ಮಹದೇವಪುರ : ಬೆಂಗಳೂರಿನ ಐಟಿ ವೃತ್ತಿಪರರು ಐಟಿ ಜಾಗೃತ ಮತದಾರ ವೇದಿಕೆ ಮತ್ತು ಇತರ ನಾಗರಿಕರ ಸಂಘಗಳು ಒಟ್ಟು ಸೇರಿ, ಜನರಲ್ಲಿ ಚುನಾವಣೆಯ ಸಮಯದಲ್ಲಿ ಮತ ಚಲಾವಣೆಯ ಹಕ್ಕಿನ ಕುರಿತಾಗಿ ಜಾಗೃತಿ ಮೂಡಿಸುವಲ್ಲಿ ನಿರತವಾಗಿದ್ದಾರೆ.

ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಸೆಂಟ್ರಲ್ ಮಾಲ್ ಅಂಗಳದಲ್ಲಿ ಗ್ರಾಹಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ವಿಶೇಷ ಅಭಿಯಾನವನ್ನು ಐಟಿ ಕ್ಷೇತ್ರದ ನಗರಿಗರು ಹಮ್ಮಿಕೊಂಡಿದರು.

ತೊಂದರೆಯಾದಾಗ ಸರಕಾರವನ್ನು ದೂಷಿಸುವುದಷ್ಟೇ ಅಲ್ಲ, ಅರ್ಹ ಅಭ್ಯರ್ಥಿಗೆ ವೋಟ್ ಮಾಡಿ ಆಯ್ಕೆ ಮಾಡುವುದೂ ನಾಗರಿಕರ ಕರ್ತವ್ಯ ಎಂಬುದನ್ನು ಕಳೆದ ಕೆಲವು ವಾರಗಳಿಂದ ಜನಸಂದಣಿ ದಟ್ಟವಾಗಿರುವ ಪ್ರದೇಶಗಳಲ್ಲಿ ಕಾರ್ಯಕ್ರಮಗಳ ಮೂಲಕ ತಿಳಿಹೇಳುತ್ತಿದ್ದಾರೆ.ವೋಟ್_ಮಾಡಿ ಎಂಬ ಹ್ಯಾಷ್’ನಡಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಅಂಗವಾಗಿ ಮೇಲೆ ತಿಳಿಸಿದ ಕಾರ್ಯಕ್ರಮಗಳಲ್ಲದೇ ಪಾದಯಾತ್ರೆ , ಬೀದಿನಾಟಕ, ನೃತ್ಯ, ಮಕ್ಕಳಿಗಾಗಿ ಅಪಾರ್ಟ್ಮೆಂಟ್‌ಗಳಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ಆದಷ್ಟು ನಾಗರಿಕರು ಮೇ 12ರಂದು ಮನೆಯಿಂದ ಹೊರಗಡೆ ಬಂದು ವೋಟ್ ಹಾಕಿದರೆ ಈ ತಂಡದ ಶ್ರಮ ಸಾರ್ಥಕ, ಒಂದು ಬಲಿಷ್ಠ ಭಾರತಕ್ಕಾಗಿ ತಮ್ಮ ಕರ್ತವ್ಯ ಪೂರಿಸಿದ ತೃಪ್ತಿ, ಈ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಸಹಸ್ರಾರು ಸ್ವಾತಂತ್ರ್ಯ ಯೋಧರಿಗೆ ಸಂದ ಗೌರವ ಎಂಬುದು ನಮ್ಮ ಆಶಾದಾಯಕ ಎಂದರು.

ಇದೇ ಸಂದರ್ಭದಲ್ಲಿ ಆಯೋಜಕರಾದ ಸಿಜಿಐ ಸಂಸ್ಥೆಯ ಗೋಪಾಲ್ ಕೇಸರಿ , ಸುನೀಲ್ , ಗೀರಿಶ್ ಹಲ್ವಾ, ಸುನೀಲ್ ರೆಡ್ಡಿ, ಚಿಂದನಂದ, ಪ್ರಮೋದ್, ರೇಣುಕಾ ಕೃಷ್ಣಮೂರ್ತಿ, ತನ್ನಮಯ್ ದಾಸ್, ಮನಜೀತ್ ಮುಂತಾದ ಯುವಕರ ತಂಡದವರು ಇದ್ದರು.

Please follow and like us:
0
http://bp9news.com/wp-content/uploads/2018/04/Avairnes-about-the-vote-BP9-News-Web-Portal.jpeghttp://bp9news.com/wp-content/uploads/2018/04/Avairnes-about-the-vote-BP9-News-Web-Portal-150x150.jpegBP9 Bureauಪ್ರಮುಖಬೆಂಗಳೂರುಬೆಂಗಳೂರು ಗ್ರಾಮಾಂತರಮಹದೇವಪುರ : ಬೆಂಗಳೂರಿನ ಐಟಿ ವೃತ್ತಿಪರರು ಐಟಿ ಜಾಗೃತ ಮತದಾರ ವೇದಿಕೆ ಮತ್ತು ಇತರ ನಾಗರಿಕರ ಸಂಘಗಳು ಒಟ್ಟು ಸೇರಿ, ಜನರಲ್ಲಿ ಚುನಾವಣೆಯ ಸಮಯದಲ್ಲಿ ಮತ ಚಲಾವಣೆಯ ಹಕ್ಕಿನ ಕುರಿತಾಗಿ ಜಾಗೃತಿ ಮೂಡಿಸುವಲ್ಲಿ ನಿರತವಾಗಿದ್ದಾರೆ. ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಸೆಂಟ್ರಲ್ ಮಾಲ್ ಅಂಗಳದಲ್ಲಿ ಗ್ರಾಹಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ವಿಶೇಷ ಅಭಿಯಾನವನ್ನು ಐಟಿ ಕ್ಷೇತ್ರದ ನಗರಿಗರು ಹಮ್ಮಿಕೊಂಡಿದರು. ತೊಂದರೆಯಾದಾಗ ಸರಕಾರವನ್ನು ದೂಷಿಸುವುದಷ್ಟೇ ಅಲ್ಲ, ಅರ್ಹ ಅಭ್ಯರ್ಥಿಗೆ ವೋಟ್ ಮಾಡಿ ಆಯ್ಕೆ...Kannada News Portal