ಮಹದೇವಪುರ : ಕಾಲ ಕಾಲಕ್ಕೆ, ಮಳೆ ಬೆಳೆ ಉತ್ತಮ ಆರೋಗ್ಯ ಕಾಪಾಡಬೇಕೆಂಬಾ ಉದ್ದೇಶದಿಂದ ಕಳೆದ 3 ವರ್ಷಗಳಿಂದ  ಗ್ರಾಮಸ್ಥರಿಂದ ಅಣ್ಣಮ್ಮದೇವಿಯ ಉತ್ಸವ ಹಾಗೂ ರಾಮನವಮಿ ಹಬ್ಬವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಆಚರಿಸುತ್ತೆವೆ ಎಂದು  ಆಯೋಜಕ ಅವಲಹಳ್ಳಿ ವಾರ್ಡ್ ಯುವ ಮೊರ್ಚಾ ಅಧ್ಯಕ್ಷ ಕಿಶೋರ್ ತಿಳಿಸಿದರು.

ಮಹದೇವಪುರ ಕ್ಷೇತ್ರದ ಅವಲಹಳ್ಳಿಯ ಮುನೇಶ್ವರ ದೇವಸ್ಥಾನದ ಮೈದಾನದಲ್ಲಿ ಗ್ರಾಮಸ್ಥರು ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ತಾಯಿ ಅಣ್ಣಮ್ಮದೇವಿಯ 3 ನೇ ವಾರ್ಷಿಕೋತ್ಸವ ಹಾಗೂ ಶ್ರೀರಾಮನವಮಿ ಹಬ್ಬದ ಪ್ರಯುಕ್ತ ವಿವಿಧ ಕೈಂಕಾರ್ಯಗಳನ್ನು ಹಮ್ಮಿಕೊಂಡಿದ್ದು. ಬೇಸಿಗೆ ಕಾಲದಲ್ಲಿ ನೆಡೆಯುವ ಹಬ್ಬವೂ ಕಾಲ ಕಾಲಕ್ಕೆ, ಮಳೆ ಬೆಳೆಯಾದರೆ ರೈತರು, ಪರಿಸರ, ಪ್ರಾಣಿಗಳಿಗೆ ನೀರು ದೊರೆಯುವುದರ ಜೊತೆಗೆ ಉತ್ತಮ ಆರೋಗ್ಯ ಕಾಪಾಡಬೇಕೆಂಬಾ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ಇದೇವೇಳೆ ಭಕ್ತಾದಿಗಳು  ಅನ್ನ ದಾಸೋಹ, ಪಾನಕ ,ಮಜ್ಜಿಗೆ, ವಿತರಣೆ, ವಿವಿಧ ಜನಪದ ಸಂಸ್ಕೃತಿಕ ಕಾರ್ಯಕ್ರಮಗಳಾದ ಡೊಳ್ಳು ಕುಣಿತ, ವೀರಗಾಸೆ, ಪಟ್ಟದ ಕುಣಿದ, ಕೀಲು ಕುದುರೆ, ದೇವರ ಕುಣಿತ, ಮಕ್ಕಳ ಅಟ್ಟಿಗೆ, ಹಾಗೂ ದೇವಿಯ ಹೂವಿನ ಪಕ್ಕಕ್ಕಿಯ ರಾಜಬೀದಿಗಳಲ್ಲಿ ಮೆರವಣಿಗೆಯನ್ನು ಗ್ರಾಮಸ್ಥರಿಂದ ಮತ್ತು ಆಯೋಜಕರಿಂದ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಧು, ಸುನಿಲ್, ವಾಸದೇವ, ಪ್ರಮೋದ್, ವೆಂಕಟೇಶ್, ನವೀನ್, ರೂಪೇಶ್, ಮನೋಜ್, ಭಾಜಪ ಕಾರ್ಯಕರ್ತರು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-02-at-8.38.36-AM-1-1024x576.jpeghttp://bp9news.com/wp-content/uploads/2018/04/WhatsApp-Image-2018-04-02-at-8.38.36-AM-1-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಮಹದೇವಪುರ : ಕಾಲ ಕಾಲಕ್ಕೆ, ಮಳೆ ಬೆಳೆ ಉತ್ತಮ ಆರೋಗ್ಯ ಕಾಪಾಡಬೇಕೆಂಬಾ ಉದ್ದೇಶದಿಂದ ಕಳೆದ 3 ವರ್ಷಗಳಿಂದ  ಗ್ರಾಮಸ್ಥರಿಂದ ಅಣ್ಣಮ್ಮದೇವಿಯ ಉತ್ಸವ ಹಾಗೂ ರಾಮನವಮಿ ಹಬ್ಬವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಆಚರಿಸುತ್ತೆವೆ ಎಂದು  ಆಯೋಜಕ ಅವಲಹಳ್ಳಿ ವಾರ್ಡ್ ಯುವ ಮೊರ್ಚಾ ಅಧ್ಯಕ್ಷ ಕಿಶೋರ್ ತಿಳಿಸಿದರು. ಮಹದೇವಪುರ ಕ್ಷೇತ್ರದ ಅವಲಹಳ್ಳಿಯ ಮುನೇಶ್ವರ ದೇವಸ್ಥಾನದ ಮೈದಾನದಲ್ಲಿ ಗ್ರಾಮಸ್ಥರು ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ತಾಯಿ ಅಣ್ಣಮ್ಮದೇವಿಯ 3 ನೇ ವಾರ್ಷಿಕೋತ್ಸವ ಹಾಗೂ ಶ್ರೀರಾಮನವಮಿ...Kannada News Portal