ಬೆಂಗಳೂರು : ರಾಜ್ಯದ ಎಲ್ಲಡೆ ಉತ್ಸಾಹದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇಲ್ಲಿಯವರೆಗಿನ ಮತದಾನದ ಸರಾಸರಿ ಪ್ರಮಾಣ ಉತ್ತಮವಾಗಿಯೇ ಇದೆ. ಒಟ್ಟು ರಾಜ್ಯದಲ್ಲಿ 1 ಗಂಟೆವರೆಗೆ 40% ಮತದಾನವಾಗಿದ್ದು, ಉಡುಪಿ 50% ನೊಂದಿಗೆ ಪ್ರತಮ ಸ್ಥಾನದಲ್ಲಿದೆ.

ಆದರೆ ರಾಜ್ಯ ರಾಜಧಾನಿ ಬೆಂಗಳೂರಿನ ಮತದಾರರು ಮಾತ್ರ ಮತದಾನ ಪ್ರಕ್ರಿಯೆಯಲ್ಲಿ ಸ್ವಲ್ಪ ಹಿಂದಿದ್ದಾರೆ. ಯಾಕೋ ಮತ ಹಾಕಲು ಹಿಂದೇಟು ಹಾಕುತ್ತಿದ್ದಂತೆ ಕಾಣುತ್ತಿದ್ದು, ಬೆಂಗಳೂರು ನಗರದಲ್ಲಿ 27% ಮತದಾನದೊಂದಿಗೆ ಅತೀ ಕಳಪೆ ಪ್ರದರ್ಶನ  ತೊರಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಸೇರಿದಂತೆ ಟೋಟಾಲ್​​ ಬೆಂಗಳೂರು ಮತ ಹಾಕುವಲ್ಲಿ ನೀರಸ ಪ್ರತಿಕ್ರಿಯೆ ತೋರಿಸುತ್ತಿದೆ.

ವಿದ್ಯಾವಂತರು ಹೆಚ್ಚಿರುವ ಬೆಂಗಳೂರಿನಲ್ಲಿ  ಮತ ಹಾಕಲು ಹಿಂದೇಟು ಹಾಕುತ್ತಿರುವುದು, ಅದರಲ್ಲೂ ಯುವಕರು ಮತಗಟ್ಟೆಯತ್ತ ಹೊಗದೆ ಇರುವುದು ವಿಷಾಧನೀಯವಾದರೆ, ವಯಸ್ಸಾದವರು ಆಸಕ್ತಿಯಿಂದ ಮತಹಾಕಲು ತೆರಳುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ.ಮತದಾನಕ್ಕೆ ಇನ್ನು ಕೆಲವು ಗಂಟೆಗಳು  ಮಾತ್ರ ಬಾಕಿ ಇದ್ದು, ಬೆಂಗಳೂರಿಗರು ಇನ್ಮೆಲಾದರೂ ಅಲ್ಪ ಚುರುಕು ಗೊಳ್ಳಲಿದ್ದಾರೆ ಎಂದು ನೋಡಬೇಕಿದೆ.

 

Please follow and like us:
0
http://bp9news.com/wp-content/uploads/2018/05/hqdefault-4.jpghttp://bp9news.com/wp-content/uploads/2018/05/hqdefault-4-150x150.jpgBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಬೆಂಗಳೂರು : ರಾಜ್ಯದ ಎಲ್ಲಡೆ ಉತ್ಸಾಹದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇಲ್ಲಿಯವರೆಗಿನ ಮತದಾನದ ಸರಾಸರಿ ಪ್ರಮಾಣ ಉತ್ತಮವಾಗಿಯೇ ಇದೆ. ಒಟ್ಟು ರಾಜ್ಯದಲ್ಲಿ 1 ಗಂಟೆವರೆಗೆ 40% ಮತದಾನವಾಗಿದ್ದು, ಉಡುಪಿ 50% ನೊಂದಿಗೆ ಪ್ರತಮ ಸ್ಥಾನದಲ್ಲಿದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನ ಮತದಾರರು ಮಾತ್ರ ಮತದಾನ ಪ್ರಕ್ರಿಯೆಯಲ್ಲಿ ಸ್ವಲ್ಪ ಹಿಂದಿದ್ದಾರೆ. ಯಾಕೋ ಮತ ಹಾಕಲು ಹಿಂದೇಟು ಹಾಕುತ್ತಿದ್ದಂತೆ ಕಾಣುತ್ತಿದ್ದು, ಬೆಂಗಳೂರು ನಗರದಲ್ಲಿ 27% ಮತದಾನದೊಂದಿಗೆ ಅತೀ ಕಳಪೆ...Kannada News Portal