ಬೆಂಗಳೂರು :  ರಾಜ್ಯದಲ್ಲಿ ಎರಡುದಿನಗಳ ರಾಜಕೀಯ ಹೈಡ್ರಾಮಾದ ನಂತರ ಈಗ ಬಿಜೆಪಿಯಿಂದ ಬಿಎಸ್​ವೈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಬಿಜೆಪಿಗೂ ಸ್ಪಷ್ಟಬಹುಮತ ಇಲ್ಲದ ಕಾರಣ, ಬಹುಮತ ಸಾಭೀತು ಪಡಿಸಲು ರಾಜ್ಯಪಾಲರು 15ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ ಬಹುಮತಕ್ಕೆ 112 ಸಂಖ್ಯೆ ಬೇಕಾಗಿದ್ದು, ಬಿಜೆಪಿ 104 ಸ್ಥಾನಗಳನ್ನ ಮಾತ್ರ ಗೆದ್ದಿದೆ. ಆದ್ದರಿಂದ ಬಿಜೆಪಿ ನಾಯಕರಿಗೆ ಮ್ಯಾಜಿಕ್​​​ ನಂಬರ್​​​ ತಲುಪುವ ಚಿಂತೆ ಈಗ ಎದುರಾಗಿದೆ.

ಏನಾದರೂ ಮಾಡಿ ಬಹುಮತ ಸಾಭೀತು ಪಡಿಸಲು ನಾಯಕರು ಅನೇಕ ಪ್ರಯತ್ನಪಡುತ್ತಿದ್ದು, ಕಾಂಗ್ರೆಸ್​​​ ಮತ್ತು ಜೆಡಿಎಸ್​​ ಅತೃಪ್ತ ಶಾಸಕರಿಗೆ ಗಾಳ ಹಾಕಿ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ.ಆಗಿದ್ದಾಗಿಯೂ ಸಂಪರ್ಕದಲ್ಲಿರುವ ಶಾಸಕರು ಬಿಜೆಪಿ ನಾಯಕರ ಜೊತೆ ಮಾತನಾಡುತ್ತಿದ್ದಾರೆ ಹೊರತು ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಇನ್ನೂ ಸಂಪೂರ್ಣ ಭರವಸೆಯನ್ನ ಕೊಡುತ್ತಿಲ್ಲವಂತೆ. ಇದರಿಂದ ಬಿಜೆಪಿ ರಾಜ್ಯನಾಯಕರಿಗೆ,ಉಸ್ತುವಾರಿಗಳಿಗೆ ಪರದಾಟದ ಪರಿಸ್ಥಿತಿ ಎದುರಾಗಿದೆ.

ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಷಾ, ರಾಜ್ಯದ ನಾಯಕರಿಗೆ ಸಂಜೆಯೊಳಗೆ ಬಿಜೆಪಿಗೆ ಬೆಂಬಲಿಸುವವರ ಪಟ್ಟಿಯನ್ನ ದೆಹಲಿಗೆ ಕಳುಹಿಸುವಂತೆ ಆದೇಶ ಕೊಟ್ಟಿದ್ದಾರಂತೆ.ಇದರಿಂದ ಕಂಗಾಲಾಗಿರುವ ನಾಯಕರು, ಈ ಬಗ್ಗೆ ಚರ್ಚಿಸಲು ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್​​ ಜಾವ್ಡೇಕರ್​​, ಕೇಂದ್ರ ಸಚಿವರಾದ ಧರ್ಮೇಂದ್ರಪ್ರಧಾನ್​​​ , ಜೆಪಿ ನಡ್ಡಾ, ಬಿಎಸ್​​​​ವೈ , ರಾಜ್ಯ ನಾಯಕರಾದ ಶೋಭಾಕರಂದ್ಲಾಜೆ, ಶ್ರೀರಾಮುಲು ಸೇರಿದಂತೆ ಅನೇಕ ನಾಯಕರು ತುರ್ತು ಸಭೆಯನ್ನ ಆರಂಭಿಸಿದ್ದಾರೆ ಎಂದು ಉನ್ನತಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಬಿಜೆಪಿಗೆ ಬಹುಮತ ಸಾಭೀತಿಗೆ ಇರುವ ಸಮಸ್ಯೆಗಳು, ಆಪರೇಷನ್​ ಕಮಲಕ್ಕೆ ಇರುವ ತೊಡಕುಗಳನ್ನ ಸಮಗ್ರವಾಗಿ ಚರ್ಚಿಸಿ, ಬಹುಮತಕ್ಕೆ ಬೇಕಾಗುವ ತಂತ್ರವನ್ನ ಹೆಣೆಯಲಿದ್ದಾರೆ ಎಂದು ತಿಳಿದು ಬಂದಿದೆ.

Please follow and like us:
0
http://bp9news.com/wp-content/uploads/2018/05/Prakash-javadekar-Reuters-380.jpghttp://bp9news.com/wp-content/uploads/2018/05/Prakash-javadekar-Reuters-380-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು :  ರಾಜ್ಯದಲ್ಲಿ ಎರಡುದಿನಗಳ ರಾಜಕೀಯ ಹೈಡ್ರಾಮಾದ ನಂತರ ಈಗ ಬಿಜೆಪಿಯಿಂದ ಬಿಎಸ್​ವೈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಬಿಜೆಪಿಗೂ ಸ್ಪಷ್ಟಬಹುಮತ ಇಲ್ಲದ ಕಾರಣ, ಬಹುಮತ ಸಾಭೀತು ಪಡಿಸಲು ರಾಜ್ಯಪಾಲರು 15ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ ಬಹುಮತಕ್ಕೆ 112 ಸಂಖ್ಯೆ ಬೇಕಾಗಿದ್ದು, ಬಿಜೆಪಿ 104 ಸ್ಥಾನಗಳನ್ನ ಮಾತ್ರ ಗೆದ್ದಿದೆ. ಆದ್ದರಿಂದ ಬಿಜೆಪಿ ನಾಯಕರಿಗೆ ಮ್ಯಾಜಿಕ್​​​ ನಂಬರ್​​​ ತಲುಪುವ ಚಿಂತೆ ಈಗ ಎದುರಾಗಿದೆ. ಏನಾದರೂ ಮಾಡಿ ಬಹುಮತ ಸಾಭೀತು ಪಡಿಸಲು...Kannada News Portal