ಬೆಂಗಳೂರು : ನಗರದ ಆಟೋ ಚಾಲಕರು ಇಷ್ಟು ದಿನ ಜನಸಾಮಾನ್ಯರ ಮೇಲೆ ದರ್ಪತೊರುತ್ತಿದ್ದರು. ಈಗ ಕಿರುತೆರೆಯ ಹಾಗೂ ಬೆಳ್ಳಿ ಪರದೆಯ ಕಲಾವಿದರ ಮೇಲೆ ತಮ್ಮ ಉಡಾಫೆ ತನ್ನವನ್ನು ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ  ಇಲ್ಲಿ ಒಬ್ಬ ಆಟೋಚಾಲಕ ನಟಿಯ ಮೇಲೆ  ಹಲ್ಲೆ ನಡೆಸಿದ್ದಾನೆ.
ಡಬಲ್​ ಚಾರ್ಜ್​ ಏಕೆ ತೆಗೆದುಕೊಳ್ಳುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ನಟಿಯ ಮೇಲೆ ಆಟೋ ಚಾಲಕ ಹಲ್ಲೆ ಮಾಡಿದ್ದಾನೆ.  ‘ಬ್ಲಡ್​ ಸ್ಟೋರಿ’ ಚಿತ್ರದ ನಾಯಕಿ ಆಶ್ರಿನ್ ಮೆಹ್ತಾ ಹಲ್ಲೆಗೊಳಗಾದ ನಟಿ. ಬೆಂಗಳೂರಿನ ಉತ್ತರಹಳ್ಳಿ ಬಳಿ ಈ ಘಟನೆ ನಡೆದಿದೆ. ಡಬಲ್​ ಚಾರ್ಜ್​ ತೆಗೆದುಕೊಳ್ಳಬೇಡ, ಸರಿಯಾದ ಚಾರ್ಜ್​ ತೆಗೆದುಕೋ ಎಂದು ಹೇಳಿದ್ದಕ್ಕೆ ನಟಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ ಅವ್ಯಾಚ ಶಬ್ಧಗಳಿಂದ  ನಿಂದಿಸಿದ್ದಾನೆ.

ಇತ್ತೀಚಿನ ದಿನಗಳಲ್ಲಿ ವಸೂಲಿ ವಿಚಾರದಲ್ಲಿ ಆಟೋ ಡ್ರೈವರ್​ಗಳ ಉಪಟಳ ಹೆಚ್ಚಾಗುತ್ತಿದೆ. ಬಂದ್​ ಸಂದರ್ಭದಲ್ಲಂತೂ  ಗ್ರಾಹಕರಿಂದ ಡಬಲ್​ ಚಾರ್ಜ್​ ವಸೂಲಿ ಮಾಡುತ್ತಾರೆ. ಆ ಸಮಯದಲ್ಲಿ ಬಸ್​ ಸೇವೆ ಇಲ್ಲದಿರುವುದರಿಂದ ಗ್ರಾಹಕರು ವಿಧಿ ಇಲ್ಲದೇ ಡಬಲ್ ಚಾರ್ಜ್​ ಕೊಟ್ಟು ಹೋಗುತ್ತಾರೆ. ಕಡಿಮೆ ಮಾಡಿಕೊಳ್ಳಿ ಎಂದು ಕೇಳಿದರೂ ಬಂದರೆ ಬನ್ನಿ, ಇಲ್ಲವಾದರೆ ಹೋಗಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಸಹ ಹೆಚ್ಚಿನ ಬಾಡಿಗೆ ಕೇಳುತ್ತಾರೆ. ಇಂತಹ ಸಮಯದಲ್ಲಿ ಆಟೋಚಾಲಕರು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸುತ್ತಾರೆ.

Please follow and like us:
0
http://bp9news.com/wp-content/uploads/2018/09/ashrin-1.pnghttp://bp9news.com/wp-content/uploads/2018/09/ashrin-1-150x150.pngBP9 Bureauಪ್ರಮುಖಬೆಂಗಳೂರುಸಿನಿಮಾvar domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); ಬೆಂಗಳೂರು : ನಗರದ ಆಟೋ ಚಾಲಕರು ಇಷ್ಟು ದಿನ ಜನಸಾಮಾನ್ಯರ ಮೇಲೆ ದರ್ಪತೊರುತ್ತಿದ್ದರು. ಈಗ ಕಿರುತೆರೆಯ ಹಾಗೂ ಬೆಳ್ಳಿ ಪರದೆಯ ಕಲಾವಿದರ ಮೇಲೆ ತಮ್ಮ ಉಡಾಫೆ ತನ್ನವನ್ನು ತೋರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ  ಇಲ್ಲಿ ಒಬ್ಬ...Kannada News Portal