ಬೆಂಗಳೂರು : ಕೇಂದ್ರ ಸರ್ಕಾರವು ತಾನು ಹೇಳಿದಂತೆ ನಡೆದುಕೊಂಡಿಲ್ಲ ದೇಶ ಅಭಿವೃದ್ಧಿಯ ಕಾರ್ಯದಲ್ಲಿ ಹೆಚ್ಚು ಗಮನವಹಿಸುತ್ತಿಲ್ಲ ಎಂದು ಆರೋಪ ಮಾಡುತ್ತಿರುವ ವಿಪಕ್ಷಗಳು ಹೇಗಾದರು ಮಾಡಿ ನರೇಂದ್ರ ಮೋದಿ ಅವರನ್ನು
ಪ್ರಧಾನಿ ಹುದ್ದೆಯಿಂದ ಇಳಿಸಿಬೇಕು. ತೃತಿಯರಂಗವನ್ನು ಇನಷ್ಟು ಬಲಗೊಳಿಸಲು ಮತ್ತು ಅನೇಕ ವಿಚಾರಗಳ ಬಗ್ಗೆ
ಚರ್ಚೆ ನಡೆಸಲು ಗುರವಾರ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಆಂಧ್ರ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಚಂದ್ರಬಾಬು ನಾಯ್ಡು ಆಗಮಿಸಿ ಸಾಕಷ್ಟು ವಿಚಾರಗಳ ಕುರಿತಂತೆ ಚೆರ್ಚೆ ನಡೆಸಿರುವುದಾಗಿ  ತಿಳಿದುಬಂದಿದೆ.
ಭೇಟಿ ಬಳಿಕ ಹೆಚ್​​ಡಿಡಿ ಹಾಗೂ ಚಂದ್ರಬಾಬು ನಾಯ್ಡು  ಜಂಟಿಯಾಗಿ ಸುದ್ದಿಗೋಷ್ಠಿಯನ್ನು ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಏನು ಹೇಳಿದರು :

ಮೊದಲಿಗೆ ದೇವೇಗೌಡರು ಮಾತನಾಡಿ ಕೇಂದ್ರ ಸರ್ಕಾರವು ಜನವಿರೋಧಿಯ ನಡೆಯನ್ನು ಪಾಲಿಸುತ್ತಿದೆ, ಪ್ರಜಾಪ್ರಭುತ್ವವು ಸಂಕಷ್ಟವನ್ನು ಎದರಿಸುವ ಸನ್ನಿವೇಶ ಎದುರಾಗಿದೆ, ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ನಿಲ್ಲಬೇಕಿದೆ. ನಾವು ಒಟ್ಟಾಗಿ 2019ರ ಚುನಾವಣೆಯಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಿದೆ, ನಾವು ತೃತಿಯರಂಗವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸಮಾಡಬೇಕಾಗಿದೆ ಎಂದು ಹೇಳಿದರು.

ಇನ್ನು ಅವರು ಮಾತನಾಡುತ್ತಾ ಕೆಲದಿನಗಳಿಂದ ಬಂದ ಉಪಚುನಾವಣೆಯ ಫಲಿತಾಂಶವು ನಮ್ಮ ಎಲ್ಲರಿಗೂ ಖುಷಿತಂದೆ.ರಾಜ್ಯದ ಜನರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಅದರಿಂದಲೆ ನಮಗೆ ಬಾರೀ ಬಹುಮತದಿಂದ  ಗೆಲವುಗೆ ಕಾರಣವಾಗಿದ್ದಾರೆ ಎಂದು ಹೇಳಿದರು.
ಆಂಧ್ರ ಸಿಎಂ ಏನು ಹೇಳಿದರು: ಕರ್ನಾಟಕದಲ್ಲಿ  ಸಮ್ಮಿಶ್ರ ಸರ್ಕಾರವು ಸಾಕಷ್ಟು ಒಳ್ಳೆಕೆಲಸಗಳು ನಡೆಯುತ್ತಿವೆ
ಜನರಿಗೆ ಈ ಸರ್ಕಾರದ ಬಗ್ಗೆ ನಂಬಿಕೆ ಇದೆ. ನಮಗೆ ದೇವೇಗೌಡರ ಬಗ್ಗೆ ಗೌರವವಿದೆ, 1996ರಲ್ಲಿ ಅವರು ಪ್ರಧಾನಿಯಾಗಿದ್ದು ತೃತಯರಂಗದ ರಾಜಕೀಯ ನಡೆ ಮತ್ತು ಸಪೋರ್ಟರ್ ನಿಂದ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿಯಾಗಿಲ್ಲ, ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಕೈವಶಮಾಡಿಕೊಂಡಿದೆ.

ಇಡಿ, ಸಿಬಿಐ,ಐಟಿ ಈ ಎಲ್ಲಾ ಸಂಸ್ಥೆಗಳನ್ನು ದುರು ಉಪಯೋಗವನ್ನು ಮಾಡಿಕೊಂಡಿದೆ. ಸಿಬಿಐ ಮೇಲೆ ತನಿಖೆಯನ್ನು ನಡೆಸ ಬೇಕಾದ ಅನಿರ್ವಾಯತೆ ಎದುರಾಗಿದೆ ಸುಪ್ರೀಂ ಕೋರ್ಟ್​ 19ಕ್ಕೆ ತನಿಖೆಯ ವರದಿಯನ್ನು ನೀಡಬೇಕೆಂದು ಹೇಳಿದೆ.

ನಾವು ದೇಶದ ಹಿತದೃಷ್ಠಿಯಿಂದ ಒಂದಾಗುತ್ತಿದ್ದೇವೆ, ಕೇಂದ್ರಲ್ಲಿ ಮತ್ತೇ ತೃತಿಯರಂಗ ಒಟ್ಟಾಗಿ ಎನ್​ಡಿಯೆ ಸರ್ಕಾರವನ್ನು ಸೋಲಿಸಿ ನಾವು ಗೆಲವನ್ನು ಸಾಧಿಸಬೇಕು ಎಂದು ಹೇಳಿದರು. ಕಾಂಗ್ರೆಸ್​ ಪ್ರಭಲ ಪಕ್ಷವಾಗಿದೆ ನಾವು ಒಟ್ಟಾಗಿ ದೇಶದ ಪ್ರಸ್ತುತ ಸ್ಥಿತಿಯಿಂದ ಒಂದಾಗುತ್ತದ್ದೇವೆ ಎಂದು ಹೇಳಿದರು.

Please follow and like us:
0
http://bp9news.com/wp-content/uploads/2018/11/hdd-4.jpghttp://bp9news.com/wp-content/uploads/2018/11/hdd-4-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು : ಕೇಂದ್ರ ಸರ್ಕಾರವು ತಾನು ಹೇಳಿದಂತೆ ನಡೆದುಕೊಂಡಿಲ್ಲ ದೇಶ ಅಭಿವೃದ್ಧಿಯ ಕಾರ್ಯದಲ್ಲಿ ಹೆಚ್ಚು ಗಮನವಹಿಸುತ್ತಿಲ್ಲ ಎಂದು ಆರೋಪ ಮಾಡುತ್ತಿರುವ ವಿಪಕ್ಷಗಳು ಹೇಗಾದರು ಮಾಡಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಇಳಿಸಿಬೇಕು. ತೃತಿಯರಂಗವನ್ನು ಇನಷ್ಟು ಬಲಗೊಳಿಸಲು ಮತ್ತು ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಗುರವಾರ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಆಂಧ್ರ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಚಂದ್ರಬಾಬು ನಾಯ್ಡು ಆಗಮಿಸಿ ಸಾಕಷ್ಟು ವಿಚಾರಗಳ ಕುರಿತಂತೆ ಚೆರ್ಚೆ ನಡೆಸಿರುವುದಾಗಿ  ತಿಳಿದುಬಂದಿದೆ. ಭೇಟಿ ಬಳಿಕ...Kannada News Portal