬಿಸಿ ತಟ್ಟಿದ್ದು, ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.ಮತ್ತು ಮುಂದುವರೆದ ತಿಪ್ಪೇಸ್ವಾಮಿ ಬೆಂಬಲಿಗರು ಶ್ರೀರಾಮುಲು ಕಾರಿಗೆ ಕಲ್ಲುಗಳನ್ನ ಎಸೆದು ಜಖಂಗೊಳಿಸಿದ್ದಾರೆ.

ಆದರೆ ಇತ್ತ ಶ್ರೀರಾಮುಲುಗೆ ಈ ಬೆಳವಣಿಗೆ ಆಗಬಹುದೆಂದು ಸೂಚನೆ ಇದ್ದಕಾರಣ ಆಂಧ್ರದಿಂದ ಜನರನ್ನ ಕರೆಸಿ ಕರೆದುಕೊಂಡು ಹೊಗಿದ್ದಾರೆ ಎನ್ನುವ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ರಾಮುಲು ಜೊತಗೆ ಬಂದ ಜನರ ಗಾಡಿಗಳೆಲ್ಲವು ಆಂಧ್ರದ ನೊಂದಣಿಯಾಗಿದ್ದು ಈ ಅನುಮಾನಕ್ಕೆ ಬಲ ತುಂಬಿದೆ. ಒಟ್ಟಿನಲ್ಲಿ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಬಂಡಾಯ ಪಕ್ಷದ ಕೈ ಮೀರಿದ್ದು, ಯಾವ ರೀತಿ ಶಮನ ಮಾಡಲಿದೆ ಎಂದು ಕಾದು ನೋಡಬೇಕು.

ವರದಿ: ಬಜಾರಪ್ಪ ಬಳ್ಳಾರಿ

 

 

 

Please follow and like us:
0
http://bp9news.com/wp-content/uploads/2018/04/sri-ramulu-Karnatakada-Miditha-1024x576.jpeghttp://bp9news.com/wp-content/uploads/2018/04/sri-ramulu-Karnatakada-Miditha-150x150.jpegBP9 Bureauಚಿತ್ರದುರ್ಗಪ್ರಮುಖಬಳ್ಳಾರಿಬಳ್ಳಾರಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಬಹುದೊಡ್ಡ ಭಿನ್ನಮತ ವಿಕೋಪಕ್ಕೆ ತಿರುಗಿದೆ. ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಸಂಸದ ಶ್ರೀರಾಮುಲು ಇಂದು ಕ್ಷೇತ್ರಕ್ಕೆ ಬಂದಿದ್ದು ಗಲಾಟೆಗೆ ಕಾರಣವಾಗಿದೆ. ಮೊಳಕಾಲ್ಮೂರು ಕ್ಷೇತ್ರದ ಬಂಡಾಯ ಅಭ್ಯರ್ಥಿ ತಿಪ್ಪೇಸ್ವಾಮಿ ಬೆಂಬಲಿಗರು ನಾಯಕನ ಹಟ್ಟಿಗೆ ಪೂಜೆ  ಮಾಡಿ ಪ್ರಚಾರಕ್ಕೆ ತೆರಳಲು ಬಂದ ಶ್ರೀರಾಮುಲು ಅವರಿಗೆ ಚಪ್ಪಲಿ, ಪೂರಕೆ, ಕಲ್ಲು ಗಳನ್ನು ಹಿಡಿದು ಪ್ರತಿಭಟನೆ ಬಿಸಿ ತಟ್ಟಿದ್ದು, ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.ಮತ್ತು...Kannada News Portal