ಬೆಂಗಳೂರು : ಪೆಟ್ರೋಲ್​​, ಡೀಸೆಲ್​​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​​ ಇಂದು ಭಾರತ್​​ ಬಂದ್​ಗೆ ಕರೆ ನೀಡಿದೆ. 21ಕ್ಕೂ ಅಧಿಕ ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ. ಬಂದ್​​ಗೆ  ರಾಜ್ಯಾದ್ಯಂತ ಉತ್ತಮ ಪ್ರಕಿತ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್​ ನಡೆಯಲಿದೆ. ಇಂದು ಮುಂಜಾನೆಯಿಂದಲೇ KSRTC, BMTC ಬಸ್​​ಗಳು ರಸ್ತೆಗೆ ಇಳಿದಿಲ್ಲ. ಇನ್ನು ಒಟ್ಟಾರೆ ರಾಜ್ಯದ ಬಂದ್​​ ಚಿತ್ರಣದ ವಿವರ ಇಲ್ಲಿದೆ.

ಬಳ್ಳಾರಿ

ಭಾರತ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಶಾಸಕರಾದ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ರೈಲ್ವೆ ಸ್ಟೇಷನ್​​ನಿಂದ  ರಾಯಲ್ ವೃತ್ತದ ವರೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕುದರೆ ಸವಾರಿ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಇನ್ನೊಂದೆಡೆ ಬಳ್ಳಾರಿ ಪಾಲಿಕೆ ಸದಸ್ಯ ವೆಂಕಟರಮಣ ಅಸುಂಡಿ ನೇತ್ರತ್ವದಲ್ಲಿ ಎತ್ತಿನ ಬಂಡಿ ಮೇಲೆ ವಾಹನಗಳುನ್ನು ಇಟ್ಟುಧರಣಿ ನಡೆಸಿದರು.

ಚಿಕ್ಕೋಡಿ


ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇಂದು ಭಾರತ್ ಬಂದ್​​ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಅಥಣಿ ಪಟ್ಟಣ ಸೇರಿದಂತೆ ವಿವಿಧೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಬಸ್​​, ಆಟೋಗಳ ಓಡಾಡುತ್ತಿವೆ. ಖಾಸಗಿ ಬಸ್​​ಗಳು ಈ ಬಂದ್​ಗೆ ಬೆಂಬಲ ನೀಡಿಲ್ಲ. ಅಂಗಡಿ ಮುಂಗಟ್ಟು, ಹೋಟೆಲ್​​, ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಸಂಘಟನೆಗಳು ರಸ್ತೆಗಿಳಿದಿಲ್ಲ. ಚಿಕ್ಕೋಡಿ ಕ್ಷೇತ್ರದಲ್ಲಿ ನಾಲ್ಕು ಬಿಜೆಪಿ ಹಾಗೂ ನಾಲ್ಕು ಕಾಂಗ್ರೆಸ್ ಶಾಸಕರಿದ್ದಾರೆ. ಆಯಾ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು. ಬಂದ್ ಹಿನ್ನೆಲೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ರಾಯಚೂರು

ತೈಲಬೆಲೆ ಏರಿಕೆ ಹಿನ್ನೆಲೆ ಭಾರತ ಬಂದ್​​ಗೆ ಕರೆಗೆ ರಾಯಚೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆದರೆ ಇನ್ನು ಕೆಲವರು ತೆಗೆದಿದ್ದಾರೆ. ಸರ್ಕಾರಿ ಬಸ್​​​ಗಳು ರಸ್ತೆಗಿಳಿಯದ ಕಾರಣ  ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಪೆಟ್ರೋಲ್ ಬಂಕ್ ಗಳು ಎದಿನಂತೆ  ಕಾರ್ಯನಿರ್ವಹಿಸುತ್ತಿವೆ. ಮತ್ತೊಂದು ಕಡೆ ಸಾರಿಗೆ ಇಲಾಖೆ ಸಿಬ್ಬಂದಿಗಳು ಬಸ್ ಸಂಚಾರ ಇಲ್ಲದೆ ಊರಿಗೆ ಹೋಗಲು ಪರದಾಡುತ್ತಿದ್ದಾರೆ.ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ

ತೈಲ ಬೆಲೆ ಏರಿಕೆ ಹಿನ್ನೆಲೆ ರಸ್ತೆ ಬಂದ್ ಮಾಡಿ ಕೆಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ದೇವದುರ್ಗ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ರಸ್ತೆ ಸಂಚಾರ ಬಂದ್ ಮಾಡಿರುವ ಪ್ರತಿಭಟನಾಕಾರರು, ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಸಿರವಾರ- ದೇವದುರ್ಗ ಮುಖ್ಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು.

ಮೈಸೂರು

ತೈಲ ದರ ಏರಿಕೆ ಖಂಡಿಸಿ ಭಾರತ್ ಬಂದ್ ಹಿನ್ನೆಲೆ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಮೈಸೂರಿನಲ್ಲಿ  ವಿನೂತನ ಪ್ರತಿಭಟನೆ ನಡೆಸಲಾಯಿತು.ದ್ವಿಚಕ್ರ ವಾಹನಗಳನ್ನು ಹರಾಜು ಮಾಡುವ ಅಣುಕು ಪ್ರದರ್ಶನ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದರು. ಕೇವಲ 100ರೂಗಳಿಗೆ ಬೈಕ್ ಹರಾಜು ಮಾಡಿ ಕೇಂದ್ರದ ವಿರುದ್ಧ ಆಕ್ರೋಶ.ನಗರದ ಅಗ್ರಹಾರದ ವೃತ್ತದ ಬಳಿ ಪ್ರತಿಭಟನೆ.ಕೂಡಲೇ ಪೆಟ್ರೋಲ್ ಬೆಲೆಯನ್ನು ಇಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಚಾಮರಾಜನಗರ

ಕೇಂದ್ರ ಸರ್ಕಾರದ ತೈಲಬೆಲೆ ಏರಿಕೆ ವಿರೋಧಿಸಿ ಇಂದು ಭಾರತ್ ಬಂದ್ ಮಾಡಲಾಗುತ್ತಿದ್ದು,ಗಡಿಜಿಲ್ಲೆ ಚಾಮರಾಜನಗರದಲ್ಲಿ ಬಹುತೇಕ ಯಶಸ್ವಿಯಾಗಿದೆ.ಲಾರಿ ಮಾಲೀಕರು, ಆಟೋ ಚಾಲಕರ ಸಂಘ,ಹೊಟೆಲ್ ಮಾಲೀಕರು, ಚಿತ್ರಮಂದಿರ ಮಾಲೀಕರು, ಜವುಳಿ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಸಹ ಬಂದಿಗೆ ಸಹಕರಿಸಿದ್ದಾರೆ.

ನಮ್ಮ ಮಿತ್ರ ಪಕ್ಷಗಳಾದ ಬಿಎಸ್ಪಿ, ಜೆಡಿಎಸ್, ಎಸ್​​ಡಿಪಿಐ ಸೇರಿದಂತೆ ಅನೇಕರು ಕೂಡ ನಮಗೆ ಸಾಥ್ ನೀಡಿದ್ದಾರೆ. ಹಾಗಾಗಿ ನಾವೂ ಕೂಡ, ಬಂದ್ ಯಶಸ್ವಿಯಾಗಲೂ ಸಂಜೆಯ ವರೆಗೆ ಪ್ರಯತ್ನ ಮಾಡುವುದಾಗಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ರೈಲು ಪ್ರಯಾಣಿಕರಿಗೆ ತಟ್ಟದ ಬಂದ್ ಬಿಸಿ

ಭಾರತ ಬಂದ್ ಹಿನ್ನೆಲೆ, ರೈಲು ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಲಿಲ್ಲ.ಎಂದಿನಂತೆ ರೈಲು ಸಂಚಾರ ಆರಂಭವಾಗಿದೆ.ಆದ್ದರಿಂದ ಬಸ್ ನಿಲ್ದಾಣಗಳಿಂದ ರೈಲು ನಿಲ್ದಾಣದತ್ತ ಮುಖ ಮಾಡುತ್ತಿರುವ ಪ್ರಯಾಣಿಕರು.ರೈಲ್ವೆ ಆಟೋ, ಟ್ಯಾಕ್ಸಿ ಸೇವೆ ಯಥಾಸ್ಥಿತಿಯಲ್ಲಿದೆ. ರೈಲ್ವೆ ನಿಲ್ದಾಣದ ಸುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ.

ಧಾರವಾಡ

ತೈಲ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಇಂದು ಕಾಂಗ್ರೆಸ್ ಭಾರತ್ ಬಂದ್ಗೆ ಕರೆ ಕೊಟ್ಟಿದೆ. ಬಂದ್ಗೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿವೆ. ಇನ್ನು ನಗರದ ಜುಬ್ಲಿ ಸರ್ಕಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ನಗರದಲ್ಲಿ ಪೆಟ್ರೋಲ್ ಬಂಕ್ ಬಂದ್ ಮಾಡಿಸಿದ ಪ್ರತಿಭಟನಕಾರರು ಬಸ್ ಸಂಚಾರ ತಡೆದು ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು.

Please follow and like us:
0
http://bp9news.com/wp-content/uploads/2018/09/WhatsApp-Image-2018-09-10-at-9.25.07-AM-1024x512.jpeghttp://bp9news.com/wp-content/uploads/2018/09/WhatsApp-Image-2018-09-10-at-9.25.07-AM-150x150.jpegBP9 Bureauಚಾಮರಾಜನಗರಪ್ರಮುಖಬಳ್ಳಾರಿಬೆಳಗಾವಿಮೈಸೂರುರಾಜಕೀಯರಾಯಚೂರುಹುಬ್ಬಳ್ಳಿ-ಧಾರವಾಡಬೆಂಗಳೂರು : ಪೆಟ್ರೋಲ್​​, ಡೀಸೆಲ್​​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​​ ಇಂದು ಭಾರತ್​​ ಬಂದ್​ಗೆ ಕರೆ ನೀಡಿದೆ. 21ಕ್ಕೂ ಅಧಿಕ ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ. ಬಂದ್​​ಗೆ  ರಾಜ್ಯಾದ್ಯಂತ ಉತ್ತಮ ಪ್ರಕಿತ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್​ ನಡೆಯಲಿದೆ. ಇಂದು ಮುಂಜಾನೆಯಿಂದಲೇ KSRTC, BMTC ಬಸ್​​ಗಳು...Kannada News Portal